KB

ಕನಕದಾಸರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 8- ಕರ್ನಾಟಕ ಸರ್ಕಾರದ ನಿರ್ದೇಶನದಂತೆ ತಾಲೂಕ ಆಡಳಿತ ಸಮುದಾಯಗಳ ಸಮನ್ವಯದಲ್ಲಿ ದಾಸ ಶ್ರೇಷ್ಠ ಕವಿ ಕನಕದಾಸರ ಜಯಂತಿಯನ್ನು ನ. ೧೮ರಂದು ಬೆಳಿಗ್ಗೆ ೮ ಗಂಟೆಗೆ ಕ್ರೀಡಾ ಮೈದಾನದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.

ತಾಲೂಕ ಕಚೇರಿ ಸಭಾಭವನದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ತಾಲೂಕ ಪಂಚಾಯತ್ ಕಾರ್ಯಾಲಯದ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ತಪ್ಪದೇ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮೈಸೂರಿನ ಡಾ ವೆಂಕಟಚಲಪತಿಯವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವೇಷ ಭೂಷಣ ಪ್ರದರ್ಶನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆಯರಿಂದ ಕಳಸ ಕುಂಭ ಸಮಾಜದವರಿಂದ ಡೊಳ್ಳು ಕಲಾವಿದರಿಂದ ಡೊಳ್ಳು ಕುಣಿತ ಭಾಗವಹಿಸಿದ ಸಾರ್ವಜನಿಕರಿಗೆ ಲಘು ಉಪಹಾರ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಯಿತು ಶಿಷ್ಟಾಚಾರದ ಅನ್ವಯ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು ಮಹಾನಿಯರ ಜಯಂತಿಗಳ ಆಚರಣೆ ಅದ್ದೂರಿಯಾಗಿ ಸರ್ಕಾರ ಮತ್ತು ಸಮುದಾಯ ಸಮನ್ವಯದಲ್ಲಿ ಒಟ್ಟು ೪೬ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಸಮುದಾಯಗಳು ಕೈಜೋಡಿಸಿದಾಗ ಮೆರಗು ಹೆಚ್ಚುತ್ತದೆ ಡೊಳ್ಳು ವಾದ್ಯ ಭಂಡಾರ ಸಾಂಸ್ಕೃತಿಕ ಕಲಾ ತಂಡಗಳೊ0ದಿಗೆ ಮೆರವಣಿಗೆ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದರು.

ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ಗ್ರೇಡ್-೨ ತಹಶೀಲ್ದಾರ್ ಕುಮಾರಿ ಸತ್ಯನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಗಾದಿಲಿಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಪ್ರದೀಪ್, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿದ್ದಯ್ಯ, ನಗರಸಭಾ ಪೌರಾಯುಕ್ತ ಎಚ್.ಎನ್.ಗುರುಪ್ರಸಾದ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಮಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಖಾದರ್ ಬಾಷಾ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ದಮ್ಮೂರು ಸೋಮಪ್ಪ, ಕುರುಬರ ಸಂಘದ ತಾಲೂಕ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಎನ್.ಕರಿಬಸಪ್ಪ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಗೊರವರ ಶ್ರೀನಿವಾಸ್, ಪೂಜಾರಿ ಮಲ್ಲಿಕಾರ್ಜುನ, ವಕೀಲ ಯಶವಂತ್, ಸಿಆರ್‌ಪಿ ಮಾರುತಿ, ಜೆಸ್ಕಾಂ ಖಾನ್ ಸಾಬ್, ಎಸ್.ಬಸವರಾಜ್, ಶೇಖರ್, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು, ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ಸರ್ಕಾರದ ನಿರ್ದೇಶನದಂತೆ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ನವಂಬರ್ ೧೧ರಂದು ತಾಲೂಕ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತದೆ ಎಲ್ಲರೂ ತಪ್ಪದೇ ಪಾಲ್ಗೊಳ್ಳಬೇಕು ಎಂದು ತಹಸಿಲ್ದಾರರು ವಿನಂತಿಸಿಕೊ0ಡರು.

Leave a Reply

Your email address will not be published. Required fields are marked *

error: Content is protected !!