
ಬೇವೂರು : ವಾಲ್ಮೀಕಿ ಜಯಂತಿ ಆಚರಣೆ
ಮಹರ್ಷಿ ವಾಲ್ಮೀಕಿ ಮನು ಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ : ಅನ್ನಪೂರ್ಣ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 10- ತಾಲೂಕಿನ ಬೇವೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಿದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಅನ್ನಪೂರ್ಣ ಯಮನಪ್ಪ ಗಡ್ಡದ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಕೇವಲ ಒಂದೇ ಸಮಾಜ ಸೀಮಿತವಾಗದೇ ಮನು ಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅಂತಹ ಮಹಾನ್ ಪುರಷರ ಆದರ್ಶಗಳನ್ನು ಪ್ರತಿಯೊಬ್ಬರೂ ಚಾಚು ತಪ್ಪದೇ ಅಳವಡಿಸಿಕೊಳ್ಳಬೇಕು. ಸಮಾಜ ಬಂಧುಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾನಪ್ಪ ಪೂಜಾರ್ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನವೇ ಮಹರ್ಷಿ ವಾಲ್ಮೀಕಿ ಸಮುದಾಯದಿಂದ ಆರಂಭಗೊAಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ, ಕ್ರಾಸ್ ವರಗೆ ತಲುಪಿ ಪುನಃ ತಲುಪಿತು.
ಈ ವೇಳೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಗುರುನಗೌಡ ಸಾಲಬಾವಿ, ಚನ್ನಬಸವ ಕುಲಕರ್ಣಿ, ಮಾನಪ್ಪ ವಾಲ್ಮೀಕಿ, ಯಮನಪ್ಪ ಗಡ್ಡದ್, ಹೇಮಂತ ಹಂಚಿ,ಈರಪ್ಪ ಕರಿಬೀರಪ್ಪನವರ್, ಪರಶುರಾಮ್ ಗುರಿಕಾರ್, ಭೀಮೇಶ, ಶೇಖರಗೌಡ ಪೋ.ಪಾಟೀಲ್, ಗಂಗಾಧರ್, ಶರಣಪ್ಪ ಬಳಿಗಾರ್, ದೇವಪ್ಪ ಸಂಗಟಿ, ದೇವಿಂದ್ರಪ್ಪ ತಳವಾರ, ಶರಣಪ್ಪ ಪೂಜಾರ್ ಸೇರಿದಂತೆ ಮತ್ತಿತರು ಇದ್ದರು.