4ad34d4d-4441-41af-aba1-95c6e33b6fc0

ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ 

    ಪಿ ಡಿ ಓ ವೀರಭದ್ರಪ್ಪ ಮೂಲಿಮನಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 15 – ಪ್ತತಿಯೂಬ್ಬರು ಹೆಣ್ಣು ಮತ್ತು ಗಂಡು ಎಂಬ ಯಾವುದೇ ಬೇಧ ಭಾವ ಮರೆತು ಎಲ್ಲರು ಪ್ರತಿಯೊಂದು ಜೀವಕ್ಕೆ ಬದುಕುವ ನೆಲೆ ತೋರಿಸಬೇಕು ಹೆಣ್ಣು ಮಗುವಾಗಲ್ಲಿ ಗಂಡುಮಗುವಾಗಲ್ಲಿ ಜೀವ ಒಂದೇ ಎಂದು ಗ್ರಾಮದ ಗ್ರಾಂ ಪಂ ಪಿ ಡಿ ಓ ವೀರಭದ್ರಗೌಡ ಮೂಲಿಮನಿ ಅವರು ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ತ್ರಿಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಸಂಜೀವಿನಿ ಮಹಿಳಾ ಒಕ್ಕೂಟದ ಗ್ರಾಂ ಪಂ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಲಿಂಗತ್ವಾಧಾರಿತ ದೌರ್ಜನ್ಯ ವಿರುದ್ದ ಏರ್ಪಡಿಸಿದ ರಾಷ್ಟ್ರೀಯ ಅಭಿ ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ ಅವರನ್ನು ಗೌರವಿಸಬೇಕು ಮಹಿಳೆಯರ ಮೇಲೆ ಶೋಷಣೆ ಪ್ರಾಚೀನ ಕಾಲದಿಂದ ನಡೆದಿದೆ ಮಹಿಳೆಯರು ಹೆಚ್ಚು ಹೆಚ್ಚು ವಿದ್ಯಾಭ್ಯಾಸದ ಕಡೇ ಗಮನ ಹರಿಸುವ ಮೂಲಕ ಉತ್ತಮ ಶಿಕ್ಷಣವಂತರಾಗಿ ಆಧುನಿಕ ಯುಗದಲ್ಲಿ ಶಿಕ್ಷಣ ಪಡೆಯುವದರ ಮೂಲಕ ಜಾಗೃತರಾಗಬೇಕೆಂದು ತಿಳಿಸಿದರು.

ಲಿಂಗದ ಆಧಾರದ ಮೇಲೆ ಭಯ ತಾರತಮ್ಯ ಮತ್ತು ಹಿಂಸಾಚಾರ ವಿಲ್ಲದೆ ಜೀವನಕ್ಕೆ ರಚನಾತ್ಮಕ ಅಡತಡೆಗಳನ್ನು ಪರಿಹರಿ ಸುವ ಮೂಲಕ ಮಹಿಳೆಯರು ಮತ್ತು ಲಿಂಗತ್ವ ವೈವಿಧ್ಯ ವ್ಯಕ್ತಿಗಳ ಹಕ್ಕುಗಳನ್ನು ಸಂಸ್ಥೆಗಳ ಮೂಲಕ ಮುನ್ನೆಡೆಸುವುದು ಎಂಬ ಉದ್ದೇಶ ದಿಂದ ಲಿಂಗತ್ವ ದೌರ್ಜನ್ಯದ ವಿರುದ್ಧ ಅಭಿಯಾನ    ಆರ೦ಭಿಸಲಾಗಿದೆ  ಎಂದರು.

