2

ST ಬಾಲಕಿಯರ ಹಾಸ್ಟೆಲ್‌ಗೆ ಮೂಲಭೂತ ಸೌಲಭ್ಯ ಕಲ್ಪಸಿಲು ಆಗ್ರಹಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ನಗರದ ಪಾಂಡುರ0ಗ ದೇವಸ್ಥಾನ ಹಿಂಭಾಗದಲ್ಲಿರುವ ಪರಿಶಿಷ್ಟ ಪಂಗಡ ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಾಡಿಗೆ ಬಿಲ್ಡಿಂಗ್ ಸೌಲಭ್ಯಕ್ಕಾಗಿ ಮತ್ತು ಹಾಗೂ ಸರಕಾರದಿಂದ ಬರವು ಸೌಲಭ್ಯಗಳನ್ನು ವಿದ್ಯಾರ್ಥಿಗಳು ಕೇಳಿದರೆ ವಿದ್ಯಾರ್ಥಿಗಳ ಜೊತೆಗೆ ಅನುಚಿತವಾಗಿ ವರ್ತನೆ ಮಾಡುತ್ತಿರುವ ವಾರ್ಡನ್ ನನ್ನು ಸೇವೆಯಿಂದ ವಜಾ ಮಾಡಲು ಆಗ್ರಹಿಸಿ ಇಂದು ಕೊಪ್ಪಳ ನಗರದ ಹಾಸ್ಟೆಲ್ ಮುಂಭಾಗದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SಈI) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ ಮಾತನಾಡಿ ಹಾಸ್ಟೆಲ್ ನಲ್ಲಿ ಸುಮಾರು ೩೫೦ ಅಧಿಕ ವಿದ್ಯಾರ್ಥಿನಿಯರ ಇದ್ದು ಕೊಠಡಿಗಳ ಕೊರತೆಯಿಂದಾಗಿ ವಿಧ್ಯಾಭ್ಯಾಸ ಮಾಡಲು ಹಾಗೂ ಮಲಗಲು ಜಾಗ ಆಗುತ್ತಿಲ್ಲ ಇದು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆದ್ದರಿಂದ ಸಿ.ಸಿ ಕ್ಯಾಮರಾ ಹಾಕಿಸಿಬೇಕು, ಸರಕಾರ ಇಲಾಖೆಯ ನಿಯಮದ ಪ್ರಕಾರ ಆಹಾರ ಮೇನು ಕೊಡುತ್ತಿಲ್ಲ, ಎರಡು ತಿಂಗಳನಿAದ ಬಾಳೆಹಣ್ಣು, ಮೊಟ್ಟೆ ಕೊಟ್ಟಿರವುದಿಲ್ಲ ಕಳಪೆ ಮಟ್ಟದ ತರಕಾರಿ ಹಾಕಿ ಅಡುಗೆ ಮಾಡುತ್ತಾರೆ ಇದ್ದರಿಂದ ನಮ್ಮಗೆ ಆರೋಗ್ಯ ಸಮಸ್ಯೆ ಆಗುತ್ತದೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿರುವುದಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ ಸರಕಾರ ಬಡ ವಿದ್ಯಾರ್ಥಿಗಳ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಕಲ್ಪಸಿಲು ಹಾಗೂ ಗುಣಮಟ್ಟದ ಆಹಾರ ಕೊಡಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ ಆದರೆ ಅದು ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಮುಂಖಡರಾದ ಬಾಲಜಿ, ಶರೀಫ್, ವಿದ್ಯಾರ್ಥಿನಿಯರಾದ ಪೂಜಾ,ಸಂಗೀತ,ಶಶಿಕಲಾ, ವೀಣಾ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!