
ಬೀಷ್ಮನ ಪುತ್ರನಿಗೆ ಒಲಿಯುವುದೇ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ
ಯೂತ್ ಐಕಾನ ನವೀನ್ ಗುಳಗಣ್ಣನವರ್
ಕರುನಾಡ ಬೆಳಗು ಸುದ್ದಿ
ಸುಭಾಸ ಮದಕಟ್ಟಿ
ಯಲಬುರ್ಗಾ, 14-ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಸಿದ್ದತೆ ನಡೆದಿದೆ ಎನ್ನಲಾಗಿದ್ದು. ಬಿಜೆಪಿಯ ಯುವಮುಖಂಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪರಮಾಪ್ತ ನವೀನ ಗುಳಗಣ್ಣ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಘಟನೆ ; ಬಿಜೆಪಿ ಪಕ್ಷ ಎನು ಇಲ್ಲದ ಆ ಕಾಲದಲ್ಲಿ ಕರ್ನಾಟಕ ವಿಧಾನ ಸಭೆ 2008 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಯಲಬುರ್ಗಾ ವಿಧಾನ ಸಭೆಯ ಮಾಜಿ ಶಾಸಕ ದಿ. ಈಶಣ್ಣ ಗುಳಗಣ್ಣನವರ್ ಪ್ರಥಮ ಬಾರಿಗೆ ತಾಲೂಕಿನಲ್ಲಿ ಕಮಲ ಅರಳಿಸಿ ದಾಖಲೆಯ ಗೆಲುವು ಪಡೆದಿದ್ದರು.
ಕೆಳಮಟ್ಟದಿಂದ ಪಕ್ಷ ಬೆಳೆಸಿ,ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಶೂನ್ಯಮಟ್ಟದಲ್ಲಿ ಇದ್ದ ಬಿಜೆಪಿಗೆ ಭದ್ರ ಬುನಾದಿ ಹಾಕಿದರು.ಪ್ರತಿ ಗ್ರಾಮದಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡರು. ಎಲ್ಲರ ಮನಸ್ಸಿನಲ್ಲಿ ನೆಲೆಸಿದರು. ದಿಟ್ಟ ನಿರ್ಧಾರದ ಗಟ್ಟಿ ಮನುಷ್ಯ, ಸಮರ್ಥ ನಾಯಕ, ತಾಲೂಕಿನ ಅಭಿವೃಧ್ಧಿ ಮಾಡಲು ಸಾಕಷ್ಟು ಕನಸು ಕಟ್ಟಿಕೊಂಡಿದ್ದರು. ಹಲವಾರು ಕಾಮಗಾರಿಗಳಿಗೆ ಚಾಲನೆ ಕೊಟ್ಟರು.
ಅದೃಷ್ಟವಶಾತ್ ಅವರು ಅನಾರೋಗ್ಯಕ್ಕೆ ಒಳಗಾದರು.
ತಂದೆಗೆ ತಕ್ಕ ಮಗನಾಗಿ, ಬಂದಂತಹ ಆಪತ್ತುಗಳನ್ನು ಎದರಿಸುವಲ್ಲಿ ನವೀನ್ ಗುಳಗಣ್ಣನವರ್ ಯಶಸ್ವಿಯಾದರು. ಮತ್ತೆ ಪಕ್ಷ ಪುಟಿದೆಳುವಂತೆ ಮಾಡಿದರು. ಅವರಲ್ಲಿಯ ಗುಣಗಳು, ಆಲೋಚನೆಗಳು, ಅಭಿಮಾನಿ ಬಳಗ ಹುಟ್ಟುವಂತೆ ಮಾಡಿದವು. ತಾಲೂಕಿನ ಜನರ ಮನಸ್ಸಿನಲ್ಲಿ ನೆಲೆಸಿದರು. ಆ ವೇಳೆಗೆ ರಾಜಕೀಯದಲ್ಲಿ ದುಮುಕಿದರು. ಚಾಣಾಕ್ಷನ ಗುಣಗಳನ್ನು ಹೊಂದಿದ್ದ ನವೀನ್ ಗುಳಗಣ್ಣನವರ್ ಬಿಜೆಪಿ ಪಕ್ಷ ಕಟ್ಟುವಲ್ಲಿ ಕಾರ್ಯಪ್ರರುತ್ತರಾದರು. ತಾಲೂಕಿನ ತುಂಬ ಸಂಚರಿಸಿ ಪಕ್ಷ ಬಲವರ್ಧನೆಗೆ ಶ್ರಮಿಸಿದರು. ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಬೆಳೆಸುವಲ್ಲಿ ಮಹತ್ವದ
ಪಾತ್ರವಹಿಸಿದರು.
