1

ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 1200 ಕೋಟಿ ರೂ.ಗಳ ಯೋಜನೆಗೆ ಶೀಘ್ರ ಚಾಲನೆ : ಶಾಸಕ ನಾರಾ ಭರತ್ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25- ಬಳ್ಳಾರಿ ನಗರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು 1200 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಶಾಸಕ ನಾರಾ ಭರತ್ ರೆಡ್ಡಿ ಜನ್ಮ ದಿನದ ನಿಮಿತ್ತ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಶಾಸಕರ ಅಭಿಮಾನಿಗಳ ಬಳಗ (ಎನ್’ಬಿಆರ್ ಟೀಮ್) ಏರ್ಪಡಿಸಿದ್ದ ಔತಣಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಪಿಎಂಸಿಯ ಮುಖ್ಯ ದ್ವಾರದಿಂದ ವೇದಿಕೆವರೆಗೆ ಅತಿಥಿಗಳನ್ನು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮೋತಿ ವೃತ್ತದಲ್ಲಿ ನನ್ನ ಅಭಿಮಾನಿಗಳು ಹಾಕಿರುವ೧೩೫ ಅಡಿ ಕಟೌಟ್ ಕಣ್ಣೆತ್ತಿ ನೋಡುವ ತಾಕತ್ತು ವಿರೋಧ ಪಕ್ಷದವರಿಗಿಲ್ಲ ಎಂದು ಅವರು ಹೇಳಿದರು.

ನಾನು ಶಾಸಕನಾಗಿದ್ದು ನಿಮ್ಮ ಆಶೀರ್ವಾದದಿಂದ, ನಿಮ್ಮ ಭಿಕ್ಷೆಯಿಂದ ಎಂದು ಹೇಳಿದ ಅವರು ನೀವೆಲ್ಲ ಸೇರಿ ನನ್ನ ಗೆಲ್ಲಿಸಿ ಶಾಸಕನಾಗಿ ಮಾಡಿದ್ದೀರಿ ಎಂದರು.

ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಹತ್ತಾರು ಕೋಟಿ ಅನುದಾನ ತಂದಿರುವೆ ಎಂದು ಹೇಳಿದ ಭರತ್ ರೆಡ್ಡಿ, ಕೋಲ್ಡ್ ಸ್ಟೋರೇಜ್, ತ್ಯಾಜ್ಯ ನಿರ್ವಹಣೆಯ (ಬಯೋ ಗ್ಯಾಸ್ ಘಟಕ ನಿರ್ಮಾಣಕ್ಕಾಗಿ ೫೧ ಕೋಟಿ ರೂ.) ಕಾಮಗಾರಿಗಳಿಗಾಗಿ ಅನುದಾನ ತಂದಿರುವೆ, ಎಪಿಎಂಸಿಯ ಆವರಣದ ಅಭಿವೃದ್ಧಿಗಾಗಿ ೨೭ ಕೋಟಿ ಅನುದಾನ ತಂದಿರುವೆ ಎಂದರು.

ತುAಗಭದ್ರಾ ಜಲಾಶಯದಿಂದ ನೀರು ತರುವುದಾಗಿ ಬಹಳ ಜನ ಬಾಯಿ ಮಾತಲ್ಲಿ ಹೇಳಿದರು, ಆದರೆ ನಾನು ೧೨೦೦ ಕೋಟಿ ರೂ. ಅನುದಾನದಲ್ಲಿ ಬಳ್ಳಾರಿ ನಗರಕ್ಕೆ ನೇರವಾಗಿ ನೀರು ಪೂರೈಸಲು ಯೋಜನೆ ರೂಪಿಸಿರುವೆ, ನಾನು ಮನೆಯಲ್ಲಿ ಯಾವ ನೀರು ಕುಡಿಯುತ್ತೇನೇಯೋ ನನ್ನ ಜನರು ಅದೇ ನೀರು ಕುಡಿಯಬೇಕು ಎಂದು ಅಭಿಪ್ರಾಯಪಟ್ಟರು.

