
ವಾರ್ಡಗಳ ಸಮಸ್ಯೆ ಹಾಗೂ ಅಭಿವೃದ್ಧಿಯೇ ಸಭೆಯ ಉದ್ದೇಶ : ಲಲಿತಮ್ಮ
ಕರುನಾಡ ಬೆಳಗು ಸುದ್ದಿ
* ರವಿಕುಮಾರ ಹಳ್ಳಿಕೇರಿ
ಕುಕನೂರು 29- ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯನ್ನು ಪಟ್ಟಣದ ಐಬಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹಾಗೂ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಮಾತನಾಡಿ, ಈ ಸಭೆಯ ಉದ್ದೇಶ ಪಟ್ಟಣದಲ್ಲಿ ಇರುವ ಪ್ರತಿಯೊಂದು ವಾರ್ಡ್ಗಳ ಸಮಸ್ಯೆ ಹಾಗೂ ಅಭಿವೃದ್ಧಿ ವಿಷಯವಾಗಿ ಈ ಸಭೆಯನ್ನು ಕರೆಯಲಾಗಿದೆ. ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿ ನಿಮ್ಮ ವಾರ್ಡಗಳ ಸಮಸ್ಯೆ ಹಾಗೂ ಪಟ್ಟಣದ ಅಭಿವೃದ್ಧಿ ಸಲುವಾಗಿ ತಮ್ಮ ಸಲಹೆ ಸೂಚನೆಗಳನ್ನು ಈ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರು ಮಾತನಾಡಿ, ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಲಾದ ಸಮಸ್ಯೆಗಳ ಬಗ್ಗೆ ಯಾವ ಸಮಸ್ಯೆಗಳು ಸಂಪೂರ್ಣವಾಗಿ ಸಮಸ್ಯೆಯಿಂದ ಪೂರ್ಣಗೊಂಡಿವೆ ಅವುಗಳ ಮಾಹಿತಿ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯನ್ನು ಕೇಳಿದಾಗ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಮಾತನಾಡಿ, ಹಿಂದಿನ ಸಭೆಯಲ್ಲಿ ನಡೆದ ಹಲವು ಸಮಸ್ಯೆಗಳು ಪೂರ್ಣಗೊಂಡಿವೆ ಹಾಗೂ ಇನ್ನೂ ಹಲವು ಸಮಸ್ಯೆಗಳು ಪೂರ್ಣಗೊಳಿಸಲಾಗುದು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರು ಮಾತನಾಡಿ, ಇಂದಿನ ಸಭೆಯಲ್ಲಿ ಚರ್ಚಿಸಲಾದ ಸಮಸ್ಯೆಗಳಾಗಲಿ ಅಥವಾ ಸಲಹೆ ಸೂಚನೆಗಳಾಗಲಿ ಅವುಗಳು ಮುಂದಿನ ಸಾಮಾನ್ಯ ಸಭೆ ಮಾಡುವ ಮುನ್ನವೆ ಪೂರ್ಣಗೊಂಡಿರಬೇಕು ಎಂದರು.
ಈ ದಿನ ನಡಿಸಲಾದ ಸಾಮಾನ್ಯ ಸಭೆಯ ಚರ್ಚೆ ಕುರಿತು ಎಲ್ಲಾ ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಸದಸ್ಯ ರಾಮಣ್ಣ ಬಂಕದಮನಿ, ಸಿದ್ದಲಿಂಗಯ್ಯ ಸ್ವಾಮಿ ಉಳ್ಳಾಗಡ್ಡಿ, ಸಿರಾಜುದ್ದೀನ್ ಕರಮುಡಿ, ಜಗನ್ನಾಥ್ ಭೂವಿ, ಗುದ್ನೆಪ್ಪ ನೋಟಗಾರ, ಬಾಲರಾಜ ಗಾಳಿ, ನೂರುದ್ದೀನ್ ಸಾಬ್ ಗುಡಿಹಿಂದೆಲ್, ಮಲ್ಲಿಕಾರ್ಜುನ್ ಚೌದ್ರಿ, ಶಿವರಾಜ ಯಲ್ಲಪ್ಪ ಗೌಡ್ರು, ಮಂಜುನಾಥ್ ಕೋಳೂರು, ರಾಧಾ ದೊಡ್ಡಮನಿ, ಫಿರದೋಶ ಬೇಗಂ ಖಾಜಿ,ಮಂಜುಳಾ ಕಲ್ಮನಿ, ಕವಿತಾ ಹೂಗಾರ, ಲೀಲಾವತಿ ಮುಧೋಳ್, ಲಕ್ಷ್ಮಿ ಸಬರದ, ನೇತ್ರಾವತಿ ಮಾಲಗಿತ್ತಿ, ಪಟ್ಟಣ ಪಂಚಾಯಿತಿಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.