02

ಭ್ರಷ್ಟಚಾರ ನಿರ್ಮೂಲನೆ ಮಾಡವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ : ಚಂದ್ರಪ್ಪ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 28– ವಿದ್ಯಾರ್ಥಿಗಳು ಭ್ರಷ್ಟಚಾರದ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುವುದರ ಮೂಲಕ ಭ್ರಷ್ಟಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳು ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ಕೊಪ್ಪಳ ಲೋಕಾಯುಕ್ತ ಪ್ರಭಾರ ಡಿವೈಎಸ್‌ಪಿ ಚಂದ್ರಪ್ಪ.ಇ.ಟಿ ಹೇಳಿದರು.

ಕರ್ನಾಟಕ ಲೋಕಾಯುಕ್ತ ಕಚೇರಿ ಕೊಪ್ಪಳ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಕ್ಟೋಬರ್ ೨೮ ರಂದು ಹಮ್ಮಿಕೊಂಡಿದ್ದ ಭ್ರಷ್ಟಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ -೨೦೨೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

೧೯೮೪ರಲ್ಲಿ ಕರ್ನಾಟಕ ಲೋಕಾಯುಕ್ತ ಪ್ರಾರಂಭ ಆಗಿದ್ದು, ಇದರ ಮುಖ್ಯ ಕೆಲಸ ಭ್ರಷ್ಟಚಾರವನ್ನು ತಡೆಗಟ್ಟುವುದು ಎಲ್ಲರು ಸೇರಿ ಭ್ರಷ್ಟಚಾರವನ್ನು ತಡೆಗಟ್ಟಬೇಕು. ಯಾರಾದ್ರೂ ಸರಕಾರಿ ನೌಕರರು ಕೆಲಸ ನಿರ್ವಹಿಸಲು ಲಂಚದ ಬೇಡಿಕೆ ಇಟ್ಟರೆ ನಮಗೆ ಮಾಹಿತಿ ನೀಡಿದರು.

ಕೊಪ್ಪಳ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಶೈಲಜಾ ಪ್ಯಾಟಿ ಶೆಟ್ಟರ್ ಅವರು ಮಾತನಾಡಿ, ಎಲ್ಲ ಸರಕಾರಿ ನೌಕರರು ಸಾರ್ವಜನಿಕರ ಕೆಲಸ ವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸಾರ್ವಜನಿಕರ ಹತ್ತಿರ, ರೈತರ ಹತ್ತಿರ ಲಂಚ ತಗೊಳ್ಳಬಾರದು. ಇದರಿಂದ ದೇಶದ ಅಭಿವೃದ್ಧಿಗೆ ತೊಡಕು ಉಂಟಾಗುತ್ತದೆ. ಎಲ್ಲ ಸಾರ್ವಜನಿಕರ ಸಹಕಾರದಿಂದ ಭ್ರಷ್ಟಚಾರವನ್ನು ತಡೆಗಟ್ಟಬಹುದು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ಮಾತನಾಡಿ ನಾವು ಭ್ರಷ್ಟಚಾರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಇದು ಪ್ರಾಚಿನ ಕಾಲದಿಂದಲೂ ಇದೆ ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಅವುಗಳನ್ನು ಪಾಲನೆ ಮಾಡಬೇಕು ಪ್ರತಿಯೊಬ್ಬರು ಕಾನೂನುಗಳನ್ನು ಉಲ್ಲಂಘನೆ ಮಾಡಬಾರದು ಎಂದು ಹೆಳಿದರು.

ಬಳಿಕ ವಿದ್ಯಾರ್ಥಿಗಳ ಜೊತೆ ಭ್ರಷ್ಟಚಾರದ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಭ್ರಷ್ಟಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಹುಲಿಗೆಮ್ಮ ಬಿ, ಉಪನ್ಯಾಸಕ ಡಾ.ಪ್ರದೀಪ್ ಕುಮಾರ್, ಡಾ.ನರಸಿಂಹ, ಅತಿಥಿ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ, ಡಾ.ಮಂಜಪ್ಪ, ಡಾ.ಸೂರಪ್ಪ ಹಾಗೂ ವಿದ್ಯಾರ್ಥಿನಿಯರು ಇದ್ದರು.

ಕಾರ್ಯಕ್ರಮವನ್ನು ಭವ್ಯ ನಿರೂಪಿಸಿದರು. ಡಾ.ಹುಲಿಗೆಮ್ಮ ಸ್ವಾಗತಿಸಿದರು, ನರಸಿಂಹ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!