KB

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆಗೆ ರೈತರಿಂದ ಅರ್ಜಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 25- 2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ರೈತರಿಂದ ಅಹ್ವಾನಿಸಲಾಗಿದೆ ಎಂದು ವಿಜಯನಗರ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಈ ಯೋಜನೆಯಡಿ ತಿಳಿಸಿರುವ ಹಿಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬಹುದು.

ಬೆಳೆ ವಿಮೆ ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆ ದಿನಾಂಕಗಳನ್ನು ನಿಗಧಿ ಪಡಿಸಲಾಗಿದೆ. ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಾದ ಹುರುಳಿ(ಮಳೆಯಾಶ್ರಿತ), ಈರುಳ್ಳಿ (ನೀರಾವರಿ), ಸೂರ್ಯಕಾಂತಿ(ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ನವಂಬರ್ ೩೦, ಕಡಲೆ(ಮಳೆಯಾಶ್ರಿತ), ಜೋಳ(ನೀರಾವರಿ), ಮೆಕ್ಕೆಜೋಳ(ನೀರಾವರಿ), ಗೋಧಿ(ನೀರಾವರಿ) ಡಿಸೆಂಬರ್ ೧೬, ರಾಗಿ (ನೀರಾವರಿ), ಕಡಲೆ (ನೀರಾವರಿ), ಗೋಧಿ (ನೀರಾವರಿ) ಡಿಸೆಂಬರ್ ೩೧, ಭತ್ತ (ನೀರಾವರಿ), ಶೇಂಗಾ (ನೀರಾವರಿ), ರಾಗಿ (ನೀರಾವರಿ), ಸೂರ್ಯಕಾಂತಿ (ನೀರಾವರಿ), ಈರುಳ್ಳಿ (ನೀರಾವರಿ) ೨೦೨೫ ಫೆಬ್ರವರಿ ೨೮ ಕೊನೆಯ ದಿನವಾಗಿದೆ. ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‌ಗಳು, ಸಾರ್ವಜನಿಕ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಹಾಯವಾಣಿ ನಂ:೦೮೦-೨೬೫೬೪೫೩೫/೦೮೦-೨೬೫೬೪೫೩೬/೦೮೦-೨೬೫೬೪೫೩೭ ಮತ್ತು ಸಂರಕ್ಷಣೆ ಪೋರ್ಟಲ್ ಲಿಂಕ್‌ನ್ನು https://www.samrakshane.karnataka.gov.in ಬಳಸಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!