1

ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದೆ : ಯಡಿಯೂರಪ್ಪ

ಕರುನಾಡ ಬೆಳಗು ಸುದ್ದಿ

ಸಂಡೂರು, 8- ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಇಂದು ಬೊಮ್ಮಘಟ್ಟದಲ್ಲಿ ನಡೆದ ಭರ್ಜರಿ ಪ್ರಚಾರ ಸಭೆ ಯಶಸ್ವಿಯಾಗಿ ನೆರವೇರಿತು.

4 ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾದ ತುಕಾರಾಮ್ ಅವರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದ್ದು, ಸಂಡೂರಿನ ಸಮಗ್ರ ಅಭಿವೃದ್ಧಿಗಾಗಿ ಮತ್ತು ಜನತೆಯ ಮನೆ ಮನೆಗೆ ಮೂಲಭೂತ ಸೌಕರ್ಯಗಳನ್ನು ಕೊಂಡೊಯ್ಯಲು ಯಡಿಯೂರಪ್ಪನವರು ಮತ್ತು ಜನಾರ್ಧನ್ ರೆಡ್ಡಿ ನೇತೃತ್ವದಲ್ಲಿ ಸಾಕಾರಗೊಳಿಸುವುದಾಗಿ ಬೊಮ್ಮಘಟ್ಟದ ಜನತೆಯ ಬಳಿ ವಿನಂತಿಸಿಕೊ0ಡೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ವಿ.ಸುನೀಲಕುಮಾರ, ಭೈರತಿ ಬಸವರಾಜ, ಸತೀಶ ರೆಡ್ಡಿ, ಆಂಧ್ರ ಪ್ರದೇಶದ ಶಾಸಕ ಸುಧಾಕರ ರೆಡ್ಡಿ, ಮಾಜಿ ಶಾಸಕ ರೇಣುಕಾಚಾರ್ಯ, ತಿಪ್ಪೇಸ್ವಾಮಿ, ರಾಮಚಂದ್ರ ರೆಡ್ಡಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಮಂಜುಳಾ, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ದಿವಾಕರ, ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಹಿರಿಯ ಟಿ.ಕೃಷ್ಣಪ್ಪ ಸೇರಿದಂತೆ ಗ್ರಾಮದ ಗುರು ಹಿರಿಯರು, ಪ್ರಮುಖರು, ಪದಾಧಿಕಾರಿಗಳು, ತಾಯಂದಿರು, ಯುವಕಮಿತ್ರರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!