
ಆಶಾ ಕಾರ್ಯಕರ್ತೆಗೆ ಶ್ರದ್ದಾಂಜಲಿಸಲ್ಲಿಸಿದ ಡಾ.ಸವಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 21- ನಗರದ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ೨೩ನೇ ವಾರ್ಡ್ ಗುಂಡಮ್ಮ ಕ್ಯಾಂಪ್‌ನ ಕ್ರಿಯಾಶೀಲ ಆಶಾ ಕಾರ್ಯಕರ್ತೆ ರಿಹಾನ ಬೇಗಂ ಅನಾರೋಗ್ಯದಿಂದ ನಿಧನರಾಗಿದ್ದಕ್ಕೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು.
ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ಮಾತನಾಡಿ, ಆಶಾಕಾರ್ಯಕರ್ತೆ ರಿಹಾನ್ ಇವರು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ತನ್ನ ಕುಟುಂಬವನ್ನು ಆಸರೆಯಾಗಿ ಇದ್ದವರು ಇಂದು ತನ್ನ ಎರಡು ಹೆಣ್ಣು ಮಕ್ಕಳನ್ನು ಅನಾಥ ಮಾಡಿದಳು. ತನ್ನ ವಾರ್ಡ್ನಲ್ಲಿ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡಿದ್ದಾಳೆ, ಅದರ ಜೊತೆಗೆ ತನ್ನ ಕೈಯಲ್ಲಿ ಸಾಕಷ್ಟು ಟಿಬಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಿ ಸಂಪೂರ್ಣವಾಗಿ ಗುಣಮುಖವಾಗಿ ಮಾಡಿದ ಕೀರ್ತಿ ರಿಹಾನ ಅವರಿಗೆ ಸಲ್ಲುತ್ತದೆ, ಜೀವನವನ್ನು ಲೆಕ್ಕಿಸದೆ ಬೇರೆ ಕುಟುಂಬಗಳ ರಕ್ಷಣೆ ಮಾಡುವಂತಹ ವೀರಕೇಸರಿ ಕ್ರಿಯಾಶೀಲ ಆಶಾ ಕಾರ್ಯಕರ್ತೆ ರಿಹಾನ್ ಎಂಬುವುದರಲ್ಲಿ ಎರಡು ಮಾತಿಲ್ಲ. ರಿಹಾನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು ಉಚಿತ ಶಿಕ್ಷಣ ಕೋಡಿಸಿ ಉದ್ಯೋಗ ಕೊಡಿಸುತ್ತನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಗೌರಿಶಂಕರ, ತಾಲೂಕು ಆಡಳಿತ ಹಿರಿಯ ಅಧಿಕಾರಿ ವಿಜಯಪ್ರಸಾದ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ರಮೇಶ, ಆಶಾ ಮೇಲ್ವಿಚಾರಕಿ ಮಂಜುಳಾ, ಆರೋಗ್ಯ ಸಿಬ್ಬಂದಿ ಶಿವಾನಂದ ರಾಯ್ಕರ್, ಸರಸ್ವತಿ, ಹನುಮಂತಿ, ಶಿವಗಂಗಾ, ಗಿರಿಜಾ, ಆಶಾ ಸಂಘ ನಗರ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಆಚಾರ್ಯ, ಆಶಾ ಕಾರ್ಯಕರ್ತೆ ಗೌಸೀಯಾ, ದೀಪಾ, ಆಪ್ರೀನ್, ಹನುಮಕ್ಕ, ಲಲಿತಾ ಹಿರೇಮಠ, ಜ್ಯೋತಿ, ಮೀನಾಕ್ಷಿ, ಉಪಸ್ಥಿತರಿದ್ದರು.