ಗಡಿಗಿ ಚನ್ನಪ್ಪ ವೃತ್ತ ಶೀಘ್ರದಲ್ಲಿ ಉದ್ಘಾಟನೆ ಆಗಲಿದೆ. ಬಿಜೆಪಿಯವರು ಅನ್ನಬಹುದು; ನಾವು ಮಾಡಿದ ಕಾಮಗಾರಿ ಎಂದು, ಆದರೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿ, ೨೧ ಕೋಟಿ ಅನುದಾನ ಹೆಚ್ಚುವರಿಯಾಗಿ ತಂದಿರುವೆ ಎಂದರು.

ವಸತಿ ಇಲಾಖೆಯ ಅಡಿ ಮುಂಡ್ರಿಗಿ ಬಳಿಯಿರುವ ಮಹಾತ್ಮ ಗಾಂಧಿ ಟೌನ್’ಶಿಪ್ ಯೋಜನೆಯ ಅಡಿ ೮೨೦ ಮನೆಗಳನ್ನು ಶೀಘ್ರ ಹಸ್ತಾಂತರ ಮಾಡಿ, ನಿಮ್ಮ ಮನೆಯ ಗೃಹ ಪ್ರವೇಶಕ್ಕೆ ಬರುವೆ, ಇಷ್ಟು ಮಾತ್ರವಲ್ಲ; ಮಂದಿರ, ಮಸೀದಿ, ಚರ್ಚ್ ಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ತಂದಿರುವೆ ಎಂದರು.

ಈ ಹಿಂದೆ ಬಳ್ಳಾರಿಯಲ್ಲಿ ಗೂಂಡಾಗಿರಿ ಇತ್ತು, ಆದರೆ ನಾನು ಶಾಸಕ ಆದ ನಂತರ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದ ಶಾಸಕ ನಾರಾ ಭರತ್ ರೆಡ್ಡಿ, ಮೊದಲಿನ ಹಾಗೆ ಯಾರಾದರೂ ದೌರ್ಜನ್ಯ ಮಾಡಿದರೆ, ನಿಮ್ಮ ರಕ್ಷಣೆಗೆ ನಾನಿರುವೆ ಎಂದರು.

ನಮ್ಮ ಮನೆತನದ ಕೊಡುಗೆ ಕೊಟ್ಟಿರುವ ಬಗ್ಗೆ ಮಾತನಾಡಿದ ಕಂಪ್ಲಿ ಶಾಸಕ ಗಣೇಶ್ ಅವರದ್ದು ದೊಡ್ಡತನ, ಅವರಿಗೆ ಸಾವಿರಾರು ಜನ ಅಭಿಮಾನಿಗಳು ಇದ್ದಾರೆ, ಅವರು ಕಂಪ್ಲಿ ಕ್ಷೇತ್ರದಿಂದ ನಿರಂಅAತರವಾಗಿ ಗೆದ್ದು ಶಾಸಕರಾಗಿ ದಾಖಲೆ ನಿರ್ಮಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್; ಇಂದು ಬಳ್ಳಾರಿಯ ರಸ್ತೆಯುದ್ದಕ್ಕೂ ಜಾತ್ರೆಯ, ಹಬ್ಬದ ವಾತಾವರಣ ಇದೆ, ಯಾಕೆಂದರೆ ಇಂದು ನಮ್ಮ ನೆಚ್ಚಿನ ಯುವ ಶಾಸಕ ನಾರಾ ಭರತ್ ರೆಡ್ಡಿಯವರ ಜನ್ಮ ದಿನ ಇದೆ ಎಂದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಪ್ಪಟ ಹೃದಯವಂತ ಮನುಷ್ಯ, ವೈರಿಗಳ ಮನಸನ್ನೂ ಗೆಲ್ಲಬಲ್ಲ ವ್ಯಕ್ತಿ ಎಂದು ಹೇಳಿದ ಅವರು, ಇಂತಹ ಶಾಸಕರನ್ನು ಪಡೆದ ಬಳ್ಳಾರಿಯ ಜನ ಭಾಗ್ಯಶಾಲಿಗಳು ಎಂದರು.

