
ಬೋದೂರು : ಗ್ರಾ.ಪಂ ದ್ಯಾಮಣ್ಣ ಮೂಲಿ ಅಧ್ಯಕ್ಷರಾಗಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 25- ತಾಲೂಕಿನ ಬೋದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚಿಕ್ಕಮನ್ನಾಪೂರ ಗ್ರಾಮದ ದ್ಯಾಮಣ್ಣ ಹನಮಗೌಡ ಮೂಲಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಜೋತಿ ಹನಮಂತಪ್ಪ ಕೊಬ್ಲರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮುಂಜಾನೆ ನಡೆದ ಚುನಾವಣೆಗೆ ಚುನಾಯಿತ ಪ್ರತಿನಿಧಿ ದ್ಯಾಮಣ್ಣ ಹನಮಗೌಡ ಮೂಲಿ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ ಹಾಗೂ ಚುನಾವಣಾಧಿಕಾರಿ ಬಸವರಾಜ ತೆನ್ನಳ್ಳಿ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಮೀರ ಕುಮಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋಣೆಪ್ಪ ಜಿರ್ಲಿ ಭಾಗವಹಿಸಿದ್ದರು.
ನೂತನ ಗ್ರಾ.ಪಂ. ಅಧ್ಯಕ್ಷ ದ್ಯಾಮಣ್ಣ ಮೂಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರ ಸಹಕಾರೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವೆ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಮಹೇಶ ಹಳ್ಳಿ, ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್, ತಾ.ಪಂ. ಮಾಜಿ ಸದಸ್ಯ ಷಣ್ಮುಖಪ್ಪ ಬಳ್ಳಾರಿ, ಗಾಣದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಓಮಣ್ಣ ಚನ್ನದಾಸರ, ಮುಖಂಡ ರಾಘವೇಂದ್ರ ಜ್ಯೋಶಿ, ಬಸವರಾಜ ಕೋಳೂರು, ನಿಂಗಪ್ಪ ಕೊಂಗಿ, ರಮೇಶ ಪೂಜಾರ್, ಶಿವನಗೌಡ ಅಳ್ಳಿ, ಪ್ರಭು ನಿಡಶೇಸಿ, ಶಂಕರ ಮೇಟಿ,ಶಿವನಪ್ಪ ಹಳ್ಳಿ, ಹನಮಂತಪ್ಪ ಬ್ಯಾಳಿ, ಹನಮಂತಪ್ಪ ಹರಿಜನ, ಉಪಾಧ್ಯಕ್ಷೆ ದುರ್ಗವ್ವ ಹರಿಜನ, ಸದಸ್ಯರಾದ ಸೋಮನಗೌಡ ಗೌಡ್ರ, ಸಿದ್ದಮ್ಮ ತಳವಾರ, ಶಂಕ್ರಮ್ಮ ಗೌಡ್ರ, ಚನ್ನಮ್ಮ ನಿಡಶೇಸಿ, ನಿರುಪಾದೇಪ್ಪ ತಳವಾರ, ಮ್ಯಾಲಪ್ಪ ಬೋಮ್ಮಸಾಳ, ಬಸಮ್ಮ ಪರಂಗಿ, ಯಮನಪ್ಪ ಹಗೆದಾಳ, ಹನಮವ್ವ ಚೌಡ್ಕಿ, ಹಾಗೂ ಕಾರ್ಯಕರ್ತರು, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಇನ್ನಿತರರು ಇದ್ದರು.