
ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, ೯9- ವಿಜಯನಗರ ಜಿಲ್ಲೆ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘ ಉದ್ಘಾಟನೆ ಸಮಾರಂಭವನ್ನು ಹೊಸಪೇಟೆಯ ರೋಟರಿಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು.
ಈ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಜಿ ಮಲ್ಲಿಕಾರ್ಜುನ್ ಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿಜಯನಗರ ಜಿಲ್ಲೆ, ಮಲ್ಲೇಶಪ್ಪ ವೈ, ಬಳ್ಳಾರಿ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರು ಭಾಗಿಯಾಗಿದ್ದರು.
ಸದರಿ ಉದ್ಘಾಟನಾ ಸಮಾರಂಭವು ವಿಜಯನಗರ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ನಾಗರಾಜ.ಕೆ, ಉಪಾಧ್ಯಕ್ಷ ಮೋಹನ್.ಕೆ, ಪ್ರಧಾನ ಕಾರ್ಯದರ್ಶಿ ಗೌಸ್, ಖಜಾಂಚಿ ಪ್ರದೀಪ್.ಕೆ, ಗೌರವಾಧ್ಯಕ್ಷ ಕಬ್ಬೇರ ದೊಡ್ಡ ಹನುಮಂತಪ್ಪ ಸರ್ವ ಸದಸ್ಯರು ಇತರರಿದ್ದರು.