ಭರತ್ ರೆಡ್ಡಿ ಶ್ರೀಮಂತ ಕುಟುಂಬದಲ್ಲಿ ಜನಿಸಿರಬಹುದು ಸದಾ ಬಡವರ ಜನರ ಬಗ್ಗೆ ಆಲೋಚಿಸುತ್ತಾರೆ, ಭರತ್ ರೆಡ್ಡಿಯವರು ಕೇವಲ ಶಾಸಕರಾಗಿ ಅಲ್ಲ, ಅವರು ಇದೇ ಅವಧಿಯಲ್ಲಿ ಶಾಸಕರಾಗಬೇಕೆಂದು ಹಾರೈಸುವೆ, ಮೊದಲ ಬಾರಿಗೆ ಶಾಸಕರಾದವರು ಬಹಳ ಜನ ಸಚಿವರಾಗಿದ್ದಾರೆ, ಭರತ್ ರೆಡ್ಡಿಯವರು ಸಚಿವರಾಗಬೇಕೆಂದು ಕನಕದುರ್ಗಮ್ಮ ತಾಯಿಗೆ ಬೇಡಿಕೊಂಡಿರುವೆ ಎಂದರು.

ನಾರಾ ಮನೆತನದ ನೆರವಿನಿಂದಲೇ ನಾನು ಎರಡು ಸಲ ಶಾಸಕ ಆಗಿರುವೆ. ಆ ಮನೆತನದ ಋಣವನ್ನು ಮರೆಯಲಾರೆ. ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದವರೇ ಬಂಧುಗಳು ಎಂದು ಶಾಸಕ ಗಣೇಶ್ ಹೇಳಿದರು.

ಭರತ್ ರೆಡ್ಡಿಯವರು ಕೇವಲ ಶಾಸಕರಲ್ಲ, ಅವರು ಜಿಲ್ಲೆಯ ಟೈಗರ್ ಎಂದು ಶಾಸಕ ಗಣೇಶ್ ಹೊಗಳಿದರು.

ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಅಬ್ದುಲ್ ಬಾರಿ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಕುಬೇರಾ, ಎಂ.ಪ್ರಭAಜನಕುಮಾರ್, ಮಿಂಚು ಸೀನಾ, ಕೆ.ನೂರ್ ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ವಿಷ್ಣು ಬೋಯಪಾಟಿ, ಸತೀಶ್ ರೆಡ್ಡಿ, ಅಲಿವೇಲು ಸುರೇಶ್, ಮಂಜುಳಾ, ಎಂ.ವಿವೇಕ್, ಸಿಲಾರ್, ವಿಶ್ವ, ರಘುನಾಥ ಪಾಟೀಲ್, ಸಿದ್ಧೇಶ್, ಧರ್ಮಶ್ರೀ, ಕಂಪ್ಲಿಯ ಕಾಂಗ್ರೆಸ್ ಮುಖಂಡರಾದ ವಾಸು, ರಘು ಮೊದಲಾದ ಮುಖಂಡರು ಹಾಜರಿದ್ದರು

ಬಾಪೂಜಿ ನಗರ ವರದಿ : ಕಳೆದ ವರ್ಷ ಜನ್ಮ ದಿನಾಚರಣೆಯ ವೇಳೆ ಹಲವು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು, ಈ ಸಲ ಕಳೆದ ಸಲಕ್ಕೆ ಹೆಚ್ಚು ಕಡೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದೇವೆ. ಇದಕ್ಕೆ ನಿಮ್ಮ ಆಶೀರ್ವಾದ ಕಾರಣ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಬಳ್ಳಾರಿಯ ಬಾಪೂಜಿ ನಗರದಲ್ಲಿ ಶಾಸಕರ ಬಳಗದ (ಎನ್‌ಬಿಆರ್ ಟೀಮ್) ವತಿಯಿಂದ ಏರ್ಪಡಿಸಿದ್ದ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಾಪೂಜಿ ನಗರದಲ್ಲಿ ಊಟದ ವ್ಯವಸ್ಥೆ ಮಾಡಿದರೆ ನಾವು ಬರಲ್ಲ ಎಂದು ಕೆಲವರು ಹೇಳಿದರು, ಆದರೆ ಯಾರು ಬಂದರೂ ಬಿಟ್ಟರೂ ನಾನು ನನ್ನ ಜನರ ನಡುವೆಯೇ ಜನ್ಮ ದಿನ ಆಚರಿಸುವೆ ಎಂದು ಹೇಳಿದೆ ಎಂದರು.

