
ರಸ್ತೆಯಲ್ಲಿ ಸಂಚರಿಸುವವರನ್ನ ದೇವರೇ ಕಾಪಾಡಬೇಕು
ಹೆರಿಗೆಯಾಗುತ್ತಿಲ್ಲವೇ ಕಿನ್ನಾಳಗೆ ಬನ್ನಿ…..!
ಕರುನಾಡ ಬೆಳಗು ಸುದ್ದಿ
ಸಂತೋಷ ಬಿ, ದೇಶಪಾಂಡೆ
ಕೊಪ್ಪಳ, ೧೪- ತಾಲೂಕಿನ ಕಿನ್ನಾಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ತುಂಬಾ ತಗ್ಗು-ದಿನ್ನೆಗಳಿಂದ ಕೂಡಿದ್ದು ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ಥರವಾಗಿದೆ.
ಜಿಲ್ಲಾ ಕೇಂದ್ರದಿಂದ ಕೇವಲ ೧೧ ಕಿ.ಮೀ. ದೂರದಲ್ಲಿ ಇರುವ ಕಿನ್ನಾಳ ಗ್ರಾಮ ತನ್ನ ಕಲೆಯ ಮೂಲಕ ರಾಷ್ಟ್ರದಲ್ಲಿ ಉತ್ತಮ ಹೆಸರು ಮಾಡಿದೆ, ಈಗ ಅಲ್ಲಿಗೆ ತೆರಳುವ ರಸ್ತೆಯೂ ಕೂಡ ಸಂಪರ‍್ಣ ಹದಗೆಟ್ಟ ರಸ್ತೆ ಎಂಬ ಹೆಸರನ್ನು ಹೊತ್ತುಕೊಂಡಿದೆ.
ಕಿನ್ನಾಳ ಗ್ರಾಮದ ರಸ್ತೆಯ ಮೂಲಕ ಮಂಗಳೂರ, ಕದ್ರಳ್ಳಿ , ಬುಡಶೆಟ್ನಾಳ ಸೇರಿದಂತೆ ಹತ್ತಾರು ಗ್ರಮಗಳಿಗೆ ಸಂರ‍್ಕ ಒದಗಿಸುವ ಈ ರಸ್ತೆ ಸಂಪೂರ್ವಾಣವಾಗಿ ಹದಗೆಟ್ಟಿದೆ ವಾಹನ ಸವಾರರಿಗೆ ಸಂಚಾರ ಮಾಡಲು ತಲೆನೋವಾಗಿ ಪರಿಣಮಿಸಿದೆ. ಈ ಗ್ರಾಮಕ್ಕೆ ಪ್ರಸ್ತುತ ಸುಗಮ ಸಂಚಾರ ಮಾಡಲು ಪರದಾಡುವಂತಾಗಿದ್ದು, ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ನಿರಂತರವಾಗಿ ಆಗ್ರಹಿಸುತ್ತಿದ್ದಾರೆ.
ಅಪಘಾತ: ನಿತ್ಯವೂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗಾಗಿ ಹಾಗೂ ಸಾವಿರಾರು ಬಹುತೇಕ ಜನರು ಉದ್ಯೋಗ ಮತ್ತು ನಾನಾ ಕೆಲಸಗಳಿಗಾಗಿ ಕೊಪ್ಪಳಕ್ಕೆ ಆಗಮಿಸುತ್ತಿದ್ದು, ಹದಗೆಟ್ಟ ರಸ್ತೆಯಲ್ಲೇ ಪ್ರಾಣ ಭಯದಿಂದ ಸಂಚರಿಸುವಂತಾಗಿದೆ. ರಸ್ತೆ ಹದಗೆಟ್ಟಾಗಿನಿಂದ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ.
ದೇವರ ಮುರ್ಗತಿಗಳು, ಗೊಂಬೆ ತಯಾರಿಕೆ, ಚಿತ್ರಕಲೆ, ನೇಕಾರಿಕೆ, ಮಿನಿ ಜಲಾಶಯ ವೀಕ್ಷಣೆ ಮತ್ತು ಅಧ್ಯಯನಕ್ಕಾಗಿ ವಿದೇಶಿಗರು, ನಾನಾ ಕಡೆಯಿಂದ ವಿಶ್ವವಿದ್ಯಾಲಯ, ಮಹಾವಿದ್ಯಾಲಯಗಳ ವಿದ್ಯರ‍್ಥಿಗಳು, ಸಂಶೋಧಕರು ಆಗಮಿಸುತ್ತಾರೆ. ರಸ್ತೆಯಲ್ಲಿನ ಗುಂಡಿಗಳು, ಕಿತ್ತು ಅಲ್ಲಲ್ಲಿ ಹೋಗಿರುವ ಡಾಂಬರ್‌ನಿಂದಾಗಿ ಭೀತಿಯಲ್ಲೇ ಸಾಗಬೇಕಿದೆ.
ಇ ನ್ನು ಜಿಲ್ಲಾ ಕೇಂದ್ರದಿಂದ ಕೇವಲ ೧೦ ಕಿ.ಮೀ ದೂರದಲ್ಲಿದ್ದು, ಗ್ರಾಮವನ್ನು ತಲುಪಲು ರ‍್ಧ ಗಂಟೆಗೂ ಹೆಚ್ಚು ಸಮಯ ಬೇಕು. ಈ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಜಿಲ್ಲಾ ಹಾಗೂ ತಾಲೂಕು ಕೇಂದ್ರ ಕೊಪ್ಪಳದಿಂದ ಹತ್ತಿರ ಇರುವ ಕಿನ್ನಾಳ ಗ್ರಾಮ ಗಂಗಾವತಿ ವಿಧಾನಸಭಾ ಮತಕ್ಷೇತ್ರಕ್ಕೊಳಪಡುತ್ತದೆ. ಹೀಗಾಗಿ ಈ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮದಿಂದ ೩ ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗಿದ್ದು, ಅದು ಕೂಡ ಈಗ ಹದಗೆಡುತ್ತಿದೆ. ಇನ್ನು ಉಳಿದ ರಸ್ತೆ ಅಭಿವೃದ್ಧಿ ಕೂಡ ಮರಿಚಿಕೆಯಾಗಿದ್ದು ಎಂಬುದು ಗ್ರಾಮಸ್ಥರ ಅಳಲು.
ರಸ್ತೆ ಸಂಪೂರ್ಣ ಹದಗೆಟ್ಟಿದೆ ಮಹಿಳೆಯರು, ವಯಸ್ಸಾದವರು, ಮಕ್ಕಳು ಬಸ್‌ನಲ್ಲಿ ಸಹ ಸಂಚರಿಸಲು ಕಷ್ಟಕರವಾಗಿದೆ. ಹಳ್ಳಿಯ ಮಾತಿನಂತೆ ಉಚಿತ – ಖಚಿತ ಹೆರಿಗೆಯಾಗಬೇಕೇ ಕಿನ್ನಾಳಗೆ ಬನ್ನಿ ಎನ್ನುವಂತಾಗಿದೆ. ಕಿನ್ನಾಳ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ. ಈ ರಸ್ತೆ ಸಮಸ್ಯೆಯಿಂದ ನಾವು ತಲೆತಗ್ಗಿಸುವಂತಾಗಿದೆ –
ಮನೋಹನರಾವ ದೇಸಾಯಿ
ಮಾಜಿ ಗ್ರಾ, ಪಂ ಅಧ್ಯಕ್ಷರು. ಕಿನ್ನಾಳ