
ವಿವಾದಿತ ಹಿಟ್ನಾಳ ಟೋಲ್ ಪ್ಲಾಜಾ
ನಿತ್ಯ ಅಂದಾಜು ₹20.95 ಲಕ್ಷ ಟೋಲ್ ಸಂಗ್ರಹ
ಕರುನಾಡ ಬೆಳಗು ಸುದ್ದಿ
ಸಂತೋಷ ಬಿ, ದೇಶಪಾಂಡೆ
ಕೊಪ್ಪಳ, ೧೪- ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಟ್ನಾಳ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ನಿತ್ಯ ಅಂದಾಜು ₹20.95 ಲಕ್ಷ ಟೋಲ್ ಸಂಗ್ರಹವಾಗುತ್ತಿದೆ ಎಂಭ ಮಾಹಿತಿ ಬಹಿರಂಗ ವಾಗಿದ್ದು ವಿವಾದಿತ ಟೋಲ್ ಪ್ಲಾಜಾ ದಿಂದ ಜನ ಬೆಸತ್ತಿದ್ದು ಇದಕ್ಕೆ ತಕ್ಕ ಉತ್ತರ ಸಿಕ್ಕಂತಾಗಿದೆ.
ಜಿಲ್ಲೆಯ ಜನರ ಬಹುದಿನಗಳ ಆರೋಪ ನಿಜವಾಗಿದ್ದು ಸ್ಥಳೀಯರು ಟೋಲ್ ನಿಯಮವನ್ನು ಇಲ್ಲಿ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಭ ಆರೋಪ ಸತ್ಯವಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯೆ ಕೊಪ್ಪಳದ ಹೇಮಲತಾ ನಾಯಕಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಯೊಳಿ ನೀಡಿದ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಅವರ ಉತ್ತರದ ಪ್ರಕಾರ ರಾಷ್ಟ್ರೀಯ ಹೆದ್ದಾರಿ 50ರ ವ್ಯಾಪ್ತಿಯ 63 ಕಿ.ಮೀ.ನಷ್ಟು ಕುಷ್ಟಗಿಯಿಂದ ಹೊಸಪೇಟೆ ಭಾಗದಲ್ಲಿ ಹಾದುಹೋಗುತ್ತದೆ. ಹನುಗುಂದ ಹೊಸಪೇಟೆ ಹೈವೆ ಪ್ರವೈಟ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿದ್ದು, 2029ರ ತನಕ ಇದು ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈ ಮಾರ್ಗದ ಅನತಿ ದೂರದ ಅಂತರದಲ್ಲಿ ಕೊಪ್ಪಳ–ಹೊಸಪೇಟೆ ಮಾರ್ಗ ಮತ್ತು ಹೊಸಪೇಟೆ–ಕುಷ್ಟಗಿ ಮಾರ್ಗದಲ್ಲಿ ಟೋಲ್ಗಳಿವೆ. ಅತ್ಯಂತ ಕಡಿಮೆ ಅಂತರದಲ್ಲಿ ಮೂರು ಟೋಲ್ಗಳಿದ್ದು, ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದು ಅವೈಜ್ಞಾನಿಕ ಎನ್ನುವ ಅಂಶ ಸರ್ಕಾರದ ಗಮನಕ್ಕೆ ಇದೆಯೇ ಎನ್ನುವ ಹೇಮಲತಾ ನಾಯಕ ಅವರ ಪ್ರಶ್ನೆಗೆ ಸರ್ಕಾರ ‘ಹಿಟ್ನಾಳ, ಶಹಾಪುರ ಮತ್ತು ವಣಗೇರಿ ಬಳಿ ಟೋಲ್ಗಳಿವೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ₹60.11 ಕೋಟಿ ಮೊತ್ತದಲ್ಲಿ ಟನಲ್ ನಿರ್ಮಿಸಿರುವ ಕಾರಣ 2008ರ ಟೋಲ್ ಶುಲ್ಕ ಅಧಿಸೂಚನೆಯಂತೆ ಟೋಲ್ ಸಂಗ್ರಹ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಟೋಲ್ ಸಂಗ್ರಹದ ಕಂಪನಿಯ ಕ್ರಮವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
——-
ಹಿಟ್ನಾಳ ಬಳಿ ಇರುವ ಟೋಲ್ ಪ್ಲಾಜಾ ಅವೈಜ್ಞಾನಿಕವಾಗಿದೆ ಅದನ್ನು ಸರ್ಕಾರ ತಕ್ಷಣ ತೇರವು ಗೊಳಿಸಬೇಕು , ಈ ಟೋಲ್ ಹಗಲೂ ದರೊಡೆ ಮಾಡುತ್ತಿದ್ದು ಸರ್ಕಾರ ತಕ್ಷಣ ಕ್ರಮ ಕೈಗೋಳ್ಳಬೇಕು – ಶಿವಕುಮಾರ್ ಕುಕನೂರ
ಬಿಜೆಪಿ ಮುಖಂಡ