ಅಸಮಾನದಾನ ಹೋಗೆ:ಈ ನಡುವೆ ಆದ ಬೆಳವಣಿಗೆಯಲ್ಲಿ ರಾಜಕೀಯ ದೃವೀಕರಣ ಪರ್ವ ಆರಂಭವಾಯಿತು. ಬಿಜೆಪಿ ನಡೆಯಿಂದ ಬೇಸತ್ತುಗೊಂಡ ಬಿ.ಎಸ್ .ಯಡಿಯೂರಪ್ಪ ಮತ್ತು ಬಿ. ಶ್ರೀರಾಮುಲು ರಾಜ್ಯದಲ್ಲಿ ಕೆಜೆಪಿ ಮತ್ತು ಬಿ ಎಸ್ ಆರ್ ಪಕ್ಷ ಸ್ಥಾಪನೆ ಮಾಡಿದರು. ಬಿಜೆಪಿ ಪಕ್ಷಕ್ಕೆ ಕರೆ ತಂದಿದ್ದ ಗುಳಗಣ್ಣನವರ್ ಕುಟುಂಬಕ್ಕೂ ಮತ್ತು ಆಗಿನ ಎಂ ಎಲ್ ಸಿ ಹಾಲಪ್ಪ ಆಚಾರ್ ಅವರಿಗೆ ವೈಮಸ್ಸು ಉಂಟಾಗಿ ಯಲಬುರ್ಗಾ ಬಿಜೆಪಿಯಲ್ಲಿ ಬಿರುಕು ಪ್ರಾರಂಭವಾಗಿತು.
ಪಕ್ಷ ವಿರೋದಿಯಂತೆ ನವೀನ್ ಗುಳಗಣ್ಣನವರನ್ನು ಬಿಜೆಪಿ ಪಕ್ಷ ಬಿಂಬಿಸತೊಡಗಿತು. ಸ್ವಾಭಿಮಾನಕ್ಕೆ ದಕ್ಕೆಬಾರದೆಂಬಂತೆ 2013 ರ ವಿಧಾನ ಸಭಾ ಚುನಾವಣೆಯಲ್ಲಿ ಗುಳಗಣ್ಣನವರ್ ಕುಟುಂಬ ಬಿ ಎಸ್ ಆರ್ ಪಕ್ಷ ಸೇರುವಂತೆ ಮಾಡಿತು. 2013 ರಲ್ಲಿ ಬಿಜೆಪಿ ಟಕೇಟ್ ತರುವಲ್ಲಿ ಹಾಲಪ್ಪ ಆಚಾರ್ ಅವರು ಯಶಸ್ವಿಯಾದರು. ನೀರಿಕ್ಷೆಯಂತೆ ಬಿಜೆಪಿ ಆಡಳಿತ ವಿರೋಧಿಯಿಂದ ರಾಜ್ಯದಲ್ಲಿ ಕಾಂಗ್ರೈಸ್ ಪಕ್ಷ ಚುನಾವಣೆಯಲ್ಲಿ ಅಧಿಕಾರಕ್ಕೆ ಹಿಡಿಯಿತು.ಚೊಚ್ಚಲ ಚುನಾವಣೆಯಲ್ಲಿ ಎಂ ಎಲ್ ಎ ಸ್ಥಾನಕ್ಕೆ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ನವೀನ್ ಗುಳಗಣ್ಣನವರ್ ಕೂಡ ಸೋತರು. ಆದರೆ ಜನರ ಮನಸ್ಸಿನಲ್ಲಿ ಸೋತು ಗೆದ್ದ ನಾಯಕ ಆಗಿ ಉಳಿದರು.
