
ಮಹಿಳೆಯರ ಸ್ವಾವಲಂಬನೆ ಬದುಕಿಗೆ ದಾರಿದೀಪವಾಗಿದೆ : ನಾಗೇಶ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 25-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳೆಯರ ಸ್ವಾವಲಂಬನೆಯಿAದ ಜೀವನ ನೆಡಸುವದಕ್ಕೆ ದಾರಿ ದೀಪವಾಗಿದೆ ಸಂಸ್ಥೆಯಿ0ದ ಕಡಿಮೆ ದರದಲ್ಲಿ ಸಾಲ ಸೌಲಭ್ಯ ಕಲ್ಪಸಿ ಕಳೆದ ಹನ್ನೊಂದು ವರ್ಷಗಳಿಂದ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಾ ಮುಂದೆ ಸಾಗುತ್ತಾ ಬಂದಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ಬುದ್ದ ಬಸವ ಅಂಬೇಡ್ಕರ ಸಭಾ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನಾದ್ಯಂತ ಕೆರಗಳ ದೇವಸ್ಥಾನದ ಜಿರ್ಣೋದ್ದಾರ ಮತ್ತು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸಂಸ್ಥೆಯ ಕಾರ್ಯ ಶ್ಲಾಘನೀಯ ಶ್ಲಾಘನೀಯವಾಗಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಗಳು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರಿಗೆ ತಲುಪಿಸುವಂತ ಕೆಲಸಮಾಡಬೇಕೆಂದು ಹೇಳಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ಸರಕಾರವು ಮಾಡದಂತ ಕೆಲವೊಂದು ಕೆಲಸಗಳನ್ನು ಧರ್ಮಸ್ದಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾಡುತ್ತಿದೆ. ತಾಲೂಕಿನಾಧ್ಯಂತ ಈ ಸಂಸ್ಥೆಯು ಸತತ ೧೧ ವರ್ಷಗಳ ಕಾಲ ಹಲವಾರು ಸಮಾಜ ಮುಖಿ ನಿರಂತರ ಸೇವೆ ಮಾಡುತ್ತಾ ಬಂದಿದೆ ಸಂಸ್ಥೆಯ ಯೋಜನೆಯಿಂದ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರು ಸಾಲ ಪಡೆದುಕೊಂಡು ಸ್ವಾವಲಂಬಿನೆಯ ಮತ್ತು ನೆಮ್ಮದಿಯಿಂದ ಬದುಕು ನಿರ್ಮಿಸಿಕೊಂಡು ಮರಳಿ ಸಾಲವನ್ನು ತಿರಿಸಿದ್ದಾರೆ. ಈ ಸಂಸ್ಥೆಯು ಮಹಿಳೆಯರ ಬದುಕಿಗೆ ದಾರಿದೀಪವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕ ಯೋಜನಾಧಿಕಾರಿ ಸತೀಶ ಮಾತನಾಡಿ, ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕಿನಾದ್ಯಂತ ೧೦೪ ಮಹಿಳಾ ಒಕ್ಕೂಟಗಳನ್ನು ಪ್ರಾರಂಭಿಸಲಾಗಿದೆ ತಾಲೂಕಿನಾದ್ಯಂತ ಒಟ್ಟು ಸಂಘಗಳು ೩೭೭೩, ಸಂಘಗಳಿವೆ ತಾಲೂಕಿನಾಧ್ಯಂತ ೩೦೬೪೦ ಅಧಿಕ ಜನ ಸದಸ್ಯರನ್ನು ಒಳಗೊಂಡಿದೆ ಎಂದರು.
ಕುಟು0ಬಗಳು ಪ್ರಗತಿನಿಧಿ ಪಡೆದು ಹೈನುಗಾರಿಕೆ, ಆಕಳು, ಮೇಕೆ-ಕುರಿ ಸಾಕಾಣಿಕೆ ಮತ್ತು ಕೊಟ್ಟಿಗೆ ರಚಿಸಿಕೊಂಡಿದ್ದಾರೆ. ತಾಲೂಕಿನ ಶಾಲೆಗಳಿಗೆ ಪೀಠೋಪಕರಣ ವಿತರಣೆ, ಶಾಲಾ ಕಟ್ಟಡ, ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ಧಾರ, ಮದ್ಯ ವರ್ಜನ ಶಿಬಿರ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಕೆರೆಗಳ ಹೂಳೆತ್ತುವುದು, ಶ್ರದ್ಧಾ ಕೇಂದ್ರ ಸ್ವಚ್ಛತೆ, ಮಾಸಾಶನ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳಿಗೆ ಅಗತ್ಯ ಸಲಕರಣೆಗಳ ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತ ಸಾಗಿ ಬಂದಿದೆ ಎಂದರು.
ಈ ವೇಳೆ ತಾಲೂಕು ಮಟ್ಟದ ಮಹಿಳೆಯರ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದಲ್ಲಿ ೮೦೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನೆಡಸಿಕೂಟ್ಟರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ರಮೇಶ, ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ ಸಂಗಣ್ಣ ತೆಂಗಿನಕಾಯಿ, ಸದಸ್ಯ ಕರಿಬಸಯ್ಯ ಬಿನ್ನಾಳ, ಶಕುಂತಲಾದೇವಿ ಮಾಲಿ ಪಾಟೀಲ್, ಶರಣಬಸಪ್ಪ ದಾನಕೈ, ವೀರಣ್ಣ ನಿಂಗೋಜಿ, ಜ್ಞಾನ ವೀಕಾಸ ಸಮನ್ವಯಾಧಿಕಾರಿ ಗೀತಾ ಓಲೆಕಾರ, ವಲಯ ಮೇಲ್ವೀಚಾರ ತ್ರಿವೇಣಿ ಭಾವಿಕಟ್ಟಿ, ಕೃಷಿ ಮೇಲ್ವೀಚಾರಕ ಪ್ರಸನ್ ಕುಮಾರ, ಮೇಲ್ವೀಚಾರಕ ಸಿ.ಈಶ್ವರ, ಚನ್ನಮ್ಮ ಇನ್ನಿತರರು ಭಾಗವಹಿಸಿದ್ದರು.