1

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಬಿಜೆಪಿ : ಮಾಜಿ ಸಚಿವ ಆಚಾರ್

ಕರುನಾಡ ಬೆಳಗು ಸುದ್ದಿ

ಕುಕನೂರು, 9- ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಅದುವೇ ನಮ್ಮ ಭಾರತೀಯ ಜನತಾ ಪಾರ್ಟಿ ಸಂಘಟನೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಪಕ್ಷದ ಕಾರ್ಯಾಲಯದಲ್ಲಿ ಯಲಬುರ್ಗಾ ಮಂಡಲದ ಸಂಘಟನಾ ಪರ್ವ-೨೦೨೪ರ ಮಂಡಲ ಕಾರ್ಯಾಗಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಮಾತನಾಡಿ, ೨೫೦ ಭೂತನಲ್ಲಿ ಇಬ್ಬರಂತೆ ಸಕ್ರಿಯ ಸದಸ್ಯರನ್ನು ಮಾಡಬೇಕು, ಪ್ರತಿಯೊಂದು ಭೂತನಲ್ಲಿ ಸದಸ್ಯರ ಸಂಘಟನೆ ರಚನೆ ಮಾಡಿಕೊಳ್ಳಿ ಅದರಲ್ಲಿ ೫೦ ಜನ ಸದಸ್ಯರನ್ನು ಮಾಡುವ ಕರ್ತವ್ಯ ಪ್ರತಿಯೊಬ್ಬ ಭೂತಿನ ಸಕ್ರಿಯ ಸದಸ್ಯರ ಕರ್ತವ್ಯ ಎಂದರು.

ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಸದಸ್ಯರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಸ್ಥಾನಪಡಿದುಕೊಂಡಿದೆ. ಹಾಗೂ ರಾಜ್ಯದ ಪ್ರಥಮ ಸ್ಥಾನದಲ್ಲಿ ನಮ್ಮ ಯಲಬುರ್ಗಾ ಮಂಡಲದ ತಾಲೂಕಿನಲ್ಲೇ ಹೆಚ್ಚು ಸದಸ್ಯರನ್ನು ಹೊಂದಿರುವ ಸ್ಥಾನ ಪಡೆದಿದೆ ಎಂದು ನಮಗೆ ಹೇಳಲು ತುಂಬಾ ಹೆಗ್ಗಳಿಕೆಯ ವಿಷಯವಾಗಿದೆ. ಈಗಾಗಲೇ ನಮ್ಮ ಯಲಬುರ್ಗಾ ತಾಲೂಕಿನ ಮಂಡಲದ ಸದಸ್ಯರ ಸಂಖ್ಯೆ ೩೩೦೦ ಇದೆ ಇನ್ನು ಆರು ದಿನದಲ್ಲಿ ಅದು ೪೦೦೦ಕ್ಕೆ ಏರಿಕೆ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚು ಭ್ರಷ್ಟಾಚಾರ ಮಾಡುತ್ತಿರುವ ಸರ್ಕಾರವಾಗಿದೆ. ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲ ಅಭಿವೃದ್ಧಿಯ ದುಡ್ಡನ್ನು ಗ್ಯಾರೆಂಟಿ ಯೋಜನೆಗಳಿಗಾಗಿ ಬಳಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದವರು ಹಗಲು ದರೋಡೆಕೋರರು. ಈ ರಾಜ್ಯದಲ್ಲಿ ವಕ್ಪ ಬೋರ್ಡ್ನ ಮಂತ್ರಿಯಾದವರು ಅಕ್ರಮವಾಗಿ ಡಿಸಿಗಳಿಗೆ ಹೆದರಿಸಿ ವಕ್ಪ ಬೋರ್ಡ್ ನಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ.

