
ಸುಕೋ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ರವಿ ಸುಧಾಕರ್ ನೇಮಕ
ಕರುನಾಡ ಬೆಲಗು ಸುದ್ದಿ
ಬಳ್ಳಾರಿ, ೦೮- ಪ್ರತಿಷ್ಠಿತ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಸೂಕೋ ಬ್ಯಾಂಕ್ ನೂತನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಅಪಾರ ಅನುಭವವುಳ್ಳ ರವಿ ಸುಧಾಕರ್ ಅವರನ್ನು ನೇಮಕ ಮಾಡಿರುವದಾಗಿ ಎಂದು ಬ್ಯಾಂಕಿನ ಅಧ್ಯಕ್ಷರು ಮೋಹಿತ್ ಮಸ್ಕಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ರವಿ ಸುಧಾಕರ್ ಅವರು ಕಳೆದ 39 ವರ್ಷಗಳಿಂದ ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವದಾಗಿ, ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಅಪಾರ ಅನುಭವವನ್ನು ಗಳಿಸಿದ್ದಾರೆ ಎಂದರು.
ಈಗಾಗಲೇ ಸುಕೋ ಬ್ಯಾಂಕ್ ಬಳ್ಳಾರಿಯನ್ನು ಪ್ರಧಾನ ಕೇಂದ್ರವಾಗಿ ಮಾಡಿಕೊಂಡು 14 ಜಿಲ್ಲೆಗಳಲ್ಲಿ 29 ಬ್ರಾಂಚ್ ಗಳನ್ನು ಹೊಂದಿ, 1550 ಕೋಟಿ ಆರ್ಥಿಕ ವ್ಯವಹಾರವನ್ನು ಮಾಡಿರುವುದಾಗಿ ತಿಳಿಸಿದರು. ಕೃಷಿ ಉತ್ಪನ್ನ, ಕೈಗಾರಿಕೆ, ಸಂಬಂಧಪಟ್ಟ ಹಲವಾರು ಮಂದಿ ರೈತರಿಗೆ ಮಾರ್ಟೇಜ್ ಲೋನ್ಸ್, ಮತ್ತು ಇತರ ಲೋನ್ ಗಳನ್ನು ನೀಡಿರುವದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸೂಕೋ ಬ್ಯಾಂಕ್ ಅಪಾರ ಅನುಭವವುಳ್ಳ, ಸುಧಾಕರ್ ಅವರ ಜೊತೆ ಸೇರಿಕೊಂಡು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.