
ಪುಸ್ತಕವನ್ನು ತಲೆತಗ್ಗಿಸಿ ಓದುವುದರಿಂದ ಸಮಾಜದಲ್ಲಿ ನಮ್ಮನ್ನು ತಲೆಎತ್ತಿ ನಡೆಯುವಂತೆ ಮಾಡುತ್ತದೆ : ಕುಂಬಾರ
ಕರುನಾಡ ಬೆಳಗು ಸುದ್ದಿ
ಕುಕನೂರು, 20- ಪುಸ್ತಕ ತಲೆತಗ್ಗಿಸಿ ಓದುವುದರಿಂದ ಸಮಾಜದಲ್ಲಿ ನಮ್ಮನ್ನು ತಲೆಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಗ್ರಂಥಪಾಲಕ ಪ್ರಕಾಶ್ ಕುಂಬಾರ ಹೇಳಿದರು.
ಪಟ್ಟಣದ ಗ್ರಂಥಾಲಯದಲ್ಲಿ ರಾಷ್ಟಿಯ ಗ್ರಂಥಾಲಯ ಸಪ್ತಾಹ ದಿನಾಚರಣೆಯನ್ನು ಆಚರಿಸಲಾಯಿತು.
ರಾಷ್ಟಿಯ ಗ್ರಂಥಾಲಯ ಸಪ್ತಾಹ ದಿನಾಚರಣೆ ಕುರಿತು ಗ್ರಂಥಪಾಲಕ ಪ್ರಕಾಶ್ ಕುಂಬಾರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು, ನಿತ್ಯ ಪುಸ್ತಕ ದಿನ ಪತ್ರಿಕೆ ಓದುವುದನ್ನು ರೂಡಿಸಿಕೊಂಡಾಗ ಮಾತ್ರ ಕೆಪಿಎಸ್, ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ ಎಂದರು.
ಓದುವುದು ಮತ್ತು ಬರವಣಿಗೆ ತಪಸ್ಸು ಇದ್ದಂತೆ ನಿರಂತರ ಓದು, ತಾಳ್ಮೆ, ಸಂಬ0ಧ ಕಾಲಮಾನ ಎಲ್ಲವನ್ನು ಅರಿತ್ತು ನಿರಂತರ ಬರವಣಿಗೆಯ ಅನುಭವದಿಂದ ಬರಹದಲ್ಲಿ ಪರಿಪಶ್ವತೆ ಲಭಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಓದು ಮತ್ತು ಬರಹವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹೇಶ್ ಹಕಾರಿ ಶಿಕ್ಷಕರು, ಲಕ್ಷ್ಮಣ ಕಲಾಲ್, ಮಾರುತಿ ಗೊರ್ಲೆಕೊಪ್ಪ, ಪಕೀರಪ್ಪ ಆರ್‌ಬೆರಳ್ಳಿನ್, ತಿಪ್ಪಣ್ಣ ಗುಡಿ, ಮಾದೇವಯ್ಯ ಹಿರೇಮಠ, ದ್ಯಾಮಣ್ಣ ಭಜಂತ್ರಿ, ದಾದೆ ಸಾಬ್ ಸಾಂಗ್ಲಿಕಾರ ಇದ್ದರು.