5

ರೈತರ ಹಿತಕ್ಕಾಗಿ ರೈತ ಸಂಘಟನೆ : ನಜೀರಸಾಬ್ ಮುಲಿಮನಿ

ಕರುನಾಡ ಬೆಳಗು ಸುದ್ದಿ

ಕುಕನೂರು, 25- ರೈತರ ಹಿತಕ್ಕಾಗಿ ರೈತ ಸಂಘಟನೆ ಎಂದು ಹೆಚ್ ಆರ್ ಬಸವರಾಜ್ ನೇತೃತ್ವದ ರೈತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮದ್ ನಜೀರಸಾಬ್ ಮುಲಿಮನಿ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯರೈತ ಸಂಘ ಹಸಿರುಸೇನೆ ಕುಕನೂರು ತಾಲೂಕಿನ ನೂತನ ರೈತಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರೈತರ ಹಿತಕ್ಕಾಗಿ ರೈತ ಸಂಘಟನೆ ಅದು ಯಾವುದೇ ಸ್ವಾರ್ಥ ಮನೋಭಾವನೆ ಬೆಳೆಸುವದಕ್ಕೆ ರೈತ ಸಂಘವಗಬಾರದು ರೈತರಿಗಾಗಿ ಏನೇ ಹೋರಾಟ ಮತ್ತು ಯಾವುದೇ ರೈತರ ಅಭಿವೃದ್ಧಿ ಕೆಲಸಕ್ಕಾಗಿ ಯಾವಾಗ ಬೇಕಾದರೂ ನೀವು ಅಹ್ವಾನ ನೀಡಿದರು ನಾವು ಕೂಡಲೇ ಹೋರಾಟಕ್ಕೆ ಸಿದ್ದವಾಗುತ್ತೇವೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಹೇಳಿದರು.

ರೈತ ಮುಖಂಡ ಬಸವರಾಜ ಕೊಡ್ಲಿ ಪಾಸ್ತವಿಕ ಮಾತನಾಡಿ, ಸಂಘಟನೆಯ ಜಿಲ್ಲೆಯ ನೇತೃತ್ವವನ್ನು ನನ್ನ ನಂಬಿ ನೀಡುತ್ತಿರುವ ಸಂಘಟನೆಯ ಹಿರಿಯ ಮುಖಂಡರಿಗೆ ಅಭಿನಂದಸುತ್ತೇನೆ, ನಿರಂತರವಾಗಿ ರೈತರ ಪರವಾಗಿ ಹೋರಾಟ ಸಮಾವೇಶಗಳನ್ನು ಮಾಡುತ್ತಾ ಬಂದಿದ್ದೇನೆ ರೈತ ಕಷ್ಟ ಕಾರ್ಪಣ್ಯಗಳಿಗೆ ಸದಾ ಮುಂದೆ ಇರುತ್ತೇನೆ ಸಂಘದ ಕಾರ್ಯ ಚಟುವಟಿಕೆಗಳನ್ನು ಚಾಚು ತಪ್ಪದೇ ಮಾಡುತ್ತಾ ಸಂಘಟನೆ ಮತ್ತು ಹೋರಾಟದ ಮೂಲಕ ನನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ. ರೈತಹಿತ ಕಾಯುವ ಕೆಲಸಗಳನ್ನು ಮಾಡಲು ನಾವು ಯಾವಾಗಲು ಸಿದ್ದರಿದ್ದೇವೆ ಎಂದು ಹೇಳಿದರು.

ಮುಖಂಡ ಮೇಘರಾಜ್ ಜಿಡಗಿ ಮಾತನಾಡಿ ಈ ಹಿಂದೇ ಇದ್ದ ಸಂಘಟನೆನೆಯಿAದ ಯಾವುದೇ ರೀತಿಯಾದ ರೈತರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲಾ ಅದು ಬದಲಾವಣೆಯಾಗಬೇಕು ಅದಕ್ಕಾಗಿ ಇಂದು ಹೆಚ್.ಆರ್.ಬಸವರಾಜರವರ ನೇತೃತ್ವದ ಕರ್ನಾಟಕ ರಾಜ್ಯರೈತ ಸಂಘ ಹಸಿರುಸೇನೆಯನ್ನು ಇಂದು ಸೇರುತ್ತಿದ್ದೇವೆ ಇನ್ನೂ ಮುಂದೆಯಾದರು ರೈತಪರ ಅಭಿವೃದ್ಧಿ ಕೆಲಸವನ್ನು ಮಾಡಲು ನಾವು ಮುಂದಾಗುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಯ್ಯ ಮುಳ್ಳುರೂ ಮಠ,ಸುಭಾಸ್ ಹಾಳಕೇರಿ, ವೀರಪ್ಪ ಕೌದಿ, ನಿರ್ಮಲ ಹಳ್ಳಿ, ದೇವಮ್ಮ ಹಳ್ಳಿಗುಡಿ, ಸರೋಜಮ್ಮ ಕುಂಬಾರ, ದುರಗಮ್ಮ ಛಲದಡಿ, ಬಸಮ್ಮ ಅಂಗಡಿ, ಹನುಮಪ್ಪ ಹಳ್ಳಿಗುಡಿ, ನಿಂಗಜ್ಜ ಗುರಿಕಾರ, ಈರಮ್ಮ ಮಟ್ಟಮ್ಮನವರ, ಹಾಗೂ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ವಿವಿಧ ರೈತರು ಹಾಗೂ ಇತರೆ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!