
ಆಯೋಗ ರಚನೆ ಮಾದಿಗ ಸಮುದಾಯಕ್ಕೆ ಕಣ್ಣಿಗೆ ಮಣ್ಣು ಎರಚುವ ಕೆಲಸ : ಡಾ.ಲಕ್ಷ್ಮಿಕಾಂತ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿ ಇದೀಗ ಒಳ ಮೀಸಲಾತಿ ಕುರಿತು ಸುಪ್ರೀಂ ಸ್ಪಷ್ಟ ಆದೇಶ ಹೊರಡಿಸಿದರು ಸರ್ಕಾರ ಆಯೋಗ ರಚನೆ ಮಾಡಿವ ಮೂಲಕ ಮಾದಿಗ ಸಮುದಾಯದ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದೆ ಅದಕ್ಕಾಗಿ ಸಂಡೂರಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಡಾ.ಲಕ್ಷ್ಮಿಕಾಂತ್ ಜೆ ಅವರು ಹೇಳಿದರು.
ನಗರದ ಸಂಡೂರು ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರದ ವಿಫಲತೆಗಳನ್ನು ಮುಚ್ಚಿಹಾಕಲು ಅಬ್ರಾಹ್ಮಣ, ಬಹುಜನ, ಅಹಿಂದ, ಜಾತ್ಯತೀತ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿಯ ಜನರಿಗೆ ಮಂಕುಬೂದಿ ಎರಚಿದೆ ಅನ್ನೊದು ನಮ್ಮ ಸಮುದಾಯಗಳಿಗೆ ಮನವರಿಕೆಯಾಗಿದೆ. ಆದ್ದರಿಂದ ಸಂಡೂರಿನ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಚುನಾವಣೆ ಸಮಯದಲ್ಲಿ ಹಣ ಹೆಂಡದಿಂದ ದಲಿತರ ಮತಗಳನ್ನು ಖರೀದಿ ಮಾಡಬಹುದು ಎನ್ನುವ ಪ್ರಜಾ ಪ್ರಭುತ್ವ ವಿರೋಧಿ ಮನಸ್ಥಿತಿಯಿಂದ ಹೊರಬನ್ನಿ ಸಿದ್ದರಾಮಯ್ಯನವರೇ ನೀವು ಬುದ್ಧ ಬಸವ ಅಂಬೇಡ್ಕರ್ ಹೆಸರೆತ್ತಲು ಸ್ವಲ್ಪವಾದರೂ ನೈತಿಕತೆ ಉಳಿಸಿಕೊಂಡಿದ್ದೀರಾ ಎಂದು ಲಕ್ಷ್ಮಿಕಾಂತ್ ಪ್ರಶ್ನಿಸಿದರು.
2020ರ ಸುಪ್ರೀಂ ಕೋರ್ಟ್ 5 ಜನ ನ್ಯಾಯಾಧೀಶರ ಆದೇಶದ ಬಲದಲ್ಲಿಯೇ ಬಿಜೆಪಿ ಅಧಿಕಾರವಧಿಯಲ್ಲಿ ಸ್ಪಷ್ಟತೆ ಮತ್ತು ಬದ್ಧತೆ ತೋರಿಸಿದ. 17% SC 7% ST ಮೀಸಲಾತಿ ಏರಿಕೆ ಮಾಡಿ 2011 ರ ಜನಗಣತಿ ಆಧಾರಿತವಾಗಿಟ್ಟುಕೊಂಡು
ಮಾಧುಸ್ವಾಮಿ ವರದಿಯ ವರ್ಗಿಕರಣದಲ್ಲಿ ಯಾವ ನ್ಯೂನತೆ ಇದೆ? ಇದನ್ನು ಮೊದಲು ಸ್ಪಷ್ಟಪಡಿಸಿ. ಮಾಧುಸ್ವಾಮಿ ವರದಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿಲ್ಲ. ಎಲ್ಲ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಬರಖಾಸ್ತು ಮಾಡಲಾಗಿದೆ. 17% ಮೀಸಲಾತಿ ಹಂಚಿಕೆಯ ಹೊಸ ಸೂತ್ರ ನೀಡಲಾಗಿದೆ. ಇದರ ಮೇಲೊಂದು ಆಯೋಗ ರಚನೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಹರ್ಯಾಣ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕೊಟ್ಟ ಮಾತಿನಂತೆ ಒಳ ಮಿಸಲಾತಿ ಜಾರಿ ಮಾಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಒಳ ಮೀಸಲಾತಿ ಜಾರಿಗೊಳಿಸುವುದರಿಂದ ನುಣಿಚಿಕೊಳ್ಳುತ್ತಿದೆ ಇದು ಮಾದಿಗ ಜನಾಂಗಕ್ಕೆ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷ ಮಾಡಿದ ದೊಡ್ಡ ಮೋಸವಾಗಿದೆ ಎಂದರು.
ಬಿಜೆಪಿ ಪಕ್ಷದಲ್ಲಿರುವ ಭೋವಿ, ಲಂಬಾಣಿ ಮತ್ತು ಹೊಲೆಯ ಜಾತಿಯ ನಾಯಕರು ಒಳ ಮೀಸಲಾತಿ ತೀರ್ಪನ್ನು ಸ್ವಾಗತಿಸಿದ್ದಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವಶ್ಯಕ ಹೆಜ್ಜೆ ಎಂದು ಅನುಮೋದನೆ ಮಾಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ 7 ಜನ ನ್ಯಾಯಧೀಶರ ತೀರ್ಪು ಕೊಟ್ಟರೂ ಅನುಷ್ಠಾನ ಮಾಡುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ಸರ್ಕಾರ ಸರ್ಕಾರ ತೋರಿಸುತಿಲ್ಲ, ಕೂಡಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಅಷ್ಟೇ ಅಲ್ಲದೆ ಒಳ ಮೀಸಲಾತಿ ಜಾರಿ ಆಗುವವರೆಗೂ ಹೊಸ ನೇಮಕಾತಿ ತಡೆಹಿಡಿಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀನಿವಾಸ್ ಮಲ್ಲೇಶ್ ಕಮತ್ತೂರು ಎಂ ಪಂಪಾಪತಿ ಮಲ್ಯಪ್ಪ ಸೇರಿದಂತೆ ನಿವೃತ್ತ ನ್ಯಾಯಮೂರ್ತಿ ಎಲ್ ಜಿ ಹಾವನೂರು ಆಯೋಗದ ವರದಿಯ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡದ ಕಾರಣ ಈ ಸಮುದಾಯಕ್ಕೆ ನೇಮಕಾತಿಗಳಲ್ಲಿ ಆಗಿರುವ ಅನ್ಯಾಯ, ಸಾಮಾಜಿಕ ಅಸಮತೋಲನ ಇಲ್ಲಿಯವರೆಗೆ ಅದನ್ನು ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಮುಂದುವರಿಸಿಕೊಂಡು ಬಂದಿದೆ.