IMG-20241113-WA0024

ಶ್ರೀ ವಿಠಲ ಕೃಷ್ಣ ದೇವಸ್ಥಾನದಲ್ಲಿ

ತುಳಸಿ-ದಾಮೋದರ ವಿವಾಹ ಮಹೋತ್ಸವ
ನಗರದ ಅಭಿವೃದ್ಧಿಗೆ ಶಕ್ತಿ ಮಿರಿ ಶ್ರಮಿಸುವೆ – ಗುಪ್ತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ಭಗವಂತನ ಆಶಿರ್ವಾದದಿಂದ ನಗರದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ ಎಂದು ನಗರಾಭಿವೃದ್ಧಿ ಪ್ರಾಧಿಕಾದ ಅಧ್ಯಕ್ಷ ಉದ್ಯಮಿ ಶ್ರೀನಿವಾಸ ಗುಪ್ತ ಹೇಳಿದರು .

ಅವರು ಬುಧವಾರ ದಂದು ನಗರದ ಶ್ರೀ ವಿಠಲ ಕೃಷ್ಣ ದೇವಸ್ಥಾನದಲ್ಲಿ ತುಳಸಿ, ದಾಮೋದರ ವಿವಾಹ ಪೂಜಾ ಮಹೋತ್ಸವದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ನಗರಕ್ಕೆ ಅಗತ್ಯ ಕೊಡುಗೆ ನೀಡುವುದು ಕನಸಾಗಿದ್ದು ನಗರದ ಅಭಿವೃದ್ಧಿಗೆ ಸೇವೆ ಸಲ್ಲಿಸುವುದು ನನ್ನ ಗುರಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಪ್ಪಳದಿಂದ ಬದರಿ ವರೆಗೆ ಪಾದಯಾತ್ರೆ ನಡೆಸಿದ ಹನುಮೇಶ ಕುಲಕರ್ಣಿ ಮಾತನಾಡಿ ಭಗವಂತನ ಸೇವೆ ಮೂಲಕ ಮಾತ್ರ ಸರ್ವವು ಸಾಧ್ಯ ಪಾದಯಾತ್ರೆ – ನಾಮ ಸ್ಮರಣೆ ನಿರಂತರವಾಗಿಬೇಕು ಎಂದರು.

ಸಂಭ್ರಮದ ವಿವಾಹ ; ಶ್ರೀ ಕೃಷ್ಣ ದೇವಸ್ಥಾನದಲ್ಲಿ ತುಳಸಿ ದಾಮೋದರ ವಿವಾಹ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬುಧವಾರ ರಾತ್ರಿ ವಿಠಲ ಕೃಷ್ಣ ದೇವಸ್ಥಾನದ ಬಳಿಯ ತುಳಸಿ ವೃಂದಾವನಕ್ಕೆ ವಿಶೇಷ ದೀಪಾಲಂಕಾರ ಹಾಗೂ ಹೂಮಾಲೆಗಳಿಂದ ಅಲಂಕಾರ ಮಾಡಿಲಾಗಿತ್ತು.            ಏಕಾದಶಿಯಂದು ದೇವಸ್ಥಾನದಲ್ಲಿ ಶ್ರೀ ವಿಠಲ ಕೃಷ್ಣನಿಗೆ ವಿಶೇಷ ಪೂಜೆ ಹಾಗೂ ನೂರಾರು ಭಕ್ತರಿಂದ ವಿಷ್ಣು ಸಹಸ್ರನಾಮ ಪಠಣ ಜರುಗಿತು.

 

ತುಳಸಿ ವಿವಾಹನಿಮಿತ್ತ ವಧು ಪಕ್ಷವನ್ನು ಬಲರಾಮ ಜೋಶಿ ದಂಪತಿ ಹಾಗೂ ವರಪಕ್ಷದ ಪರವಾಗಿ ಹನುಮಂತರಾವ ದೇಶಪಾಂಡೆ ದಂಪತಿ ಗಳು ವಹಿಸಿಕೊಂಡಿದ್ದರು. ವಧು ಮತ್ತು ವರ ಪಕ್ಷದವರನ್ನು ಬೃಂದಾವನ ಸಮೇತ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿ ಕರೆತಂದು ಆರತಕ್ಷತೆ ಕಾರ್ಯಕ್ರಮ ಅತ್ಯಂತ ವೈಭವದಿಂದ ನೆರವೇರಿಸಲಾಯಿತು.
ಪಂ. ಗಿರೀಶಆಚಾರ್ಯ ಹಾಗೂ ಸತೀಶ ಆಚಾರ್ಯ ಜಹಗೀರದಾರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ ಪ್ರತಿಷ್ಠಾನದ ಪದಾಧಿಕಾರಿಗಳು ಭಕ್ತರು ಇದ್ದರು .

Leave a Reply

Your email address will not be published. Required fields are marked *

error: Content is protected !!