5

ಗದಗಿನಲ್ಲಿ ಗವಿ ಶ್ರೀಗಳ ಪ್ರವಚನ ಭಾಗ -೫

ಬದುಕಲಿ ಬದಲಾವಣೆ ಮಾತ್ರ ಸತ್ಯ

ಕರುನಾಡ ಬೆಳಗು ಸುದ್ದಿ
ಗದಗ,  – ಜೀವನದಲ್ಲಿ ಕಷ್ಟಗಳಿಂದ ಯಾರೂ ಮುಕ್ತರಾಗಿಲ್ಲ. ಪರರ ಕಷ್ಟಗಳನ್ನು ಹಾಗೂ ನೋವು, ಅವಮಾನ, ಅಪಮಾನಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಬದುಕಿನಲ್ಲಿ ಬದಲಾವಣೆ ಮಾತ್ರ ಸತ್ಯ ಎನ್ನುವುದನ್ನು ಅರಿತಾಗ ಮಾನವ ಬದುಕು ಸಾರ್ಥಕವಾಗಲಿದೆ ಎಂದು ಕೊಪ್ಪಳ ಗವಿ ಮಠದ ಶ್ರೀ ಗವಿಸದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಸಂಜೆ ಗದಗ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾಗಿರುವ ಆಧ್ಯಾತ್ಮ ಪ್ರವಚನದಲ್ಲಿ ನೆರೆದ ಭಕ್ತರಿಗೆ ಪ್ರವಚನ ನೀಡಿ ಮಾತನಾಡಿದರು. ಜೀವನ ಎಂಬುದು ಹುಲ್ಲಿನ ಮೇಲಿನ ಇಬ್ಬನಿಯಂತೆ. ಬದುಕು ದುಃಖದ ಸರಮಾಲೆಯಾಗಿದೆ. ಮುಳ್ಳನ್ನು ಮರೆತು ಹೂವನ್ನು ಅರೆತು ಬಾಳಿದಾಗ ಸಂತಸ ಕಾಣಬಹುದಾಗಿದೆ. ಶ್ರೀರಾಮ, ಸತ್ಯಹರಿಶ್ಚಂದ್ರ ಮಹಾರಾಜರು ಸಹ ಸಂಕಷ್ಟ, ಸಂದಿಗ್ದತೆ ಅನುಭವಿಸಿದವರೆ ಕಷ್ಟಗಳಿಲ್ಲದ ಮಾನವ ಶವಕ್ಕೆ ಸಮಾನನಾಗಿದ್ದಾನೆ. ಕಷ್ಟಗಳು ಮನುಷ್ಯನಿಗೆ ಶರೀರದಿಂದ, ಮನಸ್ಸಿನಿಂದ ಹಾಗೂ ದೈವದಿಂದ ಬರಲಿವೆ. ಸಹನಶೀಲತೆ, ಸಾಹಸ ಹಾಗೂ ಸಮಾಧಾನದಿಂದ ಬದುಕು ಸಾಗಿಸುವತ್ತ ಗಮನ ಹರಿಸಬೇಕಿದೆ.

ಜಗದಲಿ ಕಷ್ಟ, ನೋವು, ಮಾನ, ಅಪಮಾನಗಳಿಂದ ನಿಂದನೆಗಳನ್ನು ತಾಳ್ಮೆಯಿಂದ ಅನುಭವಿಸಿದವನೇ ತಪಸ್ವಿಯಾಗಲಿದ್ದಾನೆ. ಜೀವನದಲ್ಲಿ ಏಳುಬೀಳುಗಳು, ಸೋಲು-ಗೆಲುವುಗಳು, ಬಡತನ, ಶ್ರೀಮಂತಿಕೆ ಶಾಶ್ವತವಲ್ಲ ಎಂದರಿತಾಗ ಸಾರ್ಥಕ ಸಾಧ್ಯವಾಗಲಿದೆ. ಬದಲಾವಣೆ ಮಾತ್ರ ಸತ್ಯ. ಬದಲಾಗುತ್ತದೆ ಎಂದು ಅರಿತು ನಡೆದಾಗ ಸುಖಿಜೀವನ ಸಾಧ್ಯವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!