15 TVR 01

ಆಕಸ್ಮಿಕ ಬೆಂಕಿ : ಅಪಾರ ಹಾನಿ

ಕರುನಾಡ ಬೆಳಗು ಸುದ್ದಿ
ತಾವರಗೇರಾ, ೧೫- ಸಮೀಪದ ಸಂಗನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸಂಗನಾಳ ಗ್ರಾಮದಲ್ಲಿ ಆಕಸ್ಮೀಕ ಬೆಂಕಿ ಹತ್ತಿ ಮನೆಯಲ್ಲಿನ ನಿತ್ಯ ಉಪಯೋಗದ ವಸ್ತುಗಳು ಸುಟ್ಟು ಅಪಾರ ಹಾನಿಯಾಗಿದೆ.
ಸಂಗನಾಳ ಗ್ರಾಮದ ನಿರುಪಾದೆಪ್ಪ ರಾಜಪ್ಪ ದಾಸರ ಇವರ ಮನೆಯಲ್ಲಿ ಗುರುವಾರ ಬೆಳಗಿನ ಜಾವ ೩-೦೦ ಗಂಟೆಗೆ ಆಕಸ್ಮಿಕ ಬೆಂಕಿತಗುಲಿ ಮನೆಯಲ್ಲಿನ ನಿತ್ಯ ಉಪಯೋಗಿ ಬಟ್ಟೆಗಳು,ಆಹಾರ ಧಾನ್ಯಗಳು, ಮನೆಯಲ್ಲಿ ಉಪ ಜೀವನಕ್ಕಾಗಿ ಬಟ್ಟೆ ಹೊಲಿಯುವ ಹೊಲಿಗೆ ಯಂತ್ರ,ಹೊಲಿಯಲು ಕೊಟ್ಟ ಹೊಸ ಬಟ್ಟೆಗಳು ಹಿಗೆ ಮನೆಯಲ್ಲಿನ ಎಲ್ಲವಸ್ತುಗಳು ಸುಟ್ಟು ಕರಕಲಾಗಿವೆ.
ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಹಿರಿಯರ ಸಮಕ್ಷಮ ಪಂಚನಾಮೆ ಮಾಡಿ ಸುಮಾರು ೩ರಿಂದ ೩-೫೦ ಲಕ್ಷದವರೆಗೆ ಸಾಮಗ್ರಿಗಳು ಸುಟ್ಟು ಹಾಳಾಗಿವೆ ಎಂದು ಪಂಚನಾಮೆಯಲ್ಲಿ ಭಾಗವಹಿಸಿದ ಪಂಚರು ಹಾಗು ಗ್ರಾಮಸ್ಥರ ಅಭಿಪ್ರಯದ ಮೇರೆಗೆ ಪಂಚನಾಮೆ ಮಾಡಲಾಯಿತು, ಮುಂದಿನ ಪರಿಹಾರಕ್ಕಾಗಿ ಹಾಗು ಸುಕ್ತ ಕ್ರಮಕ್ಕಾಗಿ ಪರಿಹಾರ ವಿಕೋಪ ನಿಧಿ ಅಧಿಕಾರಿಗಳಾದ ಮಾನ್ಯ ತಹಶೀಲ್ದಾರ ಕುಷ್ಟಗಿ ಇವರಿಗೆ ಮಾಹಿತಿ ಗ್ರಾಮ ಪಂಚಾಯತ ಮುಖಾಂತರ ಸಲ್ಲಿ ಸಲು ತಿಮಾನಿಸಿ ಕಳಿಸಿಕೊಡಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಸರ್ವ ಸದಸ್ಯರ ಸಮಕ್ಷಮದಲ್ಲಿ ೫೦೦೦ರೂ ಚೆಕ್ಕನ್ನು ಪರಿ ಹಾರ ರೂಪವಾಗಿ ನೀಡಲಾಯಿತು ಎಂದು ಗ್ರಾ.ಪಂ.ಕಾರ್ಯದರ್ಶಿ ಗುರಪ್ಪನಾಯಕ ತಿಳಿಸಿದ್ದಾರೆ.ಅಧ್ಯಕ್ಷರಾದ ರೇವಣಪ್ಪ ಉಪಾಧ್ಯಕ್ಷರು ರುದ್ರಮ್ಮ ಹಾಗು ಸದಸ್ಯರಾದ ಶರಣಪ್ಪ ಹಂಚಿನಾಳ, ಮಹೇಶ ಪಾಟೀಲ್, ವೆಂಕೋಬ,ಸಂಗಪ್ಪ ಮೇಟಿ,ನಡುಗಡ್ಡೆಪ್ಪ, ಪರಶುರಾಮ ಇದ್ದರು.

 

ತಾವರಗೇರಾ ಸಮೀಪದ ಸಂಗನಾಳ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯೀಂದ ಹಾನಿಗೊಳಗಾದ ನಿರುಪಾದೆಪ್ಪ ರಾಜಪ್ಪ ದಾಸರ ಇವರಿಗೆ ಗ್ರಾ.ಪಂ.ವತಿಯಿಂದ ಐದು ಸಾವಿರ ಪರಿಹಾರ ಚೆಕ್ ನೀಡಿದರು.

Leave a Reply

Your email address will not be published. Required fields are marked *

error: Content is protected !!