
ಮಕ್ಕಳಿಗಳಿಗೆ ಹೆಚ್ಚಿನ ಶಿಕ್ಷಣ ನೀಡುವಲ್ಲಿ ಪಾಲಕರು ಒತ್ತು ನೀಡಬೇಕು : ನ್ಯಾ ದರಗದ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ತಾಲ್ಲೂಕಿನ ಕಲ್ಹಾರಿ ಚಾಪೆಲ್ ಟ್ರಸ್ಟ್ ಕೊಪ್ಪಳದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಪಾಲನಾ ಸಂಸ್ಥೆಗಳು, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳ ಮತ್ತು ನವೋದಯ ಸಮಗ್ರ ಗ್ರಾಮೀಣಾಭಿವೃದ್ದಿ ಹಾಗೂ ಶೈಕ್ಷಣಿಕ ಸಂಸ್ಥೆ,ಢಾಣಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ನಾಯ್ಯದೀಶರು ಮಹಾಂತೇಶ ಸಂಗಪ್ಪ ದರಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಶಿಸ್ತು ಶಾಂತಿ ಸಹನೆ ಪರೋಪಕಾರ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಹಾಗೂ ಮಕ್ಕಳಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ಅದರ ಸದಪಯೋಗಗಳನ್ನು ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ನೀಡುವ ಪಾಲಕರು ಹೆಚ್ಚು ಒತ್ತು ಕೊಡಬೇಕು ಸಮಾರಂಭದಲ್ಲಿ ಎಂದರು.
ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಶ್ರೀ ಮಾನ್ಯ ರಮೇಶ್ ಎಸ್ ಗಾಣಿಗರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಬಾಲನ್ಯಾಯ ಮಂಡಳಿ, ಕೊಪ್ಪಳ ಶ್ರೀಮತಿ ನಿಲೋಫರ್ ಎಸ್ ರಾಂಪುರಿ, ಪರಶುರಾಮ ವಾಯ್ ಶೆಟ್ಟಪ್ಪನವರ, ಎ.ವಿ.ಕಣವಿ, ಅಧ್ಯಕ್ಷತೆ ನವನೀತ್ ಕುಮಾರ್ ಮುಖ್ಯಸ್ಥರು, ಕಲ್ನಾರಿನ ಚಾಪೇಲ್ ಟ್ರಸ್ಟ್, ಕೊಪ್ಪಳ ಕಳಕಪ್ಪ ತಳವಾರ, ಶ್ರೀಮತಿ ಸರೋಜಾ ಬಾಕಳೆ, ಶ್ರೀಮತಿ ನೇತ್ರಾ ಬಸವರಾಜ ಪಾಟೀಲ, ಮಾಲಿಂಗಪ್ಪ ದೋಟಿಹಾಳ, ಬಿ.ವಾಸುದೇವ, ಡಾ. ಕೆ.ರಾಘವೇಂದ್ರಭಟ್, ಹರೀಶ ಭೋಗಿ, ಪ್ರಕಾಶ ಕುಂಬಾರ ಸೇರಿದಂತೆ ಬಾಲಕ ಬಾಲಮಂದಿರ ಬಾಲಕಿಯರ ಬಾಲ ಮಂದಿರ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.