3

ಶ್ರೀ ವಾಸವಿ ವಿದ್ಯಾಲಯದಲ್ಲಿ ಉಚಿತ ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಸ್ಪರ್ಧೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 10- ನಗರದ ಹೆಸರಾಂತ ಶ್ರೀ ವಾಸವಿ ವಿದ್ಯಾಲಯದಲ್ಲಿ ಆರ್‌ಎಸ್‌ಬಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ಸಹಕಾರದೊಂದಿಗೆ ಎರಡನೇ ಬಾರಿ ಉಚಿತ ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಸ್ಪರ್ಧೆ ೧೦ ನವಂಬರ್ ೨೦೨೪ ರಂದು ವಿಜೃಂಭಣೆಯಿ0ದ ನಡೆಯಿತು.

ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪರೀಕ್ಷೆಯನ್ನು ನಡೆಸಲಾಯಿತು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಳ್ಳಾರಿ ನಗರದ ಸುಮಾರು ೪೦ ಶಾಲೆಗಳಲ್ಲಿ, ವ್ಯಾಸಂಗ ಮಾಡುತ್ತಿರುವ ೫ನೇ, ೬ನೇ, ೭ನೇ ಮತ್ತು ೮ನೇ ತರಗತಿಯ ಸುಮಾರು ೮೨೦ ವಿದ್ಯಾರ್ಥಿಗಳು ಈ ಪರೀಕ್ಷೆಯಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಸೃಜನಶೀಲತೆ, ಆತ್ಮಬಲ, ಸಹಕಾರ ಮತ್ತು ಹೊಂದಾಣಿಕೆಯ ಅಂಶಗಳನ್ನು ಬೆಳೆಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿತ್ತು.

ವಿದ್ಯಾರ್ಥಿಗಳ ಜೀವನದಲ್ಲಿ. ಸಾಮಾನ್ಯ ಜ್ಞಾನ ಸ್ಪರ್ಧೆಗಳು ಬಹಳ ಮಹತ್ವವನ್ನು ಹೊಂದಿವೆ. ಇವು ವಿಶೇಷವಾಗಿ ವಿದ್ಯಾಭ್ಯಾಸದ ಬುನಾದಿಯನ್ನು ಬಲಪಡಿಸಿ, ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿಗೆ ಹಾಗೂ ಆತ್ಮವಿಶ್ವಾಸದ ಪೂರಕವಾದ ಮನೋಭಾವವನ್ನು ರೂಪಿಸುತ್ತವೆ.

ಶಾಲೆಯ ಸಿಬ್ಬಂದಿ, ಶಿಕ್ಷಕರು, ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಈ ಪರೀಕ್ಷೆಯು ಅತ್ಯಂತ ಕ್ರಮಬದ್ಧವಾಗಿ ನಡೆಯಿತು. ಪಾಲಕರು ಮತ್ತು ವಿದ್ಯಾರ್ಥಿಗಳು ಶಾಲೆಯ ವ್ಯವಸ್ಥೆಯನ್ನು ಮೆಚ್ಚಿಕೊಂಡು, ಪರೀಕ್ಷೆಯ ಸೌಲಭ್ಯಗಳು ಮತ್ತು ಮ್ಯಾನೇಜ್‌ಂಟ್ ನ ಸಹಾಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಶ್ರೀ ವಾಸವಿ ವಿದ್ಯಾಲಯ ಈ ಸ್ಪರ್ಧೆಯು ವಿದ್ಯಾರ್ಥಿಗಳ ಪ್ರಗತಿಯ ಹೊಸ ಅಂಕಣ ಸೃಷ್ಟಿಸಲು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸಲು ಮಹತ್ವದ ವೇದಿಕೆಯಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿಪ್ರಾಯ ಪಟ್ಟರು.

ಪರೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಸಿಹಿ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!