
ಶಾಸಕರ ವಿರುದ್ಧ ಹೂಡಾ ಅಧ್ಯಕ್ಷ ಇಮಾಮ್ ನಿಯಾಜಿ ವಾಗ್ದಾಳಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 22- ಹಾಲಿ ಹೂಡಾ ಅದ್ಯಕ್ಷ ಹೆಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ತಮ್ಮ ಹೂಡಾ ಕಚೇರಿಯಲ್ಲಿ ಪತ್ರಿಕಾ ಗೊಷ್ಠಿ ನಡೆಸಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಶಾಸಕರೇ ಇಲಾಖೆಗಳಿಗೆ ಬೇಟಿ ನೀಡಿ ಅನುದಾನ ತರಿಸಿ ಕೊಳ್ಳ ಬೇಕು, ಅಂತಹ ಪ್ರಯತ್ನವನ್ನು ಬಿಟ್ಟು ಸರ್ಕಾರವನ್ನಾಗಲೀ, ಸಚಿವರನ್ನಾಗಲೀ ದೂಷಿಸುವುದು ಸರಿಯಲ್ಲ ಎಂದು ಇಮಾಂಮ್ ನಿಯಾಜಿ ಶಾಸಕ ಗವಿಯಪ್ಪ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದರು.
ಅವರು ಪತ್ರಿಕಾ ಗೋಷ್ಠಿ ಯಲ್ಲಿ ಅಭಿವೃದ್ದಿಗಾಗಿ ಸರ್ಕಾರ ವಿವಿದ ಕಾಮಗಾರಿಗೆ ಬಿಡುಗಡೆ ಮಾಡಿದ ಅನುದಾನದ ವಿವಿರಗಳನ್ನು ನೀಡಿ ಹಲವಾರು ಕಾಮಗಾರಿಗಳಿಗೆ ಚಾಲನೆ ಕೊಟ್ಟೇ ಇಲ್ಲ ನಂಜುಡಪ್ಪ ವರದಿ ಪ್ರಕಾರ ‘ಕೆಕೆಆರ್‌ಡಿಬಿ’ ವತಿಯಿಂದ ಪ್ರತಿ ವರ್ಷ ತಾಲೂಕಿಗೆ ಅನುದಾನ ಬಿಡುಗಡೆ ಆಗುತ್ತದೆ ಅದೇ ರೀತಿ ಜಿಲ್ಲೆಯ ೨೫೦ ಹಾಸಿಗೆಯ ಜಿಲ್ಲಾಸ್ಲತ್ರೆಗೆ ೨೦೨೩-೨೪ರ ಶಾಸಕರು ಕೇಳಿದ ೫೦ ಕೋಟಿಯಲ್ಲಿ ಜಿಲ್ಲಾ ಸಚಿವರು ೨೯ ಕೋಟಿ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಅಲ್ಲದೆ ೨೪-೨೫ರ ಮ್ಯಾಕ್ರೋ ಅಡಿಯಲ್ಲಿ ೮ ಕೋಟಿ, ಪಂ.ರಾಜ್ ಇಲಾಖೆಯಲ್ಲಿ ೧೫ ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ ೧೫ ಕೋಟಿ, ಎಸ್‌ಎಚ್‌ಡಿಪಿಯಲ್ಲಿ ೨೦ ಕೋಟಿ, ಜಿಲ್ಲಾ ರಸ್ತೆ ಅಭಿವೃದ್ದಿಗೆ ೮ ಕೋಟಿ, ಹೀಗೆ ೨೦೨೩-೨೪ ಮತ್ತು ೨೦೨೪-೨೦೨೫ನೇ ಸಾಲಿನ ಕ್ಷೇತ್ರ ಅಭಿವೃದ್ದಿಗೆ ೧೩೮ ಕೋಟಿ ಅನುದಾನ ಬಂದಿದೆ ಇಷ್ಟೆಲ್ಲ ಆನುದಾನ ಬಂದಿದ್ದರೂ ಶಾಸಕರು ಅನುದಾನದ ಕೊರತೆ ಹೇಳಿ ಸರ್ಕಾರವನ್ನು ಹಾಗೂ ಸಚಿವರನ್ನು ದೂಷಿಸುವುದು ಸರಿಯಲ್ಲ ಎಂದು ಹೇಳಿದರು.
ಗವಿಯಪ್ಪ ವಿಜಯನಗರ ಕ್ಷೇತ್ರಕ್ಕೆ ಶಾಪ, ಯಾವ ಪುರುಷಾರ್ಥಕ್ಕೆ ಶಾಸಕರಾಗಿದ್ದಾರೆ ಎಂದರು.
ಕಾ0ಗ್ರೇಸ್‌ನಲ್ಲಿ ಆರೋಪ ಪ್ರತ್ಯಾರೋಪಗಳು ಆರಂಭಿಸಿವೆ. ಸರ್ಕಾರ ಸರಿಯಾಗಿ ಅನುದಾನ ನೀಡುತಿಲ್ಲ ಎನ್ನವುದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ರು ಎಂದು ಶಾಸಕ ಗವಿಯಪ್ಪ ಆರೋಪಿಸುತ್ತಿದ್ದರೆ, ಅವರಿಗೆ (ಜಮೀರ್ ಖಾನ್) ಬೆನ್ನಿಗೆ ಜಿಲ್ಲಾದ್ಯಕ್ಷ ಸಿರಾಜ್ ಶೇಖ್ ಮತ್ತು ಹೊಡಾ ಅದ್ಯಕ್ಷ ಇಮಾಮ್ ನಿಯಾಜಿ ನಿಂತ್ತಿದ್ದಾರೆ. ಶಾಸಕ ಗವಿಯಪ್ಪ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿಂಬಾಲಕರನ್ನಿಟ್ಟು ಕೊಂಡು ಆಡಿಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನೂರು ಕೋಟಿ ಮೊತ್ತದ ಕಾಮಗಾರಿಗೆ ವರ್ಷ ಕಳೆದರೂ ಶಾಸಕರು ಶಂಕುಸ್ಥಾಪನೆ ಮಾಡುತ್ತಿಲ್ಲ. ಕಾಮಗಾರಿ ಭೂಮಿ ಪೂಜೆಗೆ ಶಿಷ್ಠಾಚಾರ ಮರೆತು ಹಲವು ವ್ಯಕ್ತಿಗಳನ್ನು ಕಳಿಸಿ ಪೂಜೆ ಮಾಡಿಸುತ್ತಾರೆ. ಅದೇ ವ್ಯಕ್ತಿಗಳು ಗುತ್ತಿಗೆ ದಾರರಿಗೂ ಅಧಿಕಾರಿಗಳಿಗೂ ಕೆಲಸದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಗಳನ್ನು ಮಾಡಿದರು.