IMG-20250324-WA0012

ಕೊಪ್ಪಳ ನಗರದ ಟ್ರಾಫಿಕ್ ಸಿಗ್ನಲ್ ಬಳಿ 
ನಾಲ್ಕು ಕಡೆ ರಸ್ತೆಗಳಿಗೆ ನೆರಳಿನ ಪರದೆ ಹಾಕಲು ಜೆಡಿಎಸ್ ಆಗ್ರಹ

ಕರುನಾಡ ಬೆಳಗು ಸುದ್ದಿ

ಕೊಪ್ಪಳ ,‌ 24- ನಗರದಲ್ಲಿ ಕಡು ಬೇಸಿಗೆ ಇದ್ದು ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿ ರಸ್ತೆಯ ಮೇಲೆ ಸಂಚರಿಸಲು ಸಾರ್ವಜನಿಕರಿಗೆ ಕಷ್ಟಕರ ವಾಗಿದ್ದು ಟ್ರಾಫಿಕ್ ಸಿಗ್ನಲ್ ವೃತ್ತದ ನಾಲ್ಕು ಕಡೆ ರಸ್ತೆಗಳಿಗೆ ನೆರಳಿನ ಪರದೆ ಹಾಕಲು ಆಗ್ರಹಿಸಿ ಜೆಡಿಎಸ್ ಮನವಿ ಸಲ್ಲಿಸಿದೆ.


ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಇವರು ಮನವಿಯಲ್ಲಿ ಕೊಪ್ಪಳದಲ್ಲಿ ಬಿಸಿಲಿನ ದಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಅಂತದ್ರಲ್ಲಿ ಸಿಗ್ನಲ್ ದಿಂದ ರಸ್ತೆಯ ಮೇಲೆ ಕನಿಷ್ಠ ನಾಲ್ಕು ನಿಮಿಷ ವಾಹನ ಸವಾರರು ನಿಲ್ಲಬೇಕಾಗುತ್ತದೆ.
ಮುಖ್ಯ ವೃತ್ತಗಳಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುವುದರಿಂದ ಮುಂಜಾನೆಯಿಂದ ಸಂಜೆವರೆಗೂ ಸಿಗ್ನಲ್ ವ್ಯವಸ್ಥೆ ಇರುತ್ತದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿ ರಸ್ತೆಯ ಮೇಲೆ ಸಂಚರಿಸಲು ಸಾರ್ವಜನಿಕರಿಗೆ ಕಷ್ಟಕರ ವಾಗಿರುತ್ತದೆ.
ಬಿಸಿಲಿನ ದಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಸಿಗ್ನಲ್ ದಿಂದ ರಸ್ತೆಯ ಮೇಲೆ ಕನಿಷ್ಠ ನಾಲ್ಕೂ ನಿಮಿಷ ವಾಹನ ಸವಾರರು ನಿಲ್ಲಬೇಕಾಗುತ್ತದೆ. ಈ ಸಮಯದಲ್ಲಿ ಬಿಸಿಲಿನ ದಗೆ ತಡೆದುಕೊಳ್ಳಲಾಗುತ್ತಿಲ್ಲ ಪ್ರತಿ ರಸ್ತೆಗೆ ಸುಮಾರು 100 ಮೀಟರ್ ದಷ್ಟು ಎತ್ತರದಲ್ಲಿ ನೆರಳಿನ ಪರದೆಯನ್ನು ಹಾಕುವುದರಿಂದ ತಕ್ಕಮಟ್ಟಿಗೆ ನೆರಳಿನ ಆಸರೆ ದೊರೆಯುತ್ತದೆ ಎಂದು ತೋರಿದ್ದಾರೆ.
ನೆರಳಿನ ಪರದೆ ಹಾಕುವುದು ಬೈಕ್ ಸವಾರರ ಆರೋಗ್ಯ ದೃಷ್ಟಿಯಿಂದ ಉತ್ತಮ . ಅಲ್ಲದೆ ವೃತ್ತದಲ್ಲಿ ಗಂಗಾವತಿ ಮತ್ತು ಹೊಸಪೇಟೆ ವಿವಿಧ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಬಿಸಿಲಲ್ಲಿ ನಿಂತು ಕಾಯುತ್ತಿರುತ್ತಾರೆ .
ಇಲ್ಲಿ ಬಸ್ ನಿಲ್ದಾಣ ಇಲ್ಲದಿರುವುದರಿಂದ ಬಿಸಿಲಿನಲ್ಲಿ ನಿಂತು ಕಾಯುವುದು ಸಾಮಾನ್ಯವಾಗಿದೆ. ಗದಗ್ ಪಟ್ಟಣದ ವಿವಿಧ ಸಿಗ್ನಲ್ಗಳಲ್ಲಿ ಈ ರೀತಿ ನೆರಳಿನ ಪರದೆ ಹಾಕಿರೋದು ಕಂಡುಬಂದಿರುತ್ತದೆ. ಆದ್ದರಿಂದ ತಮ್ಮ ಅಧೀನದಲ್ಲಿ ಬರುವ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳು ಕೂಡಲೇ ಸ್ಪಂದಿಸಿ ನೆರಳಿನ ಪರದೆ ಅಳವಡಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಮಂಜುನಾಥ್ ಸೋರಟೂರ ಮತ್ತು ರಮೇಶ್ ಡಂಬ್ರಳ್ಳಿ ಮತ್ತು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಮತ್ತು ತಾಲೂಕ ಎಸ್ ಟಿ ವಿಭಾಗದ ಅಧ್ಯಕ್ಷರಾದ ಮಲ್ಲಪ್ಪ ವಾಲ್ಮೀಕಿ, ಜೆಡಿಎಸ್ ಮುಖಂಡರಾದ ಸಂಜೀವಗೌಡ ಪೊಲೀಸ್ ಪಾಟೀಲ್, ಮಂಜುನಾಥ್ ಮಾಲಿ ಪಾಟೀಲ್, ಸಿದ್ದನಗೌಡ ಮಾಲಿ ಪಾಟೀಲ್ ಹಾಗೂ ಸಿರಾಜ್ ಕೋಲ್ಕಾರ್ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!