ಮತ್ತೆ ಮಾತೃ ಪಕ್ಷಕ್ಕೆ ಸೇರ್ಪಡೆ:ಮಹತ್ವದ ಬೆಳವಣಿಗೆಯಲ್ಲಿ ಮತ್ತೆ ನವೀನ್ ಗುಳಗಣ್ಣನವರ್ ಬಿಜೆಪಿಗೆ ಸೇರ್ಪಡೆಗೊಂಡರು. ನಡೆದು ಹೊದ ಕಹಿಘಟನೆಗಳನ್ನು ಮರೆತು, ಮತ್ತೆ ಬಿಜೆಪಿ ಪಕ್ಷದಲ್ಲಿ ಮಿಂಚಿನ ಸಂಚಾರ ಮಾಡಿದರು. ಪಕ್ಷ ನಿಷ್ಠೆ ಮತ್ತು ಪಕ್ಷ ಸಂಘಟನೆಯಲ್ಲಿ ಇವರ ಪಾತ್ರ ಗುರುತಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಸಂಗಣ್ಣ ಕರಡಿ ಮತ್ತು ಜಿಲ್ಲಾಧ್ಯಕ್ಷರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರು ದೊಡ್ಡನಗೌಡ ಪಾಟೀಲರು ಇವರನ್ನು ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು.
ಕೊಟ್ಟ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು, ಪಕ್ಷ ಬಲವರ್ಧನೆಗೆ ಮುಂದಾದರು. ಇನ್ನೂ ತಾಲೂಕಿನಲ್ಲಿ ಹಾಲಪ್ಪ ಆಚಾರ್ ಹಾಗೂ ನವೀನ್ ಗುಳಗಣ್ಣನವರ್ ನಡುವೆ ಇದ್ದ ವೈಮನಸ್ಸು ದೂರ ಆಗಿ, ತಾಲೂಕಿನ ತುಂಬ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡಿ, ಒಗ್ಗಟ್ಟು ಪ್ರದರ್ಶನ ಮಾಡಿ 2018 ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ಬಿಜೆಪಿ ಪಕ್ಷದಿಂದ ಸ್ಫರ್ದಿಸಿ ಗೆಲುವು ಸಾಧಿಸಿದರು. ಹಾಲಪ್ಪ ಆಚಾರ್ ಅವರ ಗೆಲುವಿನಲ್ಲಿ ನವೀನ್ ಗುಳಗಣ್ಣನವರ್ ಪಾತ್ರ ಪ್ರಮುಖವಾಗಿದೆ.
ವರದಾನವಾಗಲಿದೆಯಾ ಪಕ್ಷ ನಿಷ್ಠೆ ?ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವೀಜಯೆಂದ್ರ ಮತ್ತು ನವೀನ್ ಗುಳಗಣ್ಣನವರ್ ನಡುವೆ ಉತ್ತಮ ಸಂಬಂಧವಿದೆ ಎನ್ನಲಾಗಿದೆ. ಸಂಸದ ಸಂಗಣ್ಣ, ಕುಷ್ಟಗಿ ಶಾಸಕ ಮತ್ತು ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ ಮತ್ತು ಜಿಲ್ಲೆಯ ಹಿರಿಯ ಮುಖಂಡರ ಜೋತೆ ಒಡನಾಟ ಇರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನ ದೊರೆಯುವ ಎಲ್ಲ ಲಕ್ಷಣಗಳು ಇವೆ. ಪಕ್ಷ ನಿಷ್ಠೆ ದೃಷ್ಠಿಯಿಂದ ಸಾಕಷ್ಟು ಶ್ರಮಿಸಿರುವ ನವೀನ್ ಗುಳಗಣ್ಣನವರ ಕೊಡುಗೆಗಳು ಅಪಾರ. ಯುವಕರ ಕಣ್ಮಣಿ, ಉತ್ಸಾಯಿ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುವ ಇವರಿಗೆ ರಾಜ್ಯದ ವರಿಷ್ಠರು ಅವಕಾಶ ನೀಡುತ್ತಾರೆ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.
