
ಆರ್. ಎಚ್. ಹುಲಗಿ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06 ನಗರದ ಬ್ರಾಹ್ಮಣ ಸಮಾಜದ ಹಿರಿಯರು ವಾರಕಾರ ಓಣಿಯ ನಿವಾಸಿ ಮತ್ತು ಹಿರಿಯ ವಕೀಲ ಆರ್.ಎಚ್. ಹುಲಗಿ (94) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಕೊಪ್ಪಳ ರಾಯರ ಮಠದ ಅಧ್ಯಕ್ಷರೂ ಆಗಿದ್ದ ಅವರಿಗೆ ನ್ಯಾಯಾಧೀಶರಾದ ವೆಂಕಟೇಶ್. ಆರ್. ಹುಲಗಿ ಸೇರಿ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ; ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಕೊಪ್ಪಳದಲ್ಲಿ ಜರುಗಿತು.
ಸಂತಾಪ ; ಜಿಲ್ಲಾ ವಕೀಲರ ಸಂಘ ಸೇರಿದ ನಗರದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.