
ಈ.ಧನರಾಜಗೆ “ಆಚಾರ್ಯ ಶ್ರೀ 2024” ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಮೀಡಿಯಾ ಸ್ಟಡಿ ಸೆಂಟರ್ ಕೊಡುವ “ಆಚಾರ್ಯ ಶ್ರೀ 2024” ಪ್ರಶಸ್ತಿಗೆ ಗಂಗಾವತಿಯ ಶಿಕ್ಷಣ ತಜ್ಞ ,ರಾಷ್ಟೀಯ ಸಂಪನ್ಮೂಲ ವ್ಯಕ್ತಿ ಹಾಗೂ ಬೆಂಗಳೂರು ಇಂಡೋ ಗ್ಲೋಬ್ ಸಂಸ್ಥೆ CEO ಈ.ಧನರಾಜ ಆಯ್ಕೆಯಾಗಿದ್ದಾರೆ.
ಈ ಕುರಿತು ಆಯ್ಕೆ ಮಾಡಿರುವ ಮೀಡಿಯಾ ಸ್ಟಡಿ ಸೆಂಟರ್ ಬೆಂಗಳೂರು ಅವರು ಶಿಕ್ಷಣ ಕ್ಷೇತ್ರದಲ್ಲಿ ತಾವು ಮಾಡಿದ ಅಮೋಘ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಸಮಿತಿಯು ತಮ್ಮನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಇದೇ 26ನೇ ಅಕ್ಟೋಬರ್ 2024, ಶನಿವಾರದಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ‘ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ’ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಿದ್ದಾರೆ.