
ಅಪರಿಚಿತ ಶವ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- ಹಿಟ್ನಾಳ ಮುನಿರಾಬಾದ್ ರೈಲ್ವೇ ನಿಲ್ದಾಣಗಳ ಮದ್ಯೆ ರೈಲಿಗೆ ಸಿಲುಕಿ ಸುಮಾರು ೭೦ ವರ್ಷದ ಅಪರಿಚಿತ ವೃದ್ಧೆ ಮೃತ ಪಟ್ಟ ಬಗ್ಗೆ ಗದಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ:೫೮/೨೦೨೪ ಕಲಂ:೧೯೪ ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.
ಮೃತ ವೃದ್ಧೆ ಚಹರೆ: ಮೃತ ವೃದ್ದೆಯು ದುಂಡುಮುಖ, ಸಾದಾರಣ ಮೈಕಟ್ಟು, ಕಪ್ಪು ಮೈಬಣ್ಣ ಹಾಗೂ ಮೈಮೇಲೆ ಹಸಿರು ಮತ್ತು ಹಳದಿ ಬಣ್ಣಗಳ ಮಿಶ್ರಿತ ಗೆರೆಯುಳ್ಳ ಸೀರೆ ಧರಿಸಿರುತ್ತಾಳೆ .ಈ ಮೃತ ವೃದ್ಧೆಯ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ವೃದ್ಧೆ ಕಾಣೆಯಾಗಿದ್ದಲ್ಲಿ ಕೂಡಲೇ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: ೦೮೩೭೨-೨೭೮೭೪೪, ಮೊ.ಸಂ:೯೪೮೦೮೦೨೧೨೮, ಇ-ಮೇಲ್: gಚಿಜಚಿgಡಿಟಥಿ@ಞsಠಿ.gov.iಟಿ ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: ೦೮೦-೨೨೮೭೧೨೯೧ ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.