398b6d32-918f-473e-b63f-50b07354be6c

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ 2023 ಅಂಗೀಕಾರ

ಕರುನಾಡ ಬೆಳಗು ಸುದ್ದಿ

ಬೆಳಗಾವಿ , ೧೨-  ವಿಧಾನಸಭೆಯಿಂದ ಅಂಗೀಕಾರವಾದ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ 2023 ನ್ನು ವಿಧಾನಪರಿಷತ್ ನಲ್ಲಿ ಇಂದು ಪರ್ಯಾಲೋಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಕ0ದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ವಿಧೇಯಕವನ್ನು ಮಂಡಿಸಿದ್ದು, ಪರಿಷತ್ ನ ಎಲ್ಲಾ ಸದಸ್ಯರು ವಿಧೇಯಕಕ್ಕೆ ತಮ್ಮ ಅಂಗೀಕಾರವನ್ನು ಸೂಚಿಸಿದರು.

ಕರ್ನಾಟಕ ಸ್ಟಾ0ಪ್ ಅಧಿನಿಯಮ 1957 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ವಿಧೇಯಕವನ್ನು ಮಂಡಿಸಿದ್ದು, ಕೆಲವು ಪ್ರಕರಣಗಳಲ್ಲಿ ಸ್ಟಾಂಪ್ ಶುಲ್ಕದ ದರವನ್ನು ಹೆಚ್ಚಿಸಲು ಮತ್ತು ಬ್ಯಾಂಕ್ ಗ್ಯಾರಂಟಿಗಳ ಮೇಲೆ ಸ್ಟಾಂಪು ಶುಲ್ಕವನ್ನು ವಿಧಿಸುವುದಕ್ಕೆ ಸಂಬ0ದಿಸಿದಂತೆ ಪ್ರತ್ಯೇಕ ಉಪಬಂಧವನ್ನು ಕಲ್ಪಿಸಲು ಈ ತಿದ್ದುಪಡಿ ಅವಶ್ಯಕವೆಂದು ಸಚಿವರು ತಿಳಿಸಿದರು.

ವಿಧೇಯಕದ ಕುರಿತಂತೆ ಸದಸ್ಯರಾದ ಕೇಶವ ಪ್ರಸಾರ್, ತಿಪ್ಪೇಸ್ವಾಮಿ, ನವೀನ್, ಪೂಜಾರ್, ತೇಜಸ್ವಿನಿ ಗೌಡ, ಪ್ರತಾಪ್ ಸಿಂಹ ನಾಯಕ್, ಶರವಣ, ಹನುಮಂತ ನಿರಾಣಿ, ರವಿಕುಮಾರ್ ಮಾತನಾಡಿದರು.

ಈ ವಿಧೇಯಕದ ಮೂಲಕ ಮುದ್ರಾಂಕ ಶುಲ್ಕದ ವ್ಯಾಪ್ತಿಯಲ್ಲಿರುವ 30 ರೀತಿಯ ವಿವಿಧ ಸೇವೆಗಳಿಗೆ ಸ್ಟಾಂಪ್ ಶುಲ್ಕ ಹೆಚ್ಚಳವಾಗಲಿದ್ದು, ಸ್ವಾಂಪ್ ಶುಲ್ಕ ಪಾವತಿಸಿ ಮಾಡಿಕೊಳ್ಳುವ ವಿವಿಧ ರೀತಿಯ ಪತ್ರಗಳಿಗೆ ಕಾನೂನಿನ ರಕ್ಷಣೆ ದೊರೆಯಲಿದ್ದು, ಈ ಶುಲ್ಕವನ್ನು ನಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದಂತೆ ಪಕ್ಷದ ರಾಜ್ಯಗಳಲ್ಲಿರುವ ಶುಲ್ಕಗಳನ್ನು ಪರಿಶೀಲಿಸಿ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!