
ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿರುವ ಮೋಸ
ಕ್ರಮ ವಹಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ೧೫- ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ರೈತರಿಗೆ ತೂಕಗಳಲ್ಲಿ ಮಾಡುತ್ತಿರುವ ಮೋಸದ ಬಗ್ಗೆ ಸಂಬಂಧಿತ ಸಾಕಾಧಿಕಾರಿಗಳಿಗೆ ಕ್ರಮ ವಹಿಸಲು ಆದೇಶ ನೀಡಬೇಕೆಂದು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಅದ್ವರದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಮಾತನಾಡುತ್ತಾ ಅನುದಿನ ಬಳ್ಳಾರಿ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ ಜಿಲ್ಲಾ ಅಲ್ಲದೇ ಬೇರೆ ಪ್ರಾಂತಗಳಿಂದ ಮತ್ತು ಗಡಿ ಭಾಗದಲ್ಲಿರುವ ಆಂಧ್ರ ರೈತರು ಕಷ್ಟಪಟ್ಟು ಬೆಳೆಸಿರುವ ಧಾನ್ಯಗಳನ್ನು ಮಾರಲು ಬರುತ್ತಿದ್ದಾರೆ ಎಂದರು. ಆದರೆ ಇಲ್ಲಿ ತೂಕದಲ್ಲಿ, ಧಾನ್ಯದ ಧರೆಯಲ್ಲಿ ಮೋಸವಾಗುತ್ತಿದೆ ಎಂದರು.
ಇದೇ ತಿಂಗಳು 11ನೇ ತಾರೀಖಿನಿಂದ 13ನೇ ತಾರೀಕುವರೆಗೆ ಮೂರು ದಿನಗಳ ಕಾಲ ಮಾರುಕಟ್ಟೆ ಬಂದ್ ಎಂದು ಹೇಳಿ ಅತಿ ಕಡಿಮೆ ಬೆಲೆಯಲ್ಲಿ ಟೆಂಡರ್ ಅನ್ನು ಹಾಕಿದ್ದಾರೆ ಎಂದರು. ಈ ರೀತಿ ಜೋಳ ಭತ್ತ ರಾಗಿ ಮೆಕ್ಕೆಜೋಳ ಟೆಂಡರ್ ಹಾಕುವ ಮೂಲಕ 1500 ತೆಗೆದುಕೊಳ್ಳುತ್ತಿದ್ದಾರೆ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಶೇಂಗಾ 8500 ರೂಪಾಯಿ ಕ್ವಿಂಟಲ್ ಗೆ ಬೆಲೆ ಇದ್ದರೆ, ಇಲ್ಲಿ 7500 ಟೆಂಡರ್ ಹಾಕುತ್ತಾರೆ.
ನಿನ್ನ ಕಡ್ಲೆ ವ್ಯಾಪಾರಸ್ಥರು ಮಾಲು ಒಣಗಬೇಕು ಎಂತಾ ನೆಪ ಹೇಳಿ ಟೆಂಡರ್ ಹಾಕದೆ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದರು. ರೈತರಿಗೆ ಅನ್ಯಾಯ ಮಾಡುತ್ತಿರುವ ವಿರುದ್ಧ ಕೂಡಲೇ ಕಾನೂನು ರೀತಿ ಕ್ರಮ ವೈಸಲು ಆದೇಶ ನೀಡಬೇಕೆಂದು ಮನವಿಯಲ್ಲಿ ಹೇಳಿಕೊಂಡರು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಕೊಳಗಲ್ಲು ತಿಮ್ಮಪ್ಪ, ತಾಲೂಕ ಅಧ್ಯಕ್ಷ ಎರ್ರಿಸ್ವಾಮಿ, ಖಜಾಂಜಿ, ಮಾರಣ್ಣ, ಸಂಚಾಲಕ ಜಗನ್ನಾಥ್ ಸೇರಿದಂತೆ ಹಲವಾರು ಮಂದಿ ರೈತರು ಪಾಲ್ಗೊಂಡಿದ್ದರು.