
ಉಪಚುನಾವಣೆಗೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಡಾ.ದಿವ್ಯಾ ನೇಮಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ಸಂಡೂರು ವಿಧಾನಸಭೆ ಉಪಚುನಾವಣೆಗೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್ ಅಯ್ಯರ್ ಅವರನ್ನು ಭಾರತೀಯ ಚುನಾವಣಾ ಆಯೋಗವು ನೇಮಿಸಿದೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣೆಗೆ ಕೈಗೊಂಡಿರುವ ವ್ಯವಸ್ಥೆ ಮತ್ತು ನೀತಿ ಸಂಹಿತೆ ಉಲ್ಲಂಘನೆಗಳನ್ನು ಪರಿಶೀಲಿಸಲು ಡಾ.ದಿವ್ಯಾ ಎಸ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್ ಅಯ್ಯರ್ ಸಂಡೂರಿನ ಹೊಸಪೇಟೆ ರಸ್ತೆಯ ಸರ್ಕ್ಯೂಟ್ ಹೌಸ್‌ನ ಕೊಠಡಿ ಸಂಖ್ಯೆ ೧ ರಲ್ಲಿ ವಾಸ್ತವ್ಯ ಮಾಡುವರು.
ಸಾರ್ವಜನಿಕರು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷದ ಸದಸ್ಯರು ಯಾವುದೇ ಚುನಾವಣೆಗೆ ಸಂಬAಧಿಸಿದ ದೂರುಗಳಿದ್ದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೪ ರಿಂದ ೫ ರವರೆಗೆ ನಿಗದಿತ ಸ್ಥಳ ಮತ್ತು ಸಮಯದಲ್ಲಿ ಸಾಮಾನ್ಯ ವೀಕ್ಷಕರನ್ನು ಭೇಟಿ ಮಾಡಬಹುದು ಅಥವಾ ಅವರ ಮೊ.೯೧೪೧೧೪೨೭೫೬ ಗೆ ಸಂಪರ್ಕಿಸಬಹುದು ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ರಾಜೇಶ್.ಎಚ್.ಡಿ ಅವರು ತಿಳಿಸಿದ್ದಾರೆ.