ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಗುರುತು ಪತ್ತೆಗೆ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 4- ಕುಷ್ಟಗಿ ಪಟ್ಟಣದ ಎನ್.ಎಚ್ ಕ್ರಾಸ್ ಬಳಿ ಇರುವ ಪುನೀತ ರಾಜಕುಮಾರ ಸರ್ಕಲ್ ಹತ್ತಿರ ಅಕ್ಟೋಬರ್ ೨೮ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯ ಯು.ಡಿ.ಆರ್ ನಂ:೩೮/೨೦೨೪ ಕಲಂ: ೧೯೪ ಬಿ.ಎನ್.ಎಸ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು ಅಂದಾಜು ೫೫-೬೦ ವರ್ಷದವರಾಗಿದ್ದು, ಸುಮಾರು ೫ ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಮೈ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಈ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಪಿ.ಎಸ್.ಐ ಮೊ.ಸಂ:೯೪೮೦೮೦೩೭೫೭ ದೂ.ಸಂ:೦೮೫೩೬-೨೬೭೦೩೩ ಕುಷ್ಟಗಿ ಸಿಪಿಐ ಮೊ.ಸಂ:೯೪೮೦೮೦೩೭೩೨ ದೂ.ಸಂ:೦೮೫೩೬-೨೬೭೦೩೩ ಗಂಗಾವತಿ ಡಿಎಸ್‌ಪಿ ಮೊ.ಸಂ: ೯೪೮೦೮೦೩೭೨೧, ದೂ.ಸಂ: ೦೮೫೩೩-೨೩೦೮೫೩, ಎಸ್.ಪಿ. ಕೊಪ್ಪಳ: ೦೮೫೩೯-೨೩೦೧೧೧ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Leave a Reply

Your email address will not be published. Required fields are marked *

error: Content is protected !!