
ಮತ್ಸ್ಯವಾಹಿನಿ ತ್ರಿಚಕ್ರ ವಾಹನದ ಪರವಾನಿಗೆಗಾಗಿ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಕೊಪ್ಪಳ ಜಿಲ್ಲೆಯ ಮೀನುಗಾರಿಕೆ ಇಲಾಖಾವತಿಯಿಂದ 2023-24 ನೇ ಸಾಲಿನ ಕೇಂದ್ರ ಪುರಷ್ಕೃತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸ್ಥಳೀಯವಾಗಿ ಮೀನು ಸೇವನೆಯನ್ನು ಪ್ರೋತ್ಸಾಹಿಸಲು ಪರಿಸರ ಸ್ನೇಹಿ ಸುಸಜ್ಜಿತ ಕಿಯಾಸ್ಕ್ ಮಾದರಿಯ ತ್ರಿಚಕ್ರ ವಾಹನಗಳಲ್ಲಿ ತಾಜಾ ಮೀನು ಉತ್ಪನ್ನ ಮಾರಾಟಕ್ಕಾಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ತ್ರಿಚಕ್ರ ವಾಹನವನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿ ಅಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ 03 ಭೌತಿಕ ಗುರಿ ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗದವರಿಗೆ ಭದ್ರತಾ ಠೇವಣಿ ಮೊತ್ತ ರೂ.1.00 ಲಕ್ಷ ಹಾಗೂ ಪ.ಜಾತಿ/ಪ.ಪಂಗಡ/ಮಹಿಳೆಯವರಿಗೆ ಭದ್ರತಾ ಠೇವಣಿ ಮೊತ್ತ ರೂ.0.50 ಲಕ್ಷ ನಿಗದಿಪಡಿಸಲಾಗಿದೆ. ಪರವಾನಿಗೆದಾರರು ಮಾಹೆಯಾನ ರೂ.3,000 ಮಾಸಿಕ ಶುಲ್ಕ ಭರಿಸಬೇಕಾಗಿರುತ್ತದೆ. ಆಸಕ್ತರು ಅರ್ಜಿಯನ್ನು ನವೆಂಬರ್ 04 ರೊಳಗಾಗಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿಯನ್ನು ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕೊಪ್ಪಳ, ಗಂಗಾವತಿ, ಕುಷ್ಟಗಿ, ಇವರನ್ನು ಸಂಪರ್ಕಿಸಬಹುದಾಗಿದೆ ಕೊಪ್ಪಳ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.