WhatsApp Image 2025-04-03 at 1.33.54 PM

           ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75 ನೇ ವರ್ಧಂತಿ ಮಹೋತ್ಸವ

        ಶಂಕರ ಸೇವಾ ಸಮಿತಿಯಿಂದ ರೋಗಿಗಳಿಗೆ ಬ್ರೆಡ್ಡು ಮತ್ತು ಹಣ್ಣು ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 03- ಶೃಂಗೇರಿಯ ಪೀಠಾಧಿಪತಿಗಳಾದ  ಪರಮಪೂಜ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75 ನೆ ಯ ವರ್ಧಂತಿ ಮಹೋತ್ಸವದ ನಿಮಿತ್ಯವಾಗಿ ಕೊಪ್ಪಳದ ಶಂಕರ ಸೇವಾ ಸಮಿತಿ ವತಿಯಿಂದ ರೋಗೊಗಳಿಗೆ ಬ್ರೆಡ್ಡು ಮತ್ತು ಹಣ್ಣು ವಿತರಿಸಲಾಯಿತು .

ಗುರುವಾರ ಬೆಳಿಗ್ಗೆ ಸರಕಾರಿ ಆಸ್ಪತ್ರೆಯಲ್ಲಿ  ಮತ್ತು ತಾಯಿ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ಒಳ ರೋಗಿಯಾಗಿ ದಾಖಲಾಗಿರುವ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಂಕರ ಸೇವಾ ಸಮಿತಿ ಕೊಪ್ಪಳ ಅಧ್ಯಕ್ಷ ಕೃಷ್ಣಪದಕಿ, ವೆಂಕಟೇಶ್ ಜೋಶಿ,ನಾಗರಾಜ ಸಿದ್ದಾಂತಿ, ಶಂಕರ ವೈದ್ಯ, ಆಶೋಕ್ ಪದಕಿ, ಶ್ರೀ ನಿವಾಸ ಅಶ್ವಥಪುರ ,ಮಂಜುನಾಥ ಹಳ್ಳಿಕೇರಿ ಮತ್ತು ಬ್ರಾಹ್ಮಣ ಸಮಾಜದ ಹಿರಿಯ ವೈದ್ಯರಾದ ಡಾಕ್ಟರ್ ಕೆ ಜಿ ಕುಲಕರ್ಣಿ, ಪ್ರಾಣೇಶ ಮಾದೀನೂರ್, ಮತ್ತು  ಬ್ರಾಹ್ಮಣ ಸಮಾಜದ ಮುಖಂಡರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

error: Content is protected !!