
ಡಿ.09 ರಂದು ವಿದ್ಯುತ್ ವ್ಯತ್ಯಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೭- ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ಕೊಪ್ಪಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆಯಮಾಸಿಕ ನಿರ್ವಹಣಾ ಕೆಲಸ ನಡೆಸುತ್ತಿರುವ ಪ್ರಯುಕ್ತ ಡಿಸೆಂಬರ್ 09 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 05 ಗಂಟೆಯವರೆಗೆ ಕೊಪ್ಪಳ ನಗರ ಹಾಗೂ ಭಾಗ್ಯನಗರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
110/33/11 ಕೆ.ವಿ ಕೊಪ್ಪಳ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ 11 ಕೆ.ವಿ. ನಗರ/ನೀರು ಸರಬರಾಜು/ಐಪಿ ಫೀಡರ್‌ಗಳಿಗೆ ಮತ್ತು 33 ಕೆ.ವಿ ಕಿನ್ನಾಳ ಸ್ಟೇಷನ್‌ಗೆ ಒಳಪಡುವ ಎಲ್ಲಾ ಫೀಡರ್‌ಗಳ ಗ್ರಾಮಗಳಿಗೆ, ಕೊಪ್ಪಳ ನಗರ ಮತ್ತು ಭಾಗ್ಯನಗರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ನಿರ್ವಹಣಾ ಕೆಲಸವು ಬೇಗನೆ ಮುಗಿದಲ್ಲಿ ಯಾವುದೇ ವಿದ್ಯುತ್ ಸರಬರಾಜು ಮಾಡಲಾಗುವುದು.
ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಆರ್.ಸಲೀಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.