WhatsApp Image 2024-12-04 at 8.47.49 PM

ಸಂಭ್ರಮದಿಂದ ಜರುಗಿದ ರಘುವೀರತೀರ್ಥ ಆರಾಧನಾ ಮಹೋತ್ಸವ 

 ಕರುನಾಡ ಬೆಳಗು ಸುದ್ದಿ

ಕೊಪ್ಪಳ, 04-  ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಕ್ಷ ತುಳಸಿ ಅರ್ಚನೆ ಹಾಗೂ ರಾಯರ ಮಠದಲ್ಲಿ ಬೃಂದಾವನ ಪ್ರತಿಷ್ಠಾಪನೆ ಮಾಡಿದ ರಘುವೀರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ಬುಧವಾರ ಜರುಗಿತು.

 

ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, ಬಳಿಕ ಶ್ರೀನಿವಾಸ ಕಲ್ಯಾಣ ಪಾರಾಯಣದ ನಂತರ ಗ್ರಾಮ ಪ್ರದಕ್ಷಿಣೆ ನಡೆಯಿತು. ಲಕ್ಷ ತುಳಸಿ ಅರ್ಚನೆ, ತೀರ್ಥಪ್ರಸಾದ, ವಿಷ್ಣುಸಹಸ್ರನಾಮ ಪಾರಾಯಣ ಜರುಗಿದವು. ಸಂಜೆ ಬೆಂಗಳೂರಿನ ಪಂಡಿತ ಅಂಬರೀಷಾಚಾರ್ ಅವರಿಂದ ಪ್ರವಚನ, ಕಲಬುರಗಿಯ ರಮೇಶ ಕುಲಕರ್ಣಿ ಭಕ್ತಿ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು. ನಂತರ ದೀಪೋತ್ಸವ ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮಗಳು ಜರುಗಿದವು.

ರಾಯರ ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್ ಮುಳುಗುಂದ, ಪ್ರಮೋದಾಚಾರ ಪೂಜಾರ, ಶ್ರೀನಿವಾಸಾಚಾರ ಮುತುಗಿ, ವ್ಯವಸ್ಥಾಕರಾದ ಜಗನ್ನಾಥ ಹುನುಗುಂದ, ಕೃಷ್ಣಾ ಸೊರಟೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!