ಯಾರಿಗಾದರೂ ಅಪಘಾತವಾದರೆ ಆಯಾ ಗ್ರೂಪಿನ ರಕ್ತ ಕೇಳುತ್ತಾರೆ ವಿನಹ ಯಾವ ಜಾತಿಯ ರಕ್ತ? ಎಂದು ಯಾರೂ ಕೇಳಲ್ಲ, ನಾನು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳಲ್ಲಿ ನಂಬಿಕೆ ಇಟ್ಟು ಹೋರಾಟ ಮಾಡಿ ಬಂದಿರುವೆ ಎಂದ ಅವರು, ನಿಮ್ಮ ಹಾಗೂ ಆ ಕನಕದುರ್ಗಮ್ಮ ದೇವಿಯ ಆಶೀರ್ವಾದದಿಂದ ನಾನು ಶಾಸಕನಾಗಿರುವೆ ಎಂದರು.

ಕಾAಗ್ರೆಸ್ ಮುಖಂಡ ಎಂ.ನಾರಾಯಣ ರಾವ್ (ಚಿಟ್ಟಿ), ಪಾಲಿಕೆ ಸದಸ್ಯರಾದ ಶಿವರಾಜ್, ರಾಮಾಂಜನೇಯ, ಎಂ.ಪ್ರಭ0ಜನಕಮಾರ್, ಮಿಂಚು ಶ್ರೀನಿವಾಸುಲು, ರಾಮು, ವೆಂಕಟೇಶ, ಭರತ್ ಕುಮಾರ್, ರಾಮು, ತೌಸಿಫ್, ತಬ್ರೇಜ್, ಮೊದಲಾದವರು ಹಾಜರಿದ್ದರು.

ಶ್ರೀರಾಂಪುರ ಕಾಲೋನಿ ವರದಿ : ನಿಮ್ಮೆಲ್ಲರ ಅಭಿಮಾನ ಸಾವಿರಾರು ಕೋಟಿಗೂ ಮಿಗಿಲು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಶ್ರೀರಾಂಪುರ ಕಾಲೋನಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಅಭಿಮಾನಿ ಬಳಗ (ಎನ್’ಬಿಆರ್ ಟೀಮ್) ಏರ್ಪಡಿಸಿದ್ದ ಔತಣಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಬ್ಬ ವ್ಯಕ್ತಿಯ ಬಳಿ ಸಾವಿರಾರು ಕೋಟಿ ಇದ್ದರೂ ಕೂಡ ಅಧಿಕಾರ ಸಿಗಲ್ಲ. ವಿಧಾನಸಭೆಗೆ ಶಾಸಕನಾಗಿ ಪ್ರವೇಶ ಮಾಡಬೇಕಾದರೆ ಪುಣ್ಯ ಇರಬೇಕು, ನಾನು ಶಾಸಕನಾಗಲು ನೀವು ಕಾರಣ ಎಂದರು.

ಇAದು ನನ್ನ ಜನ್ಮ ದಿನದ ನಿಮಿತ್ತ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ನೀಡಿರುವೆ. ನಿಮ್ಮ ಸೋದರನಾಗಿ ನಿಮ್ಮ ಉಡಿ ತುಂಬುವ ಕೆಲಸ ಮಾಡಿದ್ದೇನೆ, ಮನೆಯಲ್ಲಿರುವ ಸೋದರಿ ಮಾತ್ರ ನನ್ನ ಸೋದರಿ ಅಲ್ಲ, ನೀವೆಲ್ಲರೂ ನನ್ನ ಸಹೋದರಿಯರು, ತಾಯಂದಿರು ಎಂದು ಹೇಳಿದರು.

ಬಳ್ಳಾರಿ ನಗರದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು, ಆದರೆ ನಾನು ೧೨೦೦ ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೆ ತರುತ್ತಿದ್ದೇನೆ ಎಂದ ಅವರು, ನಮ್ಮ ಮಕ್ಕಳು ಬೇರೆ ನಗರಗಳಿಗೆ ಹೋದಾಗ ನಮ್ಮ ನಗರವೂ ಹೀಗೇ ಅಭಿವೃದ್ಧಿಯಾಗಿದೆ ಎಂದು ಹೇಳಬೇಕು, ನಮ್ಮ ಅಣ್ಣ ಭರತ್ ರೆಡ್ಡಿ ಅಭಿವೃದ್ಧಿ ಮಾಡಿದ್ದಾನೆ ಎಂದು ಹೇಳಬೇಕು ಎಂದರು.

