
ಕಟ್ಟಡದ ಮೇಲೆ ಅವೈಜ್ಞಾನಿಕ ಕಾಮಗಾರಿಗೆ, ಗ್ರಾಮಸ್ಥರಿಂದ ವಿರೋಧ
ಕರುನಾಡ ಬೆಳಗು ಸುದ್ದಿ
ಕುಕನೂರು, 8- ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣವಾಗಿ 25ವರ್ಷವಾಗಿದ್ದು ಕಟ್ಟಡ ಸ್ಥಿತಿಲಾವಸ್ಥೆಗೆ ತಲುಪಿದ್ದು ಅದರ ಮೇಲೆ ಕಟ್ಟಡ ಕಾಮಗಾರಿ ಮಾಡುತ್ತೀರುವದನ್ನು ಖಂಡಿಸಿ ಗ್ರಾಮಸ್ಥರು ಶುಕ್ರವಾರ ವಿರೋಧ ವ್ಯಕ್ತಪಡಿಸಿದರು.
ಗ್ರಾಮಸ್ಥರು ಮಾತನಾಡಿ, ಬನ್ನಿಕೊಪ್ಪ ಗ್ರಾಮದಲ್ಲಿ 2006-7ನೇ ಸಾಲಿನಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು, ಬಸ್ ನಿಲ್ದಾಣವಾಗಿ 18ವರ್ಷಗಳು ಗತಿಸಿವೆ. ಬಸ್ ನಿಲ್ದಾಣ ಬಹುತೇಕ ಶೇ.80% ಬಿರುಕುಗೊಂಡು ಬಿಳುವ ಹಂತದಲ್ಲಿ ಇದೆ. ಆದರೆ ಸರಕಾರದಿಂದ ಇದೆ ಕಟ್ಟಡದ ಮೇಲೆ 2.21.61 ಕೋಟಿ ರೂ.ವೆಚ್ಚದಲ್ಲಿ ನವೀಕರಣಕ್ಕೆ ಅನುಧಾನ ಬಂದಿದೆ. ಮಳೆಬಂದರೆ ಸಾಕು ಎಲ್ಲೆಂದರಲ್ಲಿ ಸೋರುತ್ತೀರುವ ನಿಲ್ದಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಧಕ ಬಾಧಕ ನೋಡದೆ ಏಕಾಏಕಿ ಸೋರುತ್ತೀರುವ ಬಸ್ ನಿಲ್ದಾಣಕ್ಕೆ ನವೀಕರಣ ಮಾಡುವ ಜೋತೆಗೆ ಕಟ್ಟಡದ ಮೇಲೆ ಕಟ್ಟಡ ಮಾಡುತ್ತೀರುವದು ಅವೈಜ್ಞಾನಿಕವಾಗಿದೆ. ಸಂಪೂರ್ಣವಾಗಿ ಬಸ್ ನಿಲ್ದಾಣವನ್ನು ಕೆಡವಿ ಅದೆ ದುಡ್ಡಿನಿಂದ ಹೊಸ ಬಸ್ ನಿಲ್ದಾಣ ಮಾಡಿದರೆ ಗ್ರಾಮಸ್ಥರಿಗೆ, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಳೆಯ ಬಸ್ ನಿಲ್ದಾಣದ ಮೇಲೆ ಕಟ್ಟಡ ಮಾಡಿದರೆ ಪ್ರಯಾಣಿಕರ ಮೇಲೆ ಬಿದ್ದರೆ ಅಧಿಕಾರಿಗಳೇ ನೇರವಾಗಿ ಹೊಣೆಯಾಗಲಿದ್ದಾರೆ. ಈ ಕಾಮಗಾರಿಯನ್ನು ನಿಲ್ಲಿಸಿ ಬಂದಿರುವ ಅನುಧಾನದಿಂದ ಗುಣಮಟ್ಟದ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಬೇಕು ಇಲ್ಲದಿದ್ದರೆ ಗ್ರಾಮಸ್ಥರು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಿದ್ದಪ್ಪ ಮಾಳೇಕೊಪ್ಪ, ನಾಗರಾಜ ವೆಂಕಟಾಪೂರ, ಶಿವಪ್ಪ ಚೌಡಿ, ಹನಮಂತಗೌಡ ಆದಾಪೂರ, ನಾಗರಾಜ ಹಳ್ಳಿಕೇರಿ, ಮರಿಗೌಡ ತೆಗ್ಗಿನಮನಿ, ಹಾಲೇಶ ಯರಾಸಿ, ಅಶೋಕ ಸಜ್ಜನ್, ವೀರಣ್ಣ ಗೋಂಧಿ ಸೇರಿದಂತೆ ಇತರರು ಇದ್ದರು.