5

ಸಂಪೂರ್ಣ ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಗಾರ

ಕರುನಾಡ ಬೆಳಗು ಸುದ್ದಿ

ವಿಜಯನಗರ, 8- ಶಿಕ್ಷಣ ಫೌಂಡೇಶನ್, ಡೆಲ್ ಕಂಪನಿ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ನೋಂದಣಿಯಾದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಹಾಗೂ ಸಮುದಾಯದ ಜನರಿಗೆ ಸಂಪೂರ್ಣ ಡಿಜಿಟಲ್ ಸಾಕ್ಷರತೆಯ ತರಬೇತಿ ಕಾರ್ಯಕ್ರಮ ಆರಂಭ ಮಾಡಲಗಿದೆ.

ಈಗಾಗಲೇ ಈ ತರಬೇತಿ ಕಾರ್ಯಕ್ರಮ ಆರಂಭವಾಗಿದ್ದು, ಮಲಪನಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಂಪೂರ್ಣ ಡಿಜಿಟಲ್ ಸಾಕ್ಷರತಾ ತರಬೇತಿಯನ್ನು ಅರಿವು ಕೇಂದ್ರದ ಮೇಲ್ವಿಚಾರಕರು ಉಮಾದೇವಿ ಇವರು ತರಬೇತಿ ನೀಡುತ್ತಿದ್ದಾರೆ.

ಡಿಜಿಟಲ್ ಸಾಕ್ಷರತೆ ತರಬೇತಿಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಬಳಕೆಯ ಭಾಗವಾದ ನಂಬರ್ ಸೇವ್ ಮಾಡುವುದು, ಸಂದೇಶ ರವಾನಿಸುವುದು, ಪೋನ್ ಕರೆ ಹಾಗೂ ವಾಟ್ಸಾಪ್, ಫೇಸ್‌ಬುಕ್, ಇಂಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಗೂಗಲ್ ಕ್ರೋಮ್ ನಂತಹ ಸರ್ಚ್ ಇಂಜಿನ್‌ಗಳಲ್ಲಿ ಅಗತ್ಯ ಮಾಹಿತಿ ಹುಡುಕಲು ಮತ್ತು ಮೊಬೈಲ್ ನಲ್ಲಿ ಪೇರೆಂಟ್ ಐಡಿ ಕ್ರಿಯೇಟ್ ಮಾಡಿ ಮಕ್ಕಳು ಉತ್ತಮ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ತಿಳಿಸಿಕೊಡುವುದು, ಫೋನ್ ಪೇ, ಗೂಗಲ್ ಪೇ ಹಾಗೂ ಇನ್ನಿತರ ಬ್ಯಾಂಕಿAಗ್ ಸೌಲಭ್ಯಗಳ ಕುರಿತು ಸಂಘದ ಮಹಿಳೆಯರಿಗೆ ಈ ತರಬೇತಿಯಲ್ಲಿ ತಿಳಿಸಿಕೊಡಲಾಗುವುದು.

ಗ್ರಾಮ ಮಹಿಳೆಯರು ಮತ್ತೋಬ್ಬರ ಮೇಲೆ ಅವಲಂಬಿಯಾಗದAತೆ ಹಾಗೂ ತಮ್ಮ ಮಕ್ಕಳ ಹಿತಾಸಕ್ತಿಗಾಗಿ ಕಾಪಾಡಲು ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!