ಸಂಘದ ಆರ್ಥಿಕ ಚಟುವಟಿಕೆ ಕುರಿತು ವೀರಭದ್ರಪ್ಪ ನಿಡಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. 8 ವರ್ಷಗಳಲ್ಲಿ 77 ಗುಂಪುಗಳು 3.5 ಕೋಟಿ ರೂ ವ್ಯವಹಾರ ಮಾಡಿ 22 ಲಕ್ಷ ರೂ. ಲಾಭಗಳಿಸಿವೆ ಎಂದರು.ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಚನ್ನಮ್ಮ ಗರ್ಭಾವಸ್ಥೆಯಲ್ಲಿ ಪೌಷ್ಠಿಕತೆ, ದೈಹಿಕ ಸುಸ್ಥಿರತೆಯ ಜ್ಞಾನ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು ಮತ್ತು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರು.
ಬಸವಜ್ಯೋತಿ ಶಾಲೆಯ ಅಧ್ಯಕ್ಷ ಶಿವಶರಣಪ್ಪ ಬಳಿಗಾರ 12 ನೇ ಶತಮಾನದಿಂದಲೇ ಲಿಂಗತಾರತಮ್ಯ ನಿವಾರಣೆಗೆ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಅವರು ಧ್ವನಿ ಎತ್ತಿದ್ದಾರೆ. ಮೊಲೆ ಮುಡಿ ಬಂದರೆ ಹೆಣ್ಣೆಂಬರುಗಡ್ಡ ಮೀಸೆ ಬಂದರೆ ಗಂಡೆಂಬರು ನಡಿವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಕಾಣಾ ರಾಮಾನಾಥ ಎಂದು ಜೇಡರ ದಾಸಿಮಯ್ಯನ ವಚನ ಉಲ್ಲೇಖಿಸಿದರು.
ಹೆಣ್ಣು ಹೊನ್ನು ಮಣ್ಣು ಮಾಯೆ ಅಲ್ಲ ಮನದ ಮುಂದಣೆ ಆಸೆಯೇ ಮಾಯೆ ಎಂಬ ಅಲ್ಲಮನ ವಚನ ಹೇಳಿ ಇತ್ತೀಚಿಗೆ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯಾಕಾಂಡ ನಡೆದದ್ದು ದುರಂತ ಕತೆ ಎಂದರು.ಇಂದಿನ ಯುಗದಲ್ಲಿ ಯಾವ ಪುರುಷರಗಿಂತ ಮಹಿಳೆಯರು ಕಡಿಮೆಯಿಲ್ಲ ಇಂದು ಪ್ರತಿಯೊಂದು ಪರೀಕ್ಷೆಯಲ್ಲಿ ಬಾಲಕಿಯರೆ ಮೇಲಗೈ ಸಾಧಿಸುತ್ತಿದ್ದಾರೆ. ಸಮಾನ ಶಿಕ್ಷಣ ನೀಡಿ ಅವರಿಗೂ ಸಮಾನ ಸ್ಥಾನಮಾನ ನೀಡಬೇಕಿದೆ ಎಂದರು.
ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ ರಂಗೋಲಿ ಸ್ಪರ್ದೆ,ಪ್ರೌಢಶಾಲಾ ಬಾಲಕಿಯರಿಗೆ ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿತ್ತು ಆ ಸ್ಪಧ೯ಯಲ್ಲಿ ವಿಜೇತರಿಗೆ ಅಧ್ಯಕ್ಷರಾದ ಮೆಹರುನ್ನಿಸಾ ಬಹುಮಾನ ವಿತರಿಸಿದರು.ಮಹಿಳಾ ಒಕ್ಕೂಟದ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಗ್ರಾ.ಪಂ ಅಧ್ಯಕ್ಷೆ ಮಮತಾಜಬಿ ಹಿರೇಮನಿ ಅವರು ಅಧ್ಯಕ್ಷತೆ ವಹಿಸಿದರು ಈ ಸಂದರ್ಭದಲ್ಲಿ ಬಸಪ್ಪ ಅಕ್ಕಿ ಹಿರಿಯ ಗ್ರಾ.ಪಂ ಸದಸ್ಯರು, ಪೂರ್ಣಿಮಾ ಸಾರಂಗಮಠ, ಅಂಗನವಾಡಿ ಕಾರ್ಯಕರ್ತರು, ಮತ್ತು ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಒಕ್ಕೂಟದ ಸದಸ್ಯರು, ಮತ್ತು ಇತರರು ಭಾಗವಹಿಸಿದ್ದರು. ಭೀಮವ್ವ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!