ಬೇರೆಯವರು ಲಂಚ ಪಡೆದು ಜನರಿಗೆ ಯೋಜನೆಗಳನ್ನು ತಲುಪಿಸುತ್ತಿದ್ದರು, ಆದರೆ ನಾನು ಒಂದೇ ಒಂದು ರೂಪಾಯಿ ಲಂಚ ಪಡೆಯದೇ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿರುವೆ ಎಂದ ಶಾಸಕ ನಾರಾ ಭರತ್ ರೆಡ್ಡಿ, ನೀವು ಲಂಚ ಕೊಟ್ಟಿದ್ದೀರಾ? ಎಂದು ಒಬ್ಬ ಮಹಿಳೆಗೆ ಕೇಳಿದ್ದೆ, ನಿನ್ನಂಥ ಶಾಸಕ ಇರುವಾಗ ಲಂಚ ಕೇಳುವ ಧೈರ್ಯ ಯಾರಿಗಿದೆ? ಅಂತ ಆ ಮಹಿಳೆ ಉತ್ತರಿಸಿದ್ದರು ಎಂದರು.

ಕೆಲವರು ಚುನಾವಣೆಯ ಸಂದರ್ಭ ಪಟ್ಟಾ ಹಂಚುತ್ತಾರೆ, ಆದರೆ ಈ ಭರತ್ ರೆಡ್ಡಿ ಕೆಲವೇ ದಿನಗಳಲ್ಲಿ ೩೮೦೦ ಜನರಿಗೆ ಪಟ್ಟಾ ಹಂಚಲಿದ್ದಾನೆ ಎಂದ ಅವರು, ನೀವು ನನ್ನನ್ನು ನೇರವಾಗಿ ಭೇಟಿ ಆಗುವ ವ್ಯವಸ್ಥೆ ಇದೆ, ಮುಂಬರುವ ದಿನಗಳಲ್ಲಿ ೧೨೦ ಜನ ಮಹಾನಗರ ಪಾಲಿಕೆಯ ಕಾರ್ಮಿಕರ ನೇಮಕಾತಿ ಕಡ್ದಾಯಗೊಳಿಸಲಿದ್ದೇವೆ, ಮೇಯರ್ ಮುಲ್ಲಂಗಿ ನಂದೀಶ್ ಜೊತೆಯಾಗಿ ಭರವಸೆ ನೀಡುತ್ತೇವೆ ಎಂದರು.

ಶ್ರೀರಾ0ಪುರ ಕಾಲೋನಿಯ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಶಾಲೆಯ ಉದ್ಘಾಟನೆ ಮಾಡುವ ವೇಳೆ ಶಾಲೆಯ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲಾಗುವುದು, ಯುವಕರಿಗಾಗಿ ಫುಟ್’ಬಾಲ್ ಮೈದಾನ ನಿರ್ಮಿಸಲಾಗುವುದು ಎಂದರು.

ಮೇಯರ್ ಮುಲ್ಲಂಗಿ ನಂದೀಶ್, ನಾಗರಾಜ, ಬಾಲರಾಜ, ಅರವಿಂದ್, ವಿಷ್ಣು, ವರಪ್ರಸಾದ್, ಅರ್ಷದ್ ಮೊದಲಾದವರು ಹಾಜರಿದ್ದರು.

ಇದಕ್ಕೂ ಮುನ್ನ ನಗರದ ಆದಿದೇವತೆ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಶಾಸಕರ ಕಚೇರಿ ವಿಜಯೀಭವದಲ್ಲಿ ೮೦೦ ಜನ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು. ಅದೇ ರೀತಿ ಅರ್ಹ ಫಲಾನುಭವಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು. ನಗರದ ವಿವಿಧ ಕ್ಷೇತ್ರಗಳ ಗಣ್ಯರು ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!