
ಚಿದಂಬರೇಶ್ವರರು ಶಿವನ ಅವತಾರ : ಪಂ.ಶೇಷಾಚಲ ಭಟ್ ಜೋಶಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಶ್ರೀ ಶಿವ ಚಿದಂಬರೇಶ್ವರರ ೨೬೬ನೇ ಜಯಂತೋತ್ಸವ ಸಂಭ್ರಮದಿ0ದ ಜರುಗಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂ.ಶೇಷಾಚಲ ಭಟ್ ಜೋಶಿ ಚಿದಂಬರೇಶ್ವರರು ಭಕ್ತರ ಬೆಡಿದ್ದನ್ನು ಕೊಡುವಂತಹ ಗುರುವಾಗಿದ್ದು ಅವರು ಭಕ್ತರಿಗಾಗಿ ಅವತರಿಸಿದ ಭಗವಂತನಾಗಿದ್ದು ಭಕ್ತರ ಇಷ್ಟಾರ್ಥಗಳನ್ನು ಈಡೆರಿಸುವ ಕಲ್ಪತರು.
ಚಿದಂಬರೇಶ್ವರರು ಶಿವನ ಅವತಾರವಾಗಿದ್ದು ಅವರ ನಾಮಸ್ಮರಣೆಯಿಂದ ಮನುಷ್ಯನ ಕಷ್ಟ ಕಾರ್ಪಣ್ಯಗಳು, ಕಲಿಯುಗದ ಪಾಪಗಳು ದುರವಾಗಲಿವೆ ಎಂದು ಹೇಳಿದರು.
ಗುರುವಾರದಂದು ವಣಗೇರಿಯ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಚಿದಂಬರೆಶ್ವರ ಜಯಂತೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜಯಂತೋತ್ಸವದ ಅಂಗವಾಗಿ ಬುಧವಾರ 20 ರಂದು ಬೆಳಿಗ್ಗೆ ೮ಕ್ಕೆ ಧ್ವಜಾರೋಹಣ ಜರುಗಲಿದ್ದು ಪ.ಪೂ ವಿಶ್ವನಾಥ ದಿಕ್ಷೀತ್ ದಂಪತಿಗಳು ನೆರವೆರಿಸಿದರು, ನಂತರ ಶ್ರೀ ಶಿವ ಚಿದಂಬರೇಶ್ವರ ಉತ್ಸವ ಮೂರ್ತಿ ಮೇರವಣಿಗೆ ನಂತರ ಶ್ರೀ ಲಕ್ಷಿö್ಮ ನಾರಾಯಣ ಹೃದಯ ಹವನ ಸುಮಂಗಲೇಯರಿ0ದ ಕುಂಕುಮಾರ್ಚನೆ ಪುರ್ಣಾಹುತಿ ಜರುಗಿತು.
ಸಂಗೀತ : ಸಂಜೆ ಹಿರೇವಡ್ಡರಕಲ್ ಪ್ರಭಾಕರ ಪಟವಾರಿ, ಶ್ರೀಮತಿ ಚೈತ್ರಾ ನಾಯಕ್, ಮಾರ್ತಾಂಡ ದೇಶಪಾಂಡೆ ಇವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಿತು.
ಗುರುವಾರ 21 ರಂದು ಬೆಳಿಗ್ಗೆ ಸುಪ್ರಭಾತ, ಕಾಕಡಾರತಿ, ಪಂಚಾಮೃತ ಹಾಗೂ ರುದ್ರಾಭೀಷೆಕ, ಪಾದಪೂಜೆ ಕಾರ್ಯಕ್ರಮಗಳು ಹೋಸಪೆಟೆಯ ವೇ.ಬ್ರ. ಪಾರ್ಥ ಸಾರತಿ ಜೋಶಿ ಇವರ ನೇತೃತ್ವದಲ್ಲಿ ಜರುಗಿದವು. ಮಹಿಳೆಯರಿಂದ ಭಜನೆ ತೊಟ್ಟಿಲು ಸೇವೆ ತೀರ್ಥ ಪ್ರಸಾದ ಜರುಗಿತು.