IMG_20250429_174432

ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ

ನಾಯಿ ಮತ್ತು ಹುಡುಗನ ಇಬ್ಬರ ನಡುವಿನ ಕತೆ

ಪಪ್ಪಿ ಚಿತ್ರ ಮೇ 1ರಂದು ಬಿಡುಗಡೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 29 – ಬಿ ಬಿ ಸಂಕನೂರ್ ಅವರ ಬ್ಯಾನರ್ ನ ಅಡಿಯಲ್ಲಿ, ಗಜೇಂದ್ರಗಡದ ಅಂದಪ್ಪ ಸಂಕಾನೂರ್ ಅವ್ರು ನಿರ್ಮಾಣದಲ್ಲಿ ಮೂಡಿಬಂದಿರುವ “ಪಪ್ಪಿ” ಚಿತ್ರ ಇದೇ ಮೇ ೧ ನೀ ತಾರೀಕು ರಾಜ್ಯದಂತ ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಸಿಂಧನೂರಿನ ಆಯುಷ್ ಮಲ್ಲಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು ಪರಿಪೂರ್ಣ ಉತ್ತರ ಕರ್ನಾಟಕದ ಸೊಗಡು ಹಾಗೂ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕರಾದ ಸುರೇಶ್ ಬಾಬು ರವರ ಕ್ಯಾಮರ ಕೈಚಳಕವಿದ್ದು, ಎನ್ ಎಂ ವಿಶ್ವ ದೋಣಿ ಅವರ ಸಂಕಲನ, ಶ್ರೀಧರ್ ಕಶ್ಯಪ್ ರವರ ಸಂಗೀತ, ಹಾಗೂ ಕಮಲ್ ಗೋಯೆಲ್ ರವರು ಈ ಚಿತ್ರದ ಗ್ರೇಡಿಂಗ್ ಕೆಲಸವನ್ನು ಮಾಡಿದ್ದಾರೆ.
ಈ ಚಿತ್ರದಲ್ಲಿ ಬಲ ನಟರಾದ ಹಾಲವರ್ತಿಯ ಜಗದೀಶ್ ಹಾಗೂ ಸಿಂಧನೂರಿನ ಆದಿತ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇನ್ನು ಕೊಪ್ಪಳದ ದುರುಗಪ್ಪ ಕಾಂಬ್ಳಿ ಹಾಗೂ ರೇಣುಕಾ ದೇಸಾಯಿ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಪ್ಪಿ ಚಿತ್ರ ನಮ್ಮ ಉತ್ತರ ಕರ್ನಾಟಕದ ಸೋಗಡನ್ನು ಎತ್ತಿ ಹಿಡಿಯುತ್ತಿದ್ದು, ಇಬ್ಬರು ಬಾಲಕರು ಹಾಗೂ ಸಣ್ಣ ಶ್ವನವೊಂದರ ಸುತ್ತ ಸಾಗುವ ಕತೆಯಾಗಿದ್ದು. ಈ ಚಿತ್ರವನ್ನು ಈಗಾಗಲೇ ಧ್ರುವ ಸರ್ಜಾ ರವರು ನೋಡಿ ಮೆಚ್ಚುವುದಲ್ಲದೆ, ಅವರೇ ಅರ್ಪಿಸುತ್ತಿರುವುದು ತುಂಬ ವಿಶೇಷ, ಇನ್ನು ಕೆ ಆರ್ ಜಿ ಸಂಸ್ಥೆಯು ಈ ಚಿತ್ರವನ್ನು ವಿತರಿಸುತ್ತಿರುವುದು ನಮ್ಮ ಚಿತ್ರ ತಂಡಕ್ಕೆ ಒಂದು ಬಲ ಬಂತಂತಾಗಿದೆ, ದಯವಿಟ್ಟು ನಮ್ಮ ಈ ಒಂದು ಪ್ರಯತ್ನಕ್ಕೆ ಎಲ್ಲರ ಸಹಕಾರ ಇರಲಿ‌ ಎಂದು ಮನವಿ ಮಾಡಿದರು .

Leave a Reply

Your email address will not be published. Required fields are marked *

error: Content is protected !!