10

ಶಾಸಕ ನಾರಾ ಭರತ್ ರೆಡ್ಡಿ : ವಿಜೃಂಭಣೆಯ ಹುಟ್ಟು ಹಬ್ಬ ಆಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25- ಬಾಪೂಜಿ ನಗರದಲ್ಲಿ ಭರತ್ ರೆಡ್ಡಿ, ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿ0ದ ಮೆರವಣಿಗೆ ಮಾಡುವುದರ ಮೂಲಕ ಅವರನ್ನು ಬರಮಾಡಿಕೊಂಡು ನಂತರ ಕೇಕ್ ಕಟ್ ಮಾಡುವುದರ ಮೂಲಕ ಹಾಗೂ ಅವರಿಗೆ ನೆನಪಿನ ಕಾಣಿಕೆಯನ್ನು ಕೊಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಎಲ್ಲಾ ಸಾರ್ವಜನಿಕರಿಗೆ ಬಾಡೂಟವನ್ನು ಏರ್ಪಡಿಸಿದ್ದೆವು ಎಲ್ಲರೂ ಹೊಟ್ಟೆ ತುಂಬಾ ಊಟವನ್ನು ಮಾಡಿ ನಗರ ಶಾಸಕರು ಭರತ್ ರೆಡ್ಡಿರವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ಹೆಗಡೆ ಕೆಪಿಸಿಸಿ ಮಾಧ್ಯಮ ವಕ್ತಾರರು, ಹಾಗೂ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ, ಎ.ಮಾನಯ್ಯಾ, ಉಮಾದೇವಿ ಶಿವರಾಜ್ ಮಹಾನಗರ ಪಾಲಿಕೆ ಸದಸ್ಯರು, ರಾಮಾಂಜನೇಯಲು ಮಹಾನಗರ ಪಾಲಿಕೆ ಸದಸ್ಯರು, ಪ್ರಭಂಜನ್ ಕುಮಾರ್ ಮಹಾನಗರ ಪಾಲಿಕೆ ಸದಸ್ಯರು, ಮಿಂಚು ಶ್ರೀನಿವಾಸ್ ಮಹಾನಗರ ಪಾಲಿಕೆ ಸದಸ್ಯರು, ರಾಮಕೃಷ್ಣ, ಶಿವರಾಜ್ ಹೆಗಡೆ, ವೆಂಕಟೇಶ್‌ಲು, ಭರತ್ ಕುಮಾರ್ ಬುಡ ಸದಸ್ಯರು, ಪ್ರೇಮ್, ಕೆ.ಹೊನ್ನೂರ್ ಸ್ವಾಮಿ, ಮಲ್ಲಿಕಾರ್ಜುನ, ಸಣ್ಣ ಆಂಜನೇಯ, ಬುಜ್ಜಿ, ಆನಂದ್, ರಾಜ, ಬಂಗಾರಿ ಕಿರಣ್, ಮಲ್ಲಿಕಾರ್ಜುನ ಮತ್ತು ಬಾಪೂಜಿನಗರ ಸಾರ್ವಜನಿಕರು, ಹಾಗೂ ಬಳ್ಳಾರಿ ನಗರದ ಅನೇಕ ಕಾಂಗ್ರೆಸ್ ಪಕ್ಷದ ನಾಯಕರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!