WhatsApp Image 2024-11-09 at 5.26.48 PM

11 ರಂದು ವೀರ ರಾಣಿ ವನಿತೆ ಒನಕೆ ಓಬವ್ವ ಜಯಂತಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 4- ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ನಗರ ಸಭೆ ಸರ್ವರ ಸಂಯುಕ್ತ ಆಶ್ರಯದಲ್ಲಿ ವೀರರಾಣಿ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ನವಂಬರ್ ೧೧ ರಂದು ಸೋಮವಾರ ಬೆಳಿಗ್ಗೆ ೮ ಗಂಟೆಗೆ ಆಚರಿಸಲಾಗುವುದು.

ತಾಲೂಕ ಕ್ರೀಡಾ ಮೈದಾನದಿಂದ ಒನಕೆ ಓಬವ್ವನ ಭಾವಚಿತ್ರದ ಮೆರವಣಿಗೆ ೧೧ ಗಂಟೆಗೆ ತಾಲೂಕ ಪಂಚಾಯತ್ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಕರ್ನಾಟಕ ಸರ್ಕಾರ ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹಮದ್ ಖಾನ್ ಅವರ ಘನ ಉಪಸ್ಥಿತಿ ಶಾಸಕ ಬಿ.ಎಂ.ನಾಗರಾಜ ಉದ್ಘಾಟಿಸುವರು.

ಮುಖ್ಯ ಅತಿಥಿಗಳು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಹಾಗೂ ಕಂಪ್ಲಿ ಶಾಸಕ ಜೆಎನ್ ಗಣೇಶ್, ಸಂಸದ ಈ ತುಕಾರಾಂ, ಕೆ ರಾಜಶೇಖರ್ ಹಿಟ್ನಾಳ್, ಡಾ.ಸೈಯದ್ ನಾಸಿರ್ ಹುಸೇನ್, ವಿಧಾನಪರಿಷತ್ ಶಾಸಕ ಡಾ.ಚಂದ್ರಶೇಖರ್ ಬಿ ಪಾಟೀಲ್, ಶಶಿಲ್ ಜಿ ನಮೋಶಿ, ವೈ ಎಂ ಸತೀಶ್, ಡಾ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ನಗರಸಭಾ ಸದಸ್ಯ ಹಾಗೂ ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಹೆಚ್ ಗಣೇಶ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರು ಹಾಗೂ ನಗರಸಭಾ ಮಾಜಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸೇರಿದಂತೆ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿ ತಹಶೀಲ್ದಾರ್ ಎಚ್ ವಿಶ್ವನಾಥ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎ ಗಾದಿಲಿಂಗಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ ಸಿದ್ದಯ್ಯ, ನಗರಸಭಾ ಪೌರಯುಕ್ತ ಎನ್.ಹೆಚ್.ಗುರುಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

error: Content is protected !!