ಹೆಚ್ಚಿದ ಅಭಿಮಾನಿಗಳ ಕೂಗು:ಬಿಜೆಪಿ ಪೈರ್ ಬ್ರಾಂಡ್ ನವೀನ್ ಗುಳಗಣ್ಣನವರ್ ನೇರ ನುಡಿಯ ಮಾತುಗಾರ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ಯ ವ್ಯಕ್ತಿ. ಅವರ ಕೆಲಸಗಳನ್ನು ಪಕ್ಷ ಗುರುತಿಸಲಿ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ . ಇನ್ನೂ ಜಿಲ್ಲೆಯಲ್ಲಿ ನವೀನ್ ಕುಮಾರ್ ಗುಳಗಣ್ಣನವರಿಗೆ ತುಂಬಾ ಅಭಿಮಾನಿ ಬಳಗವಿದೆ. ನಮ್ಮ ನೆಚ್ಚಿನ ನಾಯಕನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಬೇಕು. ಇವರಿಗೆ ಅವಕಾಶ ಕೊಟ್ಟರೆ ಪಕ್ಷ ಇನ್ನಷ್ಠು ಬಲಿಷ್ಠಗೊಳ್ಳಲಿದೆ. ವರಿಷ್ಠರು ವಾಸ್ತವ ಪರಸ್ಥಿತಿ ಅರಿತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಿ ಎನ್ನುವುದು ಕಾರ್ಯಕರ್ತರ ಒತ್ತಾಯವಾಗಿದೆ.
ನವೀನ್ ಗುಳಗಣ್ಣನವರ್ ಸಮರ್ಥ ನಾಯಕ, ಎಲ್ಲ ಜಾತಿಯ ಜನ ಮೆಚ್ಚುವ ಗುಣದವರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸ್ವಭಾವದವರು. ಪಕ್ಷದಲ್ಲಿ ಯುವಕರಿಗೆ ಆಧ್ಯತೆ ಕೊಡುತ್ತಿರುವ ಈ ಸಮಯದಲ್ಲಿ ಪಕ್ಷವನ್ನು ಮುನ್ನೆಡೆಸುವ ಜವಾಬ್ದಾರಿ ಕೊಟ್ಟರೆ ಮುಂದಿನ ಯಲಬುರ್ಗಾ ವಿಧಾನಸಭಾ ಚುನಾವಣೆಗೆ ಮತ್ತು ಜಿಲ್ಲೆಗೆ ದೊಡ್ಡ ಲಾಭವಿದೆ.
– ಪ್ರಕಾಶ್ ಬೊರಣ್ಣನವರ್.
ಯುವ ಮುಖಂಡನವೀನ್ ಗುಳಗಣ್ಣನವರ್ ಜಿಲ್ಲೆಯ ಹಿರಿಯ ರಾಜಕಾರಣಿಗಳ ಜೋತೆ ಮತ್ತು ರಾಜ್ಯದ ವರಿಷ್ಠರ ಜೋತೆ ಉತ್ತಮ ಭಾಂದವ್ಯ ಹೊಂದಿದ್ದು. ತಳ ಮಟ್ಟದಿಂದ ಪಕ್ಷ ಸಂಘಟಣೆ ಮಾಡಿದ್ದಾರೆ. ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟರೆ ಪಕ್ಷ ಬಲಿಷ್ಠಗೊಳ್ಳುತ್ತದೆ –
– ಗೂಳಪ್ಪ ಲಾಲಗೊಂಡರ್,ವಕೀಲರು ಯಲಬುರ್ಗಾ.