1

ಬಹುಗ್ರಾಮ ಕುಡಿಯುವ ನೀರಿನ ಯೋಜನೆಡಿಯ ಕಾಮಗಾರಿಗಳಿಗೆ ಅಡಿಗಲ್ಲು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 20- ಶಾಸಕ ರಾಘವೇಂದ್ರ ಹಿಟ್ನಾಳ ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೂದಿಹಾಳ, ಬೇಳೂರು, ದಾಂಬ್ರಳ್ಳಿ, ಬಿಕನಳ್ಳಿ, ಬಿಸರಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ಅಂದಾಜು ಮೊತ್ತ ೬.೯೬ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಕೂಡ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಕೊಪ್ಪಳ ಕ್ಷೇತ್ರದ ೧೦೩ ಗ್ರಾಮಗಳಿಗೆ ೨೪೦ ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿ, ಹೀಗಾಗಲೇ ಕಾಮಗಾರಿಯನ್ನೂ ಕೂಡ ಪ್ರಾರಂಭ ಮಾಡಿದ್ದೇವೆ.

ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಡಿಯಲ್ಲಿ ಕ್ಷೇತ್ರದ ಗ್ರಾಮಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಓ. ಎಚ್. ಟಿ ಟ್ಯಾಂಕ್ ನಿರ್ಮಾಣ ಮಾಡಿ ಗ್ರಾಮದ ಪ್ರತಿ ಮನೆಗೂ ೨೪್ಠ೭ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಎಂದರು.

450 ಬೆಡ್ಡಿನ ಆಸ್ಪತ್ರೆ ಉದ್ಘಾಟನೆ : ಕೊಪ್ಪಳದ ಮೆಡಿಕಲ್ ಕಾಲೇಜ್ ನ ಪಕ್ಕದಲ್ಲಿ ನಿರ್ಮಾಣ ಆಗಿರುವ ೪೫೦ ಬೆಡ್ಡಿನ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಕೊಪ್ಪಳಕ್ಕೆ ಆಹ್ವಾನಿಸಿ ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸಿ, ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲ್ಬಿ, ಮಾಜಿ ಜಿ. ಪಂ ಸದಸ್ಯ ಪ್ರಸನ್ನ ಗಾಡದ, ವೆಂಕನಗೌಡ್ರ ಹಿರೇಗೌಡ್ರ, ವಿರುಪಣ್ಣ ನವೋದಯ,ವಿರುಪಾಕ್ಷಗೌಡ, ಪ್ರಭು ಬಿಸರಳ್ಳಿ, ಶ್ರೀಧರ್ ಬೂದಿಹಾಳ, ಪ್ರಕಾಶ್ ಕಿನ್ನಾಳ,ಗವಿ ಬೇಳೂರು, ಗಾಳೆಪ್ಪ ಬೇಳೂರು, ರವಿ ಪಾಟೀಲ್, ದೇವನಗೌಡ, ಸೋಮಣ್ಣ ವದಗನಾಳ ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಎಲ್ಲಾ ತಾಲೂಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!