2

ಪೋಲೀಸ್ ಇಲಾಖೆಗೆ ಆಯ್ಕೆಯಾದ 28 ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಸನ್ಮಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ೨೪*೭ ಡಿಜಿಟಲ್ ಗ್ರಂಥಾಲಯದ ೨೮ ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆ
ಶ್ರೀ ಗವಿಮಠ ತ್ರಿವಿಧ ದಾಸೋಹದ ನೆಲೆಯಾಗಿದೆ. ೨೦೨೧ರ ಕರೋನಾ ಮಹಾಮಾರಿಯ ಹಾವಳಿಯ ಸಂದರ್ಭದಲ್ಲಿ ೨೪*೭ ಡಿಜಿಟಲ್ ಗ್ರಂಥಾಲಯವನ್ನು ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜನವರಿ ೨೦೨೧ ರಲ್ಲಿ ಸ್ಥಾಪಿಸುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆಯನ್ನು ಶ್ರೀ ಗವಿಮಠವು ನೀಡಿದೆ.

ಈ ಗ್ರಂಥಾಲಯದಲ್ಲಿ ಪದವಿ ಮುಗಿಸಿ ವಿವಿಧ ಸರಕಾರಿ ಕೆಲಸಕ್ಕೆ ತಯಾರಿ ನಡೆಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಅವಕಾಶವನ್ನು ಕಲ್ಪಿಸಲಾಗಿದೆ.

ಗ್ರಂಥಾಲಯದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೧೮೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತರಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಬೇರೆ ಬೇರೆ ಜಿಲ್ಲೆಗಳಾದ ಹಾಸನ, ಮಂಡ್ಯ, ಚಿಕ್ಕಮಂಗಳೂರು, ರಾಯಚೂರು, ಬೀದರ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗುಲ್ಬರ್ಗ. ಇಲ್ಲಿಯವರೆಗೆ ಒಟ್ಟು ೧೬ ಜಿಲ್ಲೆಗಳಿಂದ ಆಗಮಿಸಿ ಇದರ ಉಪಯೋಗ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ. ಸದ್ಯ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ಪರೀಕ್ಷೆಗಾಗಿ ತಯಾರಿ ನಡೆಸಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಳೆದ ಈ ಮೂರು ವರ್ಷಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರಕಾರಿ ಹುದ್ದೆಗಳನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ಹಸನಾಗಿಸಿಕೊಂಡಿದ್ದಾರೆ.

ಪ್ರಸಕ್ತ ವರ್ಷದ ಜನವರಿ ೨೦೨೪ರಲ್ಲಿ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ನಡೆದ ಪರೀಕ್ಷೆಯಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ೨೪*೭ ಡಿಜಿಟಲ್ ಗ್ರಂಥಾಲಯದ ೨೮ ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಇದಲ್ಲದೆ ೯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಶಿಕ್ಷಕರಾಗಿ, ೨ ವಿದ್ಯಾರ್ಥಿಗಳು ಅಕೌಂಟೆ0ಟ್ ಹುದ್ದೆಗಳಿಗೆ, ೨ ವಿದ್ಯಾರ್ಥಿಗಳು ಅಸಿಸ್ಟೆಂಟ್ ಇಂಜಿನಿಯರ್, ೨ ವಿದ್ಯಾರ್ಥಿಗಳು ಲೈಬ್ರರಿ ಇನ್ಸ್ಟ್ರಕ್ಟರ್, ಒಬ್ಬ ವಿದ್ಯಾರ್ಥಿನಿ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷದಾಯಕ ವಿಷಯವಾಗಿದೆ.

ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಪೋಲೀಸ್ ಇಲಾಖೆಗೆ ಆಯ್ಕೆಯಾದ ನಮ್ಮ ಗ್ರಂಥಾಲಯದ ೨೮ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಸರಕಾರಿ ಹುದ್ದೆಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕರೆಸಿ ಅಭಿನಂದಿಸಿ, ಶ್ರೀಮಠದಿಂದ ಸನ್ಮಾನಿಸಿ, ಶುಭ ಹಾರೈಸಲಾಯಿತು.

Leave a Reply

Your email address will not be published. Required fields are marked *

error: Content is protected !!