
ಆರೋಗ್ಯ ಇಲಾಖೆ ಹರ್ಷಗುಪ್ತ ಭೇಟಿ ಊಟದ ಗುಣಮಟ್ಟ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 24- ನಗರದ ಸರಕಾರಿ ಉಪವಿಭಾಗ ಆಸ್ಪತ್ರೆ ಹಾಗೂ ಸರಕಾರಿ (ಹೆರಿಗೆ) ಎಂಸಿಹೆಚ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಉಪಕರಣಗಳ ಕೊಠಡಿಗಳಿಗೆ ಭೇಟಿ ನೀಡಿ, ಚಿಕಿತ್ಸೆ ನೀಡುವ ವಿಧಾನ ಹಾಗೂ ರೋಗಿಗಳ ಜತೆ ಮಾತುಕತೆ ನಡೆಸಿದರು.
ಸಹಜ ಹೆರಿಗೆಯಲ್ಲಿ ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಾಣ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ನೆರೆ- ಹೊರೆಯ ಜಿಲ್ಲೆಗಳಿಂದ ಬರುವ ರೋಗಿಗಳು, ಕಾರ್ಪೋರೇಟ್ ಮಾದರಿ ಸೌಲಭ್ಯ ಸೇರಿದಂತೆ ನಾನಾ ಕಾರಣಕ್ಕೆ ಗಮನ ಸೆಳೆದಿದೆ. ಆನೆಗೊಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ (ಎಂಸಿಹೆಚ್) ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿ ಅಭಿಪ್ರಾಯವನ್ನು ಕೇಳಿಕೊಂಡರು.
ರೋಗಿಗಳೊAದಿಗೆ ವೈದ್ಯರ ವರ್ತನೆ, ರೋಗಿಗಳಿಗೆ ನೀಡುವ ಚಿಕಿತ್ಸೆ, ಒಳರೋಗಿಗಳಿಗೆ ನೀಡ ಲಾಗುತ್ತಿರುವ ಸೌಲಭ್ಯ, ಔಷಧಿ ದಾಸ್ತಾನು, ಆಸ್ಪತ್ರೆಯ ಸ್ವಚ್ಛತೆ ಹೀಗೆ ಅನೇಕ ಗುಣಮಟ್ಟಗಳನ್ನು ವೀಕ್ಷಿಸಿದರು.
ಊಟ ಮಾಡುವ ಮೂಲಕ ಊಟದ ಗುಣಮಟ್ಟ ಪರೀಕ್ಷಿಸಿದರು.
ಉಪವಿಭಾಗ ಆಸ್ಪತ್ರೆ, ಹೆರಿಗೆ ಆಸ್ಪತ್ರೆಯಲ್ಲಿ ಕಾಯ್ದುಕೊಂಡಿರುವ ಸ್ವಚ್ಛತೆ ಹಾಗೂ ರೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳು ಹಾಗೂ ಚಿಕಿತ್ಸೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಗೌರಿಶಂಕರ್, ಸರಕಾರಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಆರೋಗ್ಯ ಸಮಿತಿ ಸದಸ್ಯ ಮಲ್ಲಿಕಾರ್ಜುನ ತಟ್ಟಿ, ಚಂದ್ರಶೇಖರ ಕಲ್ಮನಿ ಉಪಸ್ಥಿತರಿದ್ದರು.