
ಕಾಂಗ್ರೆಸ್ ನವರಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ : ಜನಾರ್ಧನ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಗಾಲಿ ಜನಾರ್ದನ್ ರೆಡ್ಡಿ ಅವರ ನೇತೃತ್ವದಲ್ಲಿ ಮುಂದಿನ ತಿಂಗಳು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಕಾರ್ಯ ಆರಂಭವಾಗಿದೆ. ಪ್ರಚಾರವು ಸ್ವಾಮಿ ಹಳ್ಳಿ, ಯರದಮ್ಮನಹಳ್ಳಿ, ಮತ್ತು ನಾಗೇನಹಳ್ಳಿಯಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಗಳಿಗೆ ಬಂದ ಮುಖಂಡರನ್ನು ಗ್ರಾಮಸ್ಥರು ಡೊಳ್ಳು ಮತ್ತು ತಮಟೆವಾಧ್ಯಗಳ ಮೂಲಕ ಸಮರ್ಪಕವಾಗಿ ಸ್ವಾಗತಿಸುತ್ತಿದ್ದಾರೆ. ನಾಯಕರು ದೇವತೆಗಳಿಗೆ ನಮಿಸಿ, ಪಾದಯಾತ್ರೆ ನಡೆಸಿ, ಮನೆಮನೆಗೆ ಹೋಗಿ ಮತಯಾಚನೆ ಮಾಡುವ ಮೂಲಕ ಕ್ಷೇತ್ರದಲ್ಲಿ ತಮ್ಮನ್ನು ಪ್ರಚಾರ ಮಾಡುತ್ತಿದ್ದಾರೆ.
ಈ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ, ಸಂಡೂರು ಕ್ಷೇತ್ರದ ಮತದಾರರನ್ನು ಉದ್ದೇಶಿಸಿ, “ನೀವೆಲ್ಲರೂ ಬಿಜೆಪಿ ಗೆ ಮತ ನೀಡಿ ಈ ಚುನಾವಣೆಯಲ್ಲಿ ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಗೆಲುವನ್ನು ಕೊಡುಗೆಯಾಗಿ ನೀಡೋಣ” ಸಂಡೂರಿನ ಅಭಿವೃದ್ಧಿಗೆ ಹಾದಿ ಮಾಡಿಕೊಡಿ ಕಳೆದ ೧೫ ವರ್ಷಗಳ ಹಿಂದೆ ಸಂಡೂರು ಯಾವ ರೀತಿ ಇದೆಯೋ ಈಗಲೂ ಅದೇ ರೀತಿ ಇದೆ ಯಾವುದೇ ಅಭಿವೃದ್ಧಿ ಹೊಂದಿಲ್ಲ ಹಾಗಾಗಿ ಅಭಿವೃದ್ಧಿಗಾಗಿ ಈ ಸಲ ಬಿಜೆಪಿಯನ್ನು ಗೆಲ್ಲಿಸಿ ಎಂದು ಹೇಳಿದರು.
ಬಿಜೆಪಿ ಸರ್ಕಾರ ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕಾಗಲೇ ಅವಶ್ಯಕತೆಯಿಲ್ಲ. ಇಲ್ಲಿ ಗಣಿಗಾರಿಕೆಯಿಂದ ಸಂಗ್ರಹವಾಗುವ ಖನಿಜ ಅಭಿವೃದ್ಧಿ ನಿಧಿ, ಕೆಎಂಇಆರ್ಸಿ ಫಂಡ್, ಮತ್ತು ಕೈಗಾರಿಕಾ ಅSಖ ಫಂಡ್ಸ್ನಲ್ಲಿ ಸಾವಿರಾರು ಕೋಟಿ ರೂ. ಇದೆ. ಈ ಹಣದಿಂದ ಸಾಕಷ್ಟು ಅಭಿವೃದ್ಧಿ ಸಾಧಿಸಬಹುದು. ಆದರೆ ಕಾಂಗ್ರೆಸ್ ಈ ಹಣವನ್ನು ಸರಿಯಾಗಿ ಬಳಕೆ ಮಾಡದೆ ಜನರಿಗೆ ಅನ್ಯಾಯ ಮಾಡಿದ್ದಾರೆ. ಅವರನ್ನು ಮತ ನೀಡದೆ ಪಾಠ ಕಲಿಸಲು ಕರೆ ನೀಡುತ್ತೇನೆ ಎಂದರು.
ಅಭ್ಯರ್ಥಿ ಬಂಗಾರು ಹನುಮಂತ “ನಾಗೇಂದ್ರ ಅವರು ಸಚಿವರಾಗಿದ್ದಾಗ, ವಾಲ್ಮೀಕಿ ನಿಗಮದ ೧೮೭ ಕೋಟಿ ರೂ. ಹಣವನ್ನು ಅಕ್ರಮವಾಗಿ ಬಳಸಿಕೊಂಡು ಕಳೆದ ಎಂಪಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ನಮ್ಮ ಹಣ” ಎಂದು ಆರೋಪಿಸಿದರು. ಅವರು ಬೋಧಿಸುತ್ತಾ, “ಈ ಬಾರಿಗೆ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಗೆ ಮತ ನೀಡಿ, ಕಾಂಗ್ರೆಸ್ ಅಭ್ಯರ್ಥಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ ದಯವಿಟ್ಟು ಬಿಜೆಪಿಯನ್ನು ಗೆಲ್ಲಿಸುವ ಕೆಲಸ ತಾವು ಮಾಡಬೇಕು” ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಲ್ಲಾ ಉಪಾಧ್ಯಕ್ಷ ಜಿಟಿ ಪಂಪಾಪತಿ, ಬಿಜೆಪಿ ಮಂಡಲ ಅಧ್ಯಕ್ಷ ನಾನಾಸಾಬ್ ನೀಕ್ಕಂ, ಮುಖಂಡ ತಿಮ್ಮಾರೆಡ್ಡಿ, ಉಮಾರಾಜ್, ತಿರುಮಲ, ಏರಿಸ್ವಾಮಿ ರೆಡ್ಡಿ, ಸೋಮನಗೌಡ, ಅಂಬಣ್ಣ, ಮಲ್ಲೇಶ್, ಹನುಮೇಶ್ ಉಪ್ಪಾರ್, ಅಸುಂಡಿ ಸೂರಿ ಮತ್ತು ಕಾರ್ಯಕರ್ತರಿದ್ದರು.