
5ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 14- ನಗರದ ಶಿವ ಶಾಂತ ಮಂಗಲ ಭವನದಲ್ಲಿ ಜನೇವರಿ 05 ರಂದು ಕೊಪ್ಪಳ ಜಿಲ್ಲಾ ಅನ್ನಪೂರ್ಣೇಶ್ವರಿ ಅಡುಗೆ ಭಟ್ಟರ ಕ್ಷೇಮಾಭಿವೃದ್ಧಿ ಸಂಘ(ರಿ)ದ 5ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿದೆ.
ಅಂದು ಕೊಪ್ಪಳದ ಶ್ರೀ ವೀರ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ವಿವಾಹ ಜರುಗಲಿದ್ದು. ವೇದಿಕೆ ಕಾರ್ಯಕ್ರಮ ಶಿವಶಾಂತ ಮಂಗಲ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹಾಗೂ ಮೈನಳ್ಳಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಇತರರು ವಹಿಸಲಿದ್ದು.
ಜಿಲ್ಲಾಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಉದ್ಘಾಟಿಸಿಲಿದ್ದಾರೆ. ಭಟ್ಟರ ಸಂಘದ ಅಧ್ಯಕ್ಷ ಮಂಜುನಾಥ ಅರಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅ. ತಿಥಿಗಳಾಗಿ ಸಂಸದ ಸಂಗಣ್ಣ ಕರಡಿ. ಶಾಸಕ ರಾಘವೇಂದ್ರ ಹಿಟ್ನಾಳ. ಮುಖಂಡರಾದ ಮಂಜುಳಾ ಕರಡಿ. ಸಿ.ವಿ ಚಂದ್ರಶೇಖರ್. ರಾಕಶೇಕರ ಆಡುರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದು ಸರ್ವರು ಆಗಮಿಸಿಬೆಂಬಲಿಸಿ ಪ್ರೋತ್ಸಾಹಿಸುವಂತೆ ಸಂಘದ ಪದಾಧಿಕಾರಿಯಾಗಿ ಪ್ರಕಟಣೆಯಲ್ಲಿ ಕೊರಿದ್ದಾರೆ.