ಭಾರತಿ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡಿ, ಭಾರತೀಯ ಜನತಾ ಪಾರ್ಟಿಯ ತಾಲೂಕಿನ ಕುಷ್ಟಗಿ, ಯಲಬುರ್ಗಾ, ಕುಕನೂರ, ಕನಕಗೀರಿ, ಗಂಗಾವತಿ, ಕಾರಟಗಿ,ಕೊಪ್ಪಳ ಜಿಲ್ಲೆ ಸೇರಿ ಒಟ್ಟು ಸದಸ್ಯರ ಸಂಖ್ಯೆ ೧ ಲಕ್ಷದ ೨೦ ಸಾವಿರ ಸದಸ್ಯರು ಮಾಡಿದ್ದೇವೆ ಹಾಗೆ ಈ ಸದಸ್ಯರ ಸಂಖ್ಯೆಯು ಇನ್ನೂ ಹೆಚ್ಚು ಮಾಡುವ ಪ್ರಯತ್ನವನ್ನು ಎಲ್ಲಾ ಸದಸ್ಯರು ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾರುತಿ ಹೊಸಮನಿ ಭಾಜಪಾ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ಮಾಹೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನರಸಿಂಗರಾವ್ ಕುಲಕರ್ಣಿ ಖಜಾಂಚಿ, ಸುರಪುರ ವಕೀಲರು, ಬಸಲಿಂಗಪ್ಪ ಭೂತೆ, ಸಿ.ಎಚ್.ಪೊಲೀಸ್ ಪಾಟೀಲ್, ಶಿವಲೀಲಾ ದಳವಾಯಿ ರಾಜ್ಯ ಕಾರ್ಯ ಕಾರ್ಣಿ ಸದಸ್ಯರು, ವೀರಣ್ಣ ಹುಬ್ಬಳ್ಳಿ ತಾಲೂಕು ವಕ್ತಾರ, ಅಂದಯ್ಯ ಕಳ್ಳಿಮಠ ಪ.ಪಂ ಅಧ್ಯಕ್ಷ, ಅಂಬರೀಶ್ ಹುಬ್ಬಳ್ಳಿ ಪ.ಪಂ ಮಾಜಿ ಅಧ್ಯಕ್ಷ, ಸಿದ್ದು ಮಣ್ಣಿನ್ ಎಸ್ಸಿ ಮೋರ್ಚ ಅಧ್ಯಕ್ಷ, ಶರಣಪ್ಪ ಬಣದಬಾವಿ, ಬಸವಣಗೌಡ್ರ ತೊಂಡಿಹಾಳ, ಭಾಜಪಾ ಯಲಬುರ್ಗಾ ಮಂಡಲದ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.

ಇವಾಗಿರುವ ಯಲಬುರ್ಗಾ ತಾಲೂಕಿನ ಶಾಸಕರು ನಾನು ಈ ಹಿಂದೆ ಸಚಿವನಿದ್ದಾಗ ಕುಕನೂರು ತಾಲೂಕಿಗೆ ಮಿನಿ ವಿಧಾನಸೌಧ, ಕಟ್ಟಡ ಕಟ್ಟೋಕೆ ಭೂಮಿ ಹಾಗೂ ಹಣವನ್ನು ಕೊಟ್ಟಿದ್ದೆ ಆದರೆ ಇವಾಗಿರುವ ಶಾಸಕರು ಆ ಭೂಮಿಯನ್ನು ಬಿಟ್ಟು ಯಾವುದೋ ದೇವಸ್ಥಾನದ ಭೂಮಿಗೆ ಕಣ್ಣು ಹಾಕಿದ್ದಾರೆ ಕೊಟ್ಟಿರುವ ಭೂಮಿ ಬಿಟ್ಟು ಜನರ ಬಳಿ ಭೂಮಿ ಕೊಡಿ ಭೂಮಿ ಕೊಡಿ ಎಂದು ಕೇಳುವುದು ಎಷ್ಟರಮಟ್ಟಿಗೆ ಸರಿ

-ಮಾಜಿ ಸಚಿವ ಹಾಲಪ್ಪ ಆಚಾರ್

Leave a Reply

Your email address will not be published. Required fields are marked *

